ಆ್ಯಪ್ನಗರ

ಸ್ವಚ್ಛ ಭಾರತ: ಗ್ರೇಟರ್ ಹೈದರಾಬಾದ್‌ನಲ್ಲಿ ವಿನೂತನ ಕ್ರಮ

ಕೇಂದ್ರದ ಸ್ವಚ್ಛ ಭಾರತ ಯೋಜನೆ ಅನುಷ್ಠಾನಕ್ಕೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಹಲವು ಕ್ರಮಗಳನ್ನು ಕೈಗೊಂಡಿದೆ.

ಏಜೆನ್ಸೀಸ್ 9 Jun 2016, 3:47 pm
ಹೈದರಾಬಾದ್: ಕೇಂದ್ರದ ಸ್ವಚ್ಛ ಭಾರತ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ದಂಡದ ಜತೆ ಹಲವು ನೂತನ ಕ್ರಮಗಳನ್ನು ಕೈಗೊಂಡಿದೆ.
Vijaya Karnataka Web greater hyderabad municipal corporation inspired centre in swach bharat
ಸ್ವಚ್ಛ ಭಾರತ: ಗ್ರೇಟರ್ ಹೈದರಾಬಾದ್‌ನಲ್ಲಿ ವಿನೂತನ ಕ್ರಮ


ಅಂಗಡಿ, ಮಳಿಗೆಗಳ ಮಾರಾಟಗಾರರಿಗೆ ಕಸದ ತೊಟ್ಟಿಗಳನ್ನು ಬಳಸಲು ಉತ್ತೇಜನ, ನಿರ್ದಿಷ್ಟ ಸ್ಥಳಗಳಲ್ಲಿ ಭಿತ್ತಿಪತ್ರ, ಜಾಗಟೆಯೊಂದಿಗೆ ಜಾಗೃತಿ ರ‍್ಯಾಲಿ, ಕಸ ಎಸೆದು ಸ್ವಚ್ಛತೆ ಕದಡುವವರಿಗೆ ಚಾಕೊಲೇಟ್ ನೀಡುವ ಮೂಲಕ ಮುಜುಗರ ಉಂಟು ಮಾಡುವುದು ಸೇರಿದಂತೆ ಹಲವು ವಿನೂತನ ಕ್ರಮಗಳನ್ನು ಕಾರ್ಪೋರೇಷನ್ ಕೈಗೊಂಡಿದೆ.

ನಗರದಲ್ಲಿ ತೆರೆದ ಸ್ಥಳದಲ್ಲಿ ಕಸದ ರಾಶಿ ಹಾಕುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಭಾಗವಾಗಿ ಆ ಸ್ಥಳಗಳನ್ನು ಸಾಂಪ್ರದಾಯಿಕ, ವರ್ಣಮಯ ರಂಗೋಲಿಯಿಂದ ಅಲಂಕರಿಸುವ ಕೆಲಸವೂ ಕಾರ್ಪೋರೇಷನ್ ಮೂಲಕ ನಡೆಯುತ್ತಿದೆ. ಕಸದ ರಾಶಿ ತೆರವುಗೊಳಿಸಿ ಸ್ವಚ್ಛಗೊಳಿಸಿದ ಜಾಗಗಳು ಮತ್ತು ಪಕ್ಕದ ಗೋಡೆಗಗಳ ಮೇಲೆ ಜವಾಹರ್‌ ಲಾಲ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಲಾಕೃತಿಗಳನ್ನು ಬಿಡಿಸುತ್ತಾರೆ.

ಇವೆಲ್ಲವನ್ನೂ ರಾತ್ರಿ ವೇಳೆ ಮಾಡಲಾಗುತ್ತದೆ. ಜನರು ಕಸ ಹಾಕಲು ಬಂದಾಗ ನೋಡಿ ಅಚ್ಚರಿಗೊಂಡು ವಾಪಸಾಗುತ್ತಾರೆ. ಈ ಮೂಲಕ ಅವರಲ್ಲಿ ಆ ಪ್ರದೇಶವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಜವಾಬ್ದಾರಿ ಬೆಳೆಯುತ್ತದೆ.

ವಾರಾಣಾಸಿಯಿಂದ ಕೆಲವು ಅಧಿಕೃತ ಪ್ರತಿನಿಧಿಗಳು ಇಲ್ಲಿಗೆ ಆಗಮಿಸಿ ಸ್ವಚ್ಚತಾ ಅಭಿಯಾನವನ್ನು ಉತ್ತೇಜಿಸಿದ್ದು, ನಂತರ ಇಲ್ಲೂ ಅನುಷ್ಠಾನಕ್ಕೆ ತರಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ