ಆ್ಯಪ್ನಗರ

ಇಲೆಕ್ಟ್ರಿಕ್‌ ವಾಹನದ ಮೇಲಿನ ಜಿಎಸ್‌ಟಿ ಇಳಿಕೆ...

ಪರಿಸರ ಸ್ನೇಹಿ ವಾಹನಗಳ ಖರೀದಿಸಲು ಹೆಚ್ಚಿನ ಪ್ರಚೋದನೆ ನೀಡುವ ನಿಟ್ಟಿನಲ್ಲಿ ಜಿಎಸ್‌ಟಿ ಮಂಡಳಿ ವಾಹನದ ಮೇಲಿನ ಜಿಎಸ್‌ಟಿ ಇಳಿಸಿದೆ. ಆಗಸ್ಟ್‌ 1 ರಿಂದಲೇ ಈ ಹೊಸ ವಿನಾಯಿತಿ ಜಾರಿಯಾಗಲಿದೆ.

TIMESOFINDIA.COM 27 Jul 2019, 7:57 pm
ಹೊಸದಿಲ್ಲಿ: ವಿದ್ಯುತ್‌ ಚಾಲಿತ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಜಿಎಸ್‌ಟಿ ಮಂಡಳಿ ಶೇ.5ಕ್ಕೆ ಇಳಿಸಿದೆ.

ಇಲೆಕ್ಟ್ರಿಕ್‌ ವಾಹನ ಖರೀದಿದಾರರಿಗೆ ಈ ಮೂಲಕ ಸಿಹಿ ಸುದ್ದಿ ನೀಡಿರುವ ಜಿಎಸ್‌ಟಿ ಮಂಡಳಿ, ವಾಹನಗಳ ಮೇಲಿನ ತೆರಿಗೆಯನ್ನು ಶೇ.12 ರಿಂದ ಶೇ.5ಕ್ಕೆ ಇಳಿಸಲು ನಿರ್ಧರಿಸಿದ್ದು, ಆಗಸ್ಟ್‌ 1 ರಿಂದಲೇ ಈ ನಿಯಮ ಜಾರಿಗೊಳ್ಳಲಿದೆ. ಅಷ್ಟೇ ಅಲ್ಲದೆ ಇಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಪಾಯಿಂಟ್‌ ಮೇಲಿದ್ದ ಜಿಎಸ್‌ಟಿಯನ್ನೂ ಶೇ.5ಕ್ಕೆ ಇಳಿಸಿದೆ. ಸ್ಥಳೀಯ ಅಥಾರಿಟಿಯಿಂದ ವಿದ್ಯುತ್‌ ಚಾಲಿತ ಬಸ್‌ಗಳನ್ನು ಬಾಡಿಗೆ ಪಡೆದರೂ, ಈ ವಿನಾಯಿತಿ ಅನ್ವಯವಾಗಲು ಜಿಎಸ್‌ಟಿ ಮಂಡಳಿ ಅನುಮತಿ ನೀಡಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ, ವಿದ್ಯುತ್‌ ಚಾಲಿತ ವಾಹನಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡುವ ನಿರ್ಧಾರಕ್ಕೆ ಅನುಮೋದನೆ ನೀಡಲಾಯಿತು.

ಜೂ.21ರಂದು ನಡೆದ 35ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಇಲೆಕ್ಟ್ರಿಕ್‌ ವಾಹನಗಳ ಜಿಎಸ್‌ಟಿ ಕಡಿಮೆಗೊಳಿಸಲು ಪ್ರಸ್ತಾಪ ಮಾಡಲಾಗಿತ್ತು.
ಪೆಟ್ರೋಲ್‌ ಹಾಗೂ ಡೀಸಲ್‌ ವಾಹನಗಳ ನೋಂದಣಿಗೆ 5 ಸಾವಿರ ರೂ. ಹಾಗೂ ಮರು ನೋಂದಣಿಗೆ 10 ಸಾವಿರ ರೂ. ಶುಲ್ಕ ಹೆಚ್ಚಿಸಲು ಚಿಂತಿಸಲಾಗಿದೆ. ಪ್ರಸ್ತುತ ಈ ಶುಲ್ಕ 600 ರೂ.ಗಳಿವೆ. 15 ವರ್ಷಕ್ಕೆ ಹೆಚ್ಚು ಸಮಯವಾದ ವಾಹನಗಳನ್ನು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸಿ, ಪ್ರಮಾಣ ಪತ್ರ ತೆಗೆದುಕೊಳ್ಳುವ ಕರಡು ನೋಟಿಫಿಕೇಶನ್‌ ಸದ್ಯದಲ್ಲೇ ಹೊರಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ