ಆ್ಯಪ್ನಗರ

ಸಾವನ್ನೇ ಗೆದ್ದು ಬಂದ ಧೀರ ಬಾಲೆ

ಎಂದಿನಂತೆ ಶಾಲೆಯಿಂದ ಟ್ಯೂಷನ್ ಕ್ಲಾಸ್‌ಗೆ ಹಿಂತಿರುಗಿದ್ದ ವೇಳೆ ಆ ದುರಂತ ಘಟನೆ ನಡೆದಿತ್ತು. 20 ಅಂತಸ್ತಿನ ಡ್ಯಾನಿಶ್ ವಿಲ್ಲಾದಿಂದ ಒಂಬತ್ತರ ಹರೆಯದ ಹಾಜಿ ಕಪಾಡಿಯಾ ತಲೆಯ ಮೇಲೆ ಕಬ್ಬಿಣದ ಗ್ರಿಲ್‌ವೊಂದು ಬಿದ್ದಿತ್ತು.

Vijaya Karnataka 4 Apr 2018, 10:19 pm
ಮುಂಬಯಿ: ಎಂದಿನಂತೆ ಶಾಲೆಯಿಂದ ಟ್ಯೂಷನ್ ಕ್ಲಾಸ್‌ಗೆ ಹಿಂತಿರುಗಿದ್ದ ವೇಳೆ ಆ ದುರಂತ ಘಟನೆ ನಡೆದಿತ್ತು. 20 ಅಂತಸ್ತಿನ ಡ್ಯಾನಿಶ್ ವಿಲ್ಲಾದಿಂದ ಒಂಬತ್ತರ ಹರೆಯದ ಹಾಜಿ ಕಪಾಡಿಯಾ ತಲೆಯ ಮೇಲೆ ಕಬ್ಬಿಣದ ಗ್ರಿಲ್‌ವೊಂದು ಬಿದ್ದಿತ್ತು.
Vijaya Karnataka Web Hazequa-Kapadia


ಸರಿ ಸುಮಾರು ಒಂದು ವರೆ ತಿಂಗಳುಗಳಷ್ಟು ಕಾಲ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಕಬ್ಬಿಣದ ಗ್ರಿಲ್ ತಲೆ ಬುರುಡೆ ಹಾಗೂ ಮೆದುಳನ್ನು ಚುಚ್ಚಿದ್ದರಿಂದ ಬದುಕುಳಿಯುವುದೇ ಕಷ್ಟಕರವೆನಿಸಿತ್ತು.

ಬಾಂಬೆ ಆಸ್ಪೆತ್ರೆಯಲ್ಲಿ ಎರಡು ತಿಂಗಳುಷ್ಟು ಕಾಲ ಐಸಿಯುವಿನಲ್ಲಿದ್ದ ಹಾಜಿ, ಒಂದು ವರ್ಷದ ಬಳಿಕ ಪ್ರಜ್ಞಾ ಸ್ಥಿತಿಗೆ ಮರಳಿದರು. ಈಗಲೂ ಇತರೆ ಮಕ್ಕಳಂತೆ ನಡೆದಾಡುವುದು ಕಷ್ಟಕರವೆನಿಸಿದರೂ ತಮ್ಮ ಮಾತುಗಾರಿಕೆ ಹಾಗೂ ಚಟುವಟಿಕೆಯಿಂದ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಹಾಜಿ ಈಗ ಯಾರ ಸಹಾಯವಿಲ್ಲದೆ ಊಟ ಮಾಡಬಲ್ಲಳು. ಸ್ನಾನ ಮಾಡಬಲ್ಲಳು. ತರಗತಿಗೆ ಹಾಜರಾಗುತ್ತಿದ್ದಾಳೆ. ದೇವರ ದಯೆಯಿಂದ ಆಕೆ ಸಾವಿನಿಂದ ಗೆದ್ದು ಬಂದಿದ್ದಾಳೆ ಎಂದು ಅಪ್ಪ ಫೈಜಾನ್ ತಿಳಿಸುತ್ತಾರೆ.

ಈ ಬಗ್ಗೆ ಅಭಿಪ್ರಾಯಪಟ್ಟಿರುವ ವೈದ್ಯ ಕೆಕಿ ತುರೆಲ್, ಹಾಜಿ ಪ್ರಕರಣ ವೈದ್ಯಕೀಯ ಲೋಕಕ್ಕೆ ವಿಶಿಷ್ಟವಾಗಿದ್ದು, ದಶಕದಲ್ಲೇ ನೋಡಿರಲಿಲ್ಲ ಎಂದಿದ್ದಾರೆ.

ಪ್ರಸ್ತುತ ಹಾಜಿ ಪರೀಕ್ಷೆಗೂ ಹಾಜರಾಗುವ ಮೂಲಕ ಉಜ್ವಲ ಭವಿಷ್ಯವನ್ನು ಸಾರಿದ್ದಾರೆ. ಕಳೆದ ತಿಂಗಳಿನಲ್ಲಷ್ಟೇ ಅಧ್ಯಯನ ಮುಂದುವರಿಸಿದ ಹಾಜಿಗೆ ಉರ್ದು ಮಾರ್ಕಜ್ ಮದನ್‌ಪುರಾ ಸಂಘಟನೆಯು ಪ್ರಶಸ್ತಿ ನೀಡಿ ಅಭಿನಂದಿಸಿತ್ತು.

Read This Story In Marathi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ