ಆ್ಯಪ್ನಗರ

ಗೋಮೂತ್ರ ಸಂಶೋಧನೆಗೆ ಡಿಜಿಟಲ್‌ ಸ್ಪರ್ಶ ನೀಡಿದ ಕೇಂದ್ರ

​ಗೋಮೂತ್ರ, ಹಸುವಿನ ಹಾಲು, ಸೆಗಣಿಯನ್ನು ಒಳಗೊಂಡ ಐದು ಪದಾರ್ಥಗಳ 'ಪಂಚಗವ್ಯ' ಕ್ಯಾನ್ಸರ್‌ ನಿವಾರಣೆಯಲ್ಲಿಮಹತ್ವದ ಪಾತ್ರ ವಹಿಸುತ್ತಿದೆ ಎಂಬ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ.

PTI 25 Sep 2019, 7:17 am
ಹೊಸದಿಲ್ಲಿ: ಗೋಮೂತ್ರದಲ್ಲಿರುವ ನಾನಾ ತರಹದ ವೈದ್ಯಕೀಯ ಗುಣಗಳ ಕುರಿತು ಸಂಶೋಧನೆ ನಡೆಸುತ್ತಿರುವ ಆಯುರ್ವೇದ ವೈದ್ಯರ ರಿಜಿಸ್ಟ್ರಿ ತಯಾರಿಸಲು ಆಯುಷ್‌ ಸಚಿವಾಲಯ ಡಿಜಿಟಲ್‌ ತಂತ್ರಜ್ಞಾನದ ಮೊರೆ ಹೋಗಿದೆ.
Vijaya Karnataka Web cow


ಗೋಮೂತ್ರ, ಹಸುವಿನ ಹಾಲು, ಸೆಗಣಿಯನ್ನು ಒಳಗೊಂಡ ಐದು ಪದಾರ್ಥಗಳ 'ಪಂಚಗವ್ಯ' ಕ್ಯಾನ್ಸರ್‌ ನಿವಾರಣೆಯಲ್ಲಿಮಹತ್ವದ ಪಾತ್ರ ವಹಿಸುತ್ತಿದೆ ಎಂಬ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಇದಲ್ಲದೇ ಗೋಮೂತ್ರದ ಇತರ ವೈದ್ಯಕೀಯ ಗುಣಗಳ ಬಗ್ಗೆ ನೂರಾರು ಆಯುರ್ವೇದ ಚಿಕಿತ್ಸಾ ತಜ್ಞರು ಸಂಶೋಧನೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಅವುಗಳನ್ನು ಅಪ್ಪಟ ವೈಜ್ಞಾನಿಕ ಪದ್ಧತಿಯಲ್ಲಿಮೌಲ್ಯೀಕರಿಸಲು ಆಯುಷ್‌ ಸಚಿವಾಲಯ ಮುಂದಾಗಿದೆ. ಇದಕ್ಕಾಗಿ ಗೋಮೂತ್ರ ಕುರಿತ ಸಂಶೋಧನೆ ನಡೆಸುವ ವೈದ್ಯರ 'ಡಿಜಿಟಲ್‌ ರಿಜಿಸ್ಟ್ರಿ' ರಚಿಸಲಾಗುವುದು ಎಂದು ಆಯುಷ್‌ ಕಾರ‍್ಯದರ್ಶಿ ವೈದ್ಯ ರಾಜೇಶ್‌ ಕೊಟೇಚಾ ಹೇಳಿದ್ದಾರೆ. ಪ್ರಧಾನಿ ಮೋದಿ ಸರಕಾರದ ಎರಡನೇ ಅವಧಿಯ 100 ದಿನಗಳ ಯಶಸ್ವಿ ಆಡಳಿತದ ಸಂದರ್ಭದಲ್ಲಿಆಯುಷ್‌ ಸಚಿವಾಲಯದ ಸಾಧನೆಗಳನ್ನು ಜನರ ಮುಂದೆ ತೆರೆದಿಟ್ಟ ಸಂದರ್ಭದಲ್ಲಿಅವರು ಈ ವಿಷಯ ತಿಳಿಸಿದ್ದಾರೆ.

ಗೋಮೂತ್ರದ ಚಮತ್ಕಾರ

ಐಐಟಿ ಜತೆ ಒಪ್ಪಂದ: ಆಯುರ್ವೇದ ವೈದ್ಯರು ಡಿಜಿಟಲ್‌ ವೇದಿಕೆಯಲ್ಲಿಹೆಸರು ನೋಂದಾಯಿಸಿಕೊಂಡು, ಗೋಮೂತ್ರ ಕುರಿತ ತಮ್ಮ ಸಂಶೋಧನಾ ವಿವರಗಳನ್ನು ಅಪ್‌ಲೋಡ್‌ ಮಾಡಬೇಕು. ಆಯುಷ್‌ ಸಚಿವಾಲಯ ಅವುಗಳ ಮೌಲ್ಯ ಮಾಪನ ನಡೆಸಲಿದೆ. ಇದಕ್ಕಾಗಿಯೇ ಸಚಿವಾಲಯ ದಿಲ್ಲಿಯ ಐಐಟಿ ಜತೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕೊಟೇಚಾ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ