ಆ್ಯಪ್ನಗರ

ಧಾರವಾಡದ ರೈತರ ಬೇಡಿಕೆಗೆ ಕೇಂದ್ರದ ಸ್ಪಂದನೆ, ಜಿಲ್ಲೆಯಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ಆರಂಭ!

​​ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದ್ದು, ಈ ಮೂಲಕ ರೈತರು ಬೆಳೆದ ಹೆಸರು ಕಾಳು ಹಾಗೂ ಉದ್ದನ್ನು ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ. ಹೆಸರು ಕಾಳಿಗೆ ಕ್ವಿಂಟಾಲ್‌ ಗೆ 7,196 ರೂ. ಹಾಗೂ ಉದ್ದು ಬೆಳೆಯನ್ನು ಕ್ವಿಂಟಾಲ್‌ಗೆ 6,000 ರೂ.ನಂತೆ ಗರಿಷ್ಠ 6 ಕ್ವಿಂಟಾಲ್‌ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ,'' ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

Vijaya Karnataka Web 21 Sep 2020, 7:33 am
ಹೊಸದಿಲ್ಲಿ: ಧಾರವಾಡ ಜಿಲ್ಲೆಯ ರೈತರ ಬೇಡಿಕೆಗೆ ಸ್ಪಂದಿಸಿ ಕೇಂದ್ರ ಸರಕಾರ ಧಾರವಾಡ ಜಿಲ್ಲೆಯಲ್ಲಿ ಹೆಸರು ಮತ್ತು ಉದ್ದು ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದೆ. ''ಹೆಸರು ಮತ್ತು ಉದ್ದು ಖರೀದಿ ಕೇಂದ್ರ ತೆರೆಯಬೇಕೆಂಬುದು ಈ ಭಾಗದ ರೈತರ ಬಹಳ ದಿನಗಳಿಂದ ಬೇಡಿಕೆಯಾಗಿತ್ತು. ಈ ವಿಚಾರವಾಗಿ ಕೃಷಿ ಸಚಿವರಲ್ಲಿ ಮನವಿ ಮಾಡಿದ್ದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದ್ದಾರೆ.
Vijaya Karnataka Web Prahlad-Joshi
Most of the lawmakers were in their constituencies and were engaged in providing relief and food to the needy, said the people cited earlier.


ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದ್ದು, ಈ ಮೂಲಕ ರೈತರು ಬೆಳೆದ ಹೆಸರು ಕಾಳು ಹಾಗೂ ಉದ್ದನ್ನು ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ. ಹೆಸರು ಕಾಳಿಗೆ ಕ್ವಿಂಟಾಲ್‌ ಗೆ 7,196 ರೂ. ಹಾಗೂ ಉದ್ದು ಬೆಳೆಯನ್ನು ಕ್ವಿಂಟಾಲ್‌ಗೆ 6,000 ರೂ.ನಂತೆ ಗರಿಷ್ಠ 6 ಕ್ವಿಂಟಾಲ್‌ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ,'' ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಅಣ್ಣಿಗೇರಿ, ನವಲಗುಂದ ತಾಲೂಕಿನ ಮೊರಬ ರೈತರು ಹೆಸರುಕಾಳು ಖರೀದಿ ಕೇಂದ್ರವನ್ನು ಆರಂಭಿಸುವಂತೆ ಪತ್ರ ಬರೆದು ಒತ್ತಾಯಿಸಿದ್ದರು. ಜಿಲ್ಲೆಯಲ್ಲಿ ಒಟ್ಟು 11 ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಅಗತ್ಯ ದಾಖಲಾತಿಗಳೊಂದಿಗೆ ಆಕ್ಟೊಬರ್‌ 15ರೊಳಗೆ ನೋಂದಣಿ ಮಾಡಿಕೊಳ್ಳಲು ಸಮಯಾವಕಾಶವಿದ್ದು, ಡಿ. 15ವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸುದ್ದಿ ವಾಹಿನಿಗಳ ನಿಯಂತ್ರಣಕ್ಕೆ ಇರುವ ನಿಯಮಗಳೇ ಸಾಕು:ಸುದ್ದಿ ಪ್ರಸಾರಕರ ಒಕ್ಕೂಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ