ಆ್ಯಪ್ನಗರ

ಚೀನಾ ಸ್ಮಾರ್ಟ್‌ಫೋನ್ ತಯಾರಿ ಕಂಪೆನಿಗಳಿಗೆ ನೋಟಿಸ್

ಚೀನಾದ ಸ್ಮಾರ್ಟ್‌ಫೋನ್ ತಯಾರಿ ಕಂಪೆನಿಗಳಾದ ವಿವೋ, ಒಪ್ಪೋ, ಶಿಯೋಮಿ, ಜಿಯೋನಿ ವಿರುದ್ಧ ಕೇಂದ್ರ ಸರಕಾರ ನೋಟೀಸ್ ಜಾರಿ ಮಾಡಿದೆ. ಎರಡೂ ದೇಶಗಳ ನಡುವೆ ಈಗ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಚೀನಾ ಮೂಲದ ಈ ಕಂಪೆನಿಗಳು ಹ್ಯಾಕಿಂಗ್ ಮಾಡುವ ಭೀತಿಯಿದ್ದು ಸರಕಾರ ಈ ನೋಟಿಸ್ ಜಾರಿ ಮಾಡಿದೆ.

ಟೈಮ್ಸ್ ಆಫ್ ಇಂಡಿಯಾ 16 Aug 2017, 4:41 pm
ಹೊಸದಿಲ್ಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಿ ಕಂಪೆನಿಗಳಾದ ವಿವೋ, ಒಪ್ಪೋ, ಶಿಯೋಮಿ, ಜಿಯೋನಿ ವಿರುದ್ಧ ಕೇಂದ್ರ ಸರಕಾರ ನೋಟೀಸ್ ಜಾರಿ ಮಾಡಿದೆ. ಎರಡೂ ದೇಶಗಳ ನಡುವೆ ಈಗ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಚೀನಾ ಮೂಲದ ಈ ಕಂಪೆನಿಗಳು ಹ್ಯಾಕಿಂಗ್ ಮಾಡುವ ಭೀತಿಯಿದ್ದು ಸರಕಾರ ಈ ನೋಟಿಸ್ ಜಾರಿ ಮಾಡಿದೆ.
Vijaya Karnataka Web govt fears chinese phonemakers may be stealing info sends them notice
ಚೀನಾ ಸ್ಮಾರ್ಟ್‌ಫೋನ್ ತಯಾರಿ ಕಂಪೆನಿಗಳಿಗೆ ನೋಟಿಸ್


ಚೀನಾ ಮೇಡ್ ಸ್ಮಾರ್ಟ್‍ಫೋನ್‌ಗಳನ್ನು ಬಳಸುತ್ತಿರುವ ಗ್ರಾಹಕರ ಅತ್ಯಮೂಲ್ಯ ಮಾಹಿತಿಯಾದ ಕಾಂಟ್ಯಾಕ್ಟ್ ಸಂಖ್ಯೆಗಳು, ಎಸ್‍ಎಂಎಸ್‌ಗಳನ್ನು ಈ ಕಂಪೆನಿಗಳು ಕದಿಯುವ ಭೀತಿ ಇರುವ ಕಾರಣ ಆಯಾ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಚೀನಾ ಮೂಲ ಅಲ್ಲದ ಆ್ಯಪಲ್, ಸ್ಯಾಮ್‌ಸಂಗ್ ಹಾಗೂ ಭಾರತೀಯ ಮೂಲದ ಮೈಕ್ರೋಮ್ಯಾಕ್ಸ್ ಸೇರಿದಂತೆ ಒಟ್ಟು 21 ಕಂಪೆನಿಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೊಟೀಸ್ ಜಾರಿ ಮಾಡಿದೆ.

'ಭದ್ರತಾ ಲೋಪಗಳೇನಾದರೂ ಇದ್ದಲ್ಲಿ ಈ ಕಂಪೆನಿಗಳು ಆಗಸ್ಟ್ 28ರೊಳಗೆ ಸರಿಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಈ ಸಂಬಂಧ ಆಡಿಟ್ ನಿರ್ವಹಿಸಿ ಭದ್ರತಾ ಲೋಪಗಳ ಬಗ್ಗೆ ಪರೀಕ್ಷಿಸಲಾಗುತ್ತದೆ' ಎಂದು ಅಧಿಕೃತ ಮೂಲಗಳು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿವೆ.

'ಒಂದು ವೇಳೆ ಉಲ್ಲಂಘನೆಯಾಗಿದ್ದಲ್ಲಿ, ಆಯಾ ಕಂಪೆನಿಗಳ ವಿರುದ್ಧ ದಂಡ ವಿಧಿಸಲಾಗುತ್ತದೆ' ಎಂದಿವೆ ಮೂಲಗಳು. ಚೀನಾದಿಂದ ಭಾರಿ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್‌ ಹಾಗೂ ಮಾಹಿತಿ ತಂತ್ರಜ್ಞಾನ ಉತ್ಪನ್ನಗಳು ಆಮದಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಮಾಹಿತಿ ಸೋರಿಕೆ ಆತಂಕಗಳ ಕುರಿತು ಸರಕಾರ ಪರಾಮರ್ಶೆ ನಡೆಸಿದೆ. (ಚೀನೀ ಐಟಿ ಸರಕುಗಳ ಆಮದು: ಸರಕಾರದ ಪರಾಮರ್ಶೆ)


Govt fears Chinese phonemakers may be stealing info, sends them notice

The government has issued a notice to smartphone makers, including Chinese companies such as Vivo, Oppo, Xiaomi and Gionee, over hacking fears.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ