ಆ್ಯಪ್ನಗರ

ವೇದಿಕೆಯಲ್ಲೇ ಕುಸಿದು ಬಿದ್ದಿದ್ದ ಗುಜರಾತ್‌ ಸಿಎಂ ರೂಪಾನಿಗೆ ಕೊರೊನಾ ಸೋಂಕು ದೃಢ

''ಸೋಂಕಿನ ಲಕ್ಷಣ ಸೌಮ್ಯವಾಗಿದೆ. ಮುಖ್ಯಮಂತ್ರಿ ವಿಜಯ್‌ ರೂಪಾಯಿ ಅವರನ್ನು ಇಸಿಜಿ ಮತ್ತಿತರ ತಪಾಸಣೆಗಳಿಗೂ ಒಳಪಡಿಸಲಾದ್ದು ಆತಂಕಪಡುವ ಅಗತ್ಯವಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ'' ವೈದ್ಯರು ತಿಳಿಸಿದ್ದಾರೆ.

Vijaya Karnataka Web 15 Feb 2021, 8:25 pm
ವಡೋದರಾ: ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
Vijaya Karnataka Web ವಿಜಯ್‌ ರೂಪಾನಿ
ವಿಜಯ್‌ ರೂಪಾನಿ


ವಡೋದರಾದಲ್ಲಿ ಭಾನುವಾರ ಸಂಜೆ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದಾಗಲೇ ವಿಜಯ್‌ ರೂಪಾನಿ ಕುಸಿದುಬಿದ್ದಿದ್ದರು. ಅವರನ್ನು ನಗರದ ಯು.ಎನ್‌. ಮೆಹ್ತಾ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿಯೇ ಅವರ ರಕ್ತದ ಮಾದರಿ ಸಂಗ್ರಹಿಸಿ ಆರ್‌ಟಿಪಿಸಿಆರ್‌ ತಪಾಸಣೆಗೆ ಕಳುಹಿಸಲಾಗಿತ್ತು.

ಸೋಮವಾರ ವರದಿ ಬಂದಿದ್ದು, ಮುಖ್ಯಮಂತ್ರಿ ವಿಜಯ್ ರೂಪಾನಿಗೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

''ಸೋಂಕಿನ ಲಕ್ಷಣ ಸೌಮ್ಯವಾಗಿದೆ. ಮುಖ್ಯಮಂತ್ರಿ ವಿಜಯ್‌ ರೂಪಾಯಿ ಅವರನ್ನು ಇಸಿಜಿ ಮತ್ತಿತರ ತಪಾಸಣೆಗಳಿಗೂ ಒಳಪಡಿಸಲಾದ್ದು ಆತಂಕಪಡುವ ಅಗತ್ಯವಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ'' ವೈದ್ಯರು ತಿಳಿಸಿದ್ದಾರೆ. ಈ ಮಾಸಾಂತ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ