ಆ್ಯಪ್ನಗರ

ಖಾಸಗಿ ಶಾಲೆಯ ಪ್ರಿನ್ಸಿಪಾಲ್‌ಗೆ ಕೊರಿಯರ್‌ನಲ್ಲಿ ಬಾಂಬ್ ಕಳಿಸಿದ ದುಷ್ಕರ್ಮಿಗಳು

ಶಾಲೆಯ ಪ್ರಿನ್ಸಿಪಾಲ್‌ಗೆ ಉಡುಗೊರೆ ಏನು ಕೊಡಬಹುದು ಅಂತೀರಾ. ಗುಜರಾತ್‌ನಲ್ಲಿ ಎರಡು ಬಹುಮಹಡಿ ಕಟ್ಟಡವನ್ನೇ ಸ್ಫೋಟ ಮಾಡುವಂತಹ ಬಾಂಬ್‌ ಒಂದನ್ನು ಉಡುಗೊರೆಯಾಗಿ ಕಳಿಸಿರುವ ವಿಲಕ್ಷಣಕಾರಿ ಘಟನೆ ನಡೆದಿದೆ.

TIMESOFINDIA.COM 18 Oct 2018, 1:03 pm
ರಾಜ್‌ಕೋಟ್‌: ಗುಜರಾತ್‌ನ ಖಾಸಗಿ ಶಾಲೆಯೊಂದರ ಮಾಲೀಕರಿಗೆ ಪ್ರಬಲ ಬಾಂಬ್ ಒಂದನ್ನು ಉಡುಗೊರೆಯಾಗಿ ಕೊರಿಯರ್ ಮೂಲಕ ಕಳಿಸಿದ್ದಾರೆ. ತಾನು ನಿಮ್ಮ ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಂಡು ಉಡುಗೊರೆ ಕಳಿಸಿದ್ದು, ರಾಜ್‌ಕೋಟ್‌ನಿಂದ 85 ಕಿ.ಮೀ ದೂರ ಇರುವ ಉಪ್ಲೆಟಾ ನಗರದಲ್ಲಿ ಈ ಘಟನೆ ನಡೆದಿದೆ.
Vijaya Karnataka Web gift bomb


ಉಪ್ಲೆಟಾ ನಗರದಲ್ಲಿ ಕೃಷ್ಣ ಶೈಕ್ಷಣಿಕ ಶಾಲೆಯನ್ನು ನಡೆಸುತ್ತಿರುವ ವಲ್ಲಭ್‌ ಡೋಬ್ರಿಯಾಗೆ ಗಿಫ್ಟ್‌ ಪ್ಯಾಕ್‌ ರೂಪದಲ್ಲಿ ಶಕ್ತಿಶಾಲಿ ಬಾಂಬ್ ಒಂದನ್ನು ಕಳಿಸಲಾಗಿತ್ತು. ಬಳಿಕ, ಬುಧವಾರ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಬಾಂಬ್ ಅನ್ನು ನಾಶಪಡಿಸಿದ್ದಾರೆ. 48 ವರ್ಷದ ಡೋಬ್ರಿಯಾಗೆ ಅಕ್ಟೋಬರ್ 13ರಂದು ಪಾರ್ಸೆಲ್‌ ರೂಪದಲ್ಲಿ ಬಾಂಬ್ ಅನ್ನು ಕಳಿಸಲಾಗಿತ್ತು. ಜತೆಗೆ, ಆ ಉಡುಗೊರೆಯನ್ನು ತನ್ನ ಕುಟುಂಬದ ಸದಸ್ಯರ ಜತೆಯಲ್ಲಿ ಭಾನುವಾರ ( ಅಕ್ಟೋಬರ್ 14)ರಂದು ಗಿಫ್ಟ್‌ ಪ್ಯಾಕ್‌ ಓಪನ್‌ ಮಾಡಬೇಕೆಂದು ಪತ್ರದಲ್ಲಿ ತಿಳಿಸಲಾಗಿತ್ತು. ಅಲ್ಲದೆ, ಉಡುಗೊರೆಯಲ್ಲಿರುವ ದೇವರ ವಿಗ್ರಹವನ್ನು ಅವರ ಮನೆಯ ದೇವರ ಮನೆಯಲ್ಲಿಟ್ಟು ಪೂಜೆ ಮಾಡಬೇಕೆಂದು ತಿಳಿಸಲಾಗಿತ್ತು.

ಆದರೆ ಮಂಗಳವಾರ ಸಂಜೆ ಅವರು ಪಾರ್ಸೆಲ್‌ ಅನ್ನು ತೆರೆದು ನೋಡಿದ್ದು, ಅದರಲ್ಲಿ ಬಾಂಬ್‌ ಜತೆಗೆ ದೇವರ ಮೂರ್ತಿ ಇದ್ದದ್ದು ಗೊತ್ತಾಗಿದೆ. ಇನ್ನು, ಅವರ ಶಾಲೆ ಸಹ ಮನೆಯ ಬಳಿಯಲ್ಲೇ ಇದ್ದು, ಮನೆಯಲ್ಲಿ ಆ ಪಾರ್ಸೆಲ್ ತೆರೆದು ನೋಡಿದಾಗ ಆತ ಗಾಬರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ರಾಜ್‌ಕೋಟ್‌ ಬಾಂಬ್‌ ನಿಷ್ಕ್ರಿಯ ದಳದ ಎಸ್‌ಐ ಆರ್‌.ಬಿ.ಪರ್ಮಾರ್, ''ಪಾರ್ಸೆಲ್‌ನಲ್ಲಿ 8 ಜಿಲೆಟಿನ್ ಕಡ್ಡಿಗಳು, 9 ಡಿಟೋನೇಟರ್‌ಗಳು, ಒಮದು ವಯರ್ ಹಾಗೂ ಬಾಂಬ್‌ನಲ್ಲಿ ಒಂದು ಸ್ವಿಚ್ ಇತ್ತು. ಆ ಸ್ವಿಚ್‌ ಅನ್ನು ಮುಟ್ಟಿದ್ದರೆ ಬಾಂಬ್ ಸ್ಫೋಟಗೊಳ್ಳುತ್ತಿತ್ತು. ಬಳಿಕ, ನಾವು ಅದನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ನಾಶಗೊಳಿಸಲಾಯಿತು''. ಇನ್ನು, ಬಾಂಬ್ ಶಕ್ತಿಶಾಲಿಯಾಗಿದ್ದು, 100 ಅಡಿ ಸುತ್ತಮುತ್ತ ಎಲ್ಲವನ್ನೂ ನಾಶಗೊಳಿಸುವಂತಹದ್ದಾಗಿತ್ತು. ಅಲ್ಲದೆ, ಎರಡಂತಸ್ತಿನ ಕಟ್ಟಡವನ್ನು ನಾಶ ಮಾಡಬಹುದಾಗಿತ್ತು'' ಎಂದು ಅವರು ಹೇಳಿದರು.

''ಡೋಬ್ರಿಯಾರನ್ನು ಅವರ ಕುಟುಂಬ ಸಮೇತ ಕೊಂದುಹಾಕುವುದೇ ಕೊರಿಯರ್ ಕಳಿಸಿದವರ ಉದ್ದೇಶವಾಗಿತ್ತು'' ಎಂದು ಸಹ ಪೊಲೀಸರು ತಿಳಿಸಿದ್ದಾರೆ. ''ಗಿಫ್ಟ್ ಕಳಿಸಿದವನಿಗೆ ಅವರ ಜತೆ ಯಾವುದೋ ಹಳೆಯ ದ್ವೇಷವಿರಬೇಕು. ಹೀಗಾಗಿ ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದರು. ನಕಲಿ ಐಡಿ ಮೂಲಕ ಪಾರ್ಸೆಲ್ ಕಳಿಸಲಾಗಿತ್ತು. ಆ ಪಾರ್ಸೆಲ್‌ನಲ್ಲಿದ್ದ ಹೆಸರಿನಲ್ಲಿ ಯಾರೂ ಡೋಬ್ರಿಯಾರ ಶಾಲೆಯಲ್ಲಿ ಓದಿರಲಿಲ್ಲ'' ಎಂದು ರಾಜ್‌ಕೋಟ್‌ ವಿಶೇಷ ಕಾರ್ಯಾಚರಣೆ ಗುಂಪು ಇನ್ಸ್‌ಪೆಕ್ಟರ್‌ ಎಂ.ಎನ್‌.ರಾಣಾ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ