ಆ್ಯಪ್ನಗರ

ಹಳೆಯ ವಾಹನಗಳಿಗೆ ಬೀಳಲಿದೆ ಬ್ರೇಕ್‌

2000 ಇಸವಿಗೂ ಹಿಂದಿನ ಹಳೆಯ ವಾಹನಗಳು (ಅದರಲ್ಲೂ ಕಮರ್ಷಿಯಲ್‌ ವೆಹಿಕಲ್ಸ್‌) ನಿಮ್ಮ ಬಳಿ ಇವೆಯೇ? ಸದ್ಯದಲ್ಲಿಯೇ ಅವುಗಳಿಗೆ ಹೆಚ್ಚಿನ ತೆರಿಗೆ ತೆರುವುದು ಅನಿವಾರ್ಯವಾಗಲಿದೆ...

TNN 31 May 2019, 6:30 am
ಹೊಸದಿಲ್ಲಿ: 2000 ಇಸವಿಗೂ ಹಿಂದಿನ ಹಳೆಯ ವಾಹನಗಳು (ಅದರಲ್ಲೂ ಕಮರ್ಷಿಯಲ್‌ ವೆಹಿಕಲ್ಸ್‌) ನಿಮ್ಮ ಬಳಿ ಇವೆಯೇ? ಸದ್ಯದಲ್ಲಿಯೇ ಅವುಗಳಿಗೆ ಹೆಚ್ಚಿನ ತೆರಿಗೆ ತೆರುವುದು ಅನಿವಾರ್ಯವಾಗಲಿದೆ. ಜೊತೆಗೆ ಆಗಾಗ ವಾಹನ ದೃಢೀಕರಣ ಪರೀಕ್ಷೆಗಳಿಗೂ ಒಳಪಡಿಸಬೇಕಾಗುತ್ತದೆ. ಹಳೆಯ ಡೀಸೆಲ್‌ ಮತ್ತು ಪೆಟ್ರೋಲ್‌ ವಾಹನಗಳ ಮರು ನೋಂದಣಿ ಮತ್ತು ನವೀಕರಣದ ಶುಲ್ಕಗಳು ಶೇ.15ರಿಂದ 20ರಷ್ಟು ಹೆಚ್ಚಾಗಲಿವೆ.
Vijaya Karnataka Web ಹಳೆ ವಾಹನ
ಹಳೆ ವಾಹನ


ಮಾಲಿನ್ಯಕಾರಿ ವಾಹನಗಳನ್ನು ನಿಯಂತ್ರಿಸುವ ಕರಡನ್ನು ಸರಕಾರವು ಅಂತಿಮಗೊಳಿಸಿದ್ದು, ಅದು ಜಾರಿಗೆ ಬಂದರೆ ಹಳೆಯ ವಾಹನಗಳ ನಿರ್ವಹಣೆ ಕಷ್ಟವಾಗಲಿದೆ. ಹೊಸ ವಾಹನಗಳಿಗೆ ಹೋಲಿಸಿದರೆ ಹಳೆಯ ವಾಹನಗಳು 25 ಪಟ್ಟು ಮಾಲಿನ್ಯವನ್ನು ಹೆಚ್ಚು ಸೃಷ್ಟಿಸುತ್ತವೆ ಎನ್ನುವುದು ನಾನಾ ಅಧ್ಯಯನಗಳಿಂದ ದೃಢಪಟ್ಟಿದೆ. ಹಳೆಯ ವಾಣಿಜ್ಯ ವಾಹನಗಳನ್ನು ಮಾಲೀಕರೇ ಸ್ವಯಂಪ್ರೇರಿತರಾಗಿ ಗುಜರಿಗೆ ಸೇರಿಸಬೇಕು ಎನ್ನುವುದು ಸರಕಾರದ ಉದ್ದೇಶ. ಈ ನಿಟ್ಟಿನಲ್ಲಿ ವಾಹನ ಮಾಲೀಕರನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ಸರಕಾರವು ಮುಂದಿನ 3-4 ತಿಂಗಳಲ್ಲಿ ಜಾರಿಗೊಳಿಸಲಿದೆ.

ಹಳೆಯ ವಾಹನಗಳ ಬದಲಿಗೆ ಹೊಸ ವಾಹನಗಳನ್ನು ಖರೀದಿಸುವ ಜನರಿಗೆ ನೋಂದಣಿ ಶುಲ್ಕ ಮನ್ನಾ ಮಾಡುವ ಪ್ರಸ್ತಾವನೆಯೂ ಸರಕಾರದ ಮುಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ