ಆ್ಯಪ್ನಗರ

ಮಾ.13ರಂದು ಮುಷ್ಕರ ನಡೆಸಿದರೆ ಶಿಸ್ತು ಕ್ರಮ: ಕೇಂದ್ರ ಎಚ್ಚರಿಕೆ

ಮುಷ್ಕರ ನಡೆಸುವ ನೌಕರರ ವೇತನ ಕಡಿತ ಮಾಡುವುದರ ಜತೆಗೆ ಶಿಸ್ತುಕ್ರಮವನ್ನೂ ಜರುಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಹೇಳಿದೆ.

Vijaya Karnataka 7 Mar 2019, 5:00 am
ಹೊಸದಿಲ್ಲಿ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ವಿರೋಧಿಸಿ ಮಾ. 13ರಂದು ಮುಷ್ಕರ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರಕಾರ ನೌಕರರಿಗೆ ಎಚ್ಚರಿಕೆ ನೀಡಿದೆ.
Vijaya Karnataka Web govt warns employees of consequences if they go on strike on march 13
ಮಾ.13ರಂದು ಮುಷ್ಕರ ನಡೆಸಿದರೆ ಶಿಸ್ತು ಕ್ರಮ: ಕೇಂದ್ರ ಎಚ್ಚರಿಕೆ


''ಮುಷ್ಕರ ನಡೆಸುವ ನೌಕರರ ವೇತನ ಕಡಿತ ಮಾಡುವುದರ ಜತೆಗೆ ಶಿಸ್ತುಕ್ರಮವನ್ನೂ ಜರುಗಿಸಲಾಗುವುದು,'' ಎಂದು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಹೇಳಿದೆ.

''ಮುಷ್ಕರ ನಡೆಸಲು ನಿಗದಿಪಡಿಸಿರುವ ದಿನದಂದು ಯಾವುದೇ ನೌಕರಗೆ ರಜೆ ನೀಡಬಾರದು. ನೌಕರರ ಕರ್ತವ್ಯ ನಿರ್ವಹಣೆಗೆ ಯಾರಿಂದಲೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು,'' ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಎನ್‌ಪಿಎಸ್‌ ವಿರುದ್ಧ ದಿಲ್ಲಿಯ ಜಂತರ್‌ಮಂತರ್‌ ಮತ್ತು ದೇಶಾದ್ಯಂತ ಮಾ.13ರಂದು ಪ್ರತಿಭಟನೆ, ಧರಣಿ ನಡೆಸಲು ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿ (ಎನ್‌ಜಿಸಿಎ) ಕರೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ