ಆ್ಯಪ್ನಗರ

ಗುಪ್ಕರ್‌ ಮೈತ್ರಿಕೂಟ ಚೀನಾ, ಪಾಕ್‌ನ ಗುಪ್ತಚರ ಸಂಸ್ಥೆ: ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪ

ಮೈತ್ರಿಕೂಟದ ಸದಸ್ಯರು ಹಾಗೂ ಬೆಂಬಲಿಗರು ತಮ್ಮ ದೇಶದ ವಿರುದ್ಧವೇ ಗೂಢಚರ್ಯೆ ನಡೆಸಿ ಶತ್ರುರಾಷ್ಟ್ರಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಹಾಗಾಗಿ ಇದನ್ನು ಗುಪ್ಕರ್‌ ಅಲ್ಲ, ಗುಪ್ತಚರ್‌ ಸಂಘಟನ್‌ ಎಂದು ಕರೆಯಬೇಕಿದೆ ಎಂದು ಚೌಹಾಣ್‌ ಗುಪ್ಕರ್‌ ಮೈತ್ರಿಕೂಟದ ವಿರುದ್ಧ ಹರಿಹಾಯ್ದಿದ್ದಾರೆ.

Vijaya Karnataka Web 21 Nov 2020, 6:27 am
ಭೋಪಾಲ್‌: 370ನೇ ವಿಧಿ ಮರುಸ್ಥಾಪನೆಗಾಗಿ ಹೋರಾಡಲು ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌, ಪಿಡಿಪಿ ಮತ್ತು ಇತರ ಪಕ್ಷಗಳು ರಚಿಸಿಕೊಂಡಿರುವ 'ಗುಪ್ಕರ್‌ ಮೈತ್ರಕೂಟ' ನೆರೆರಾಷ್ಟ್ರಗಳಾದ ಪಾಕಿಸ್ತಾನ, ಚೀನಾಗಾಗಿ ಕಾರ್ಯನಿರ್ವಹಿಸುತ್ತಿರುವ ಗುಪ್ತಚರ ಸಂಸ್ಥೆಯಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪಿಸಿದ್ದಾರೆ.
Vijaya Karnataka Web Shivaraj singh chouhan


''ಈ ಮೈತ್ರಿಕೂಟದ ಸದಸ್ಯರು ಹಾಗೂ ಬೆಂಬಲಿಗರು ತಮ್ಮ ದೇಶದ ವಿರುದ್ಧವೇ ಗೂಢಚರ್ಯೆ ನಡೆಸಿ ಶತ್ರುರಾಷ್ಟ್ರಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಹಾಗಾಗಿ ಇದನ್ನು ಗುಪ್ಕರ್‌ ಅಲ್ಲ, ಗುಪ್ತಚರ್‌ ಸಂಘಟನ್‌ ಎಂದು ಕರೆಯಬೇಕಿದೆ,'' ಎಂದು ಚೌಹಾಣ್‌ ಹರಿಹಾಯ್ದಿದ್ದಾರೆ.

ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರು ಅಧಿಕಾರದ ಆಸೆಯಿಂದಾಗಿ ದೇಶವನ್ನು ವಿಭಜಿಸಿದರು. ನಮ್ಮ ಆಂತರಿಕ ವಿಚಾರವಾದ ಕಾಶ್ಮೀರದಲ್ಲಿ 370ನೇ ವಿಧಿ ಜಾರಿಯನ್ನು ವಿಶ್ವಸಂಸ್ಥೆ ಅಂಗಳಕ್ಕೆ ತೆಗೆದುಕೊಂಡು ಹೋಗಿ ನೆಹರೂ ಅವರು ಅನಗತ್ಯ ಗೊಂದಲ ಸೃಷ್ಟಿಸಿದರು ಎಂದು ಕೂಡ ಚೌಹಾಣ್‌ ಅಸಮಾಧಾನ ಹೊರಹಾಕಿದ್ದಾರೆ.

ವಿಚ್ಛೇದನಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ ಐಎಎಸ್‌ ಟಾಪರ್‌ ದಂಪತಿ ಟೀನಾ ಡಾಬಿ- ಅಥರ್‌ ಖಾನ್‌

ಮೈತ್ರಿಕೂಟದ ನಾಯಕರೆಲ್ಲರೂ ಸೇರಿ ಕಣಿವೆಯಲ್ಲಿನ 25 ಸಾವಿರ ಕೋಟಿ ರೂ. ಮೌಲ್ಯದ ಭೂಮಿಯನ್ನು ಕಬಳಿಸಿಕೊಂಡಿದ್ದಾರೆ. ಕಾಶ್ಮೀರವನ್ನು ಲೂಟಿ ಮಾಡಿದ್ದಾರೆ. ನ್ಯಾಷನಲ್‌ ಕಾನ್ಫರೆನ್ಸ್‌, ಪಿಡಿಪಿ ನಾಯಕರ ಮಕ್ಕಳೆಲ್ಲರೂ ವಿದೇಶಗಳಲ್ಲಿ ಐಷಾರಾಮಿಯಾಗಿ ಓದಿ ಬಂದಿದ್ದಾರೆ. ಆದರೆ ಸ್ಥಳೀಯವಾಗಿ ತಮ್ಮ ಸುತ್ತಲಿರುವ ನಿವಾಸಿಗಳ ಮಕ್ಕಳ ಕೈಗೆ ಮಾತ್ರ ಕಲ್ಲುಗಳನ್ನು ನೀಡಿದ್ದಾರೆ. ಯೋಧರ ಮೇಲೆ ಕಲ್ಲುತೂರಾಟಕ್ಕೆ ಸಂಚು ಹೆಣೆಯುತ್ತಾರೆ ಎಂದು ಚೌಹಾಣ್‌ ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ