ಆ್ಯಪ್ನಗರ

7 ವರ್ಷದ ಬಾಲಕನ ಹತ್ಯೆ ಪ್ರಕರಣ: 16 ವರ್ಷದ ಆರೋಪಿ ವಯಸ್ಕನೆಂದು ಪರಿಗಣಿಸಿ ವಿಚಾರಣೆ

ಗುರುಗ್ರಾಮ ಶಾಲೆಯಲ್ಲಿ 7 ವರ್ಷದ ಬಾಲಕನ ಹತ್ಯೆ ಮಾಡಿದ 16 ವರ್ಷದ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆ ನಡೆಸಲಾಗುವುದು ಎಂದು ಸೆಷನ್ಸ್‌ ನ್ಯಾಯಾಲಯ ಹೇಳಿದೆ.

Vijaya Karnataka Web 21 May 2018, 9:22 pm
ಹೊಸದಿಲ್ಲಿ: ಗುರುಗ್ರಾಮ ಶಾಲೆಯಲ್ಲಿ 7 ವರ್ಷದ ಬಾಲಕನ ಹತ್ಯೆ ಮಾಡಿದ 16 ವರ್ಷದ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆ ನಡೆಸಲಾಗುವುದು ಎಂದು ಸೆಷನ್ಸ್‌ ನ್ಯಾಯಾಲಯ ಹೇಳಿದೆ.
Vijaya Karnataka Web Court


ಆರೋಪಿಯ ಕುಟುಂಬದ ಅರ್ಜಿಯನ್ನು ತಳ್ಳಿಹಾಕಿದ ಗುರುಗ್ರಾಮ ಸೆಷನ್ಸ್‌ ನ್ಯಾಯಾಲಯ, ಬಾಲನ್ಯಾಯ ಮಂಡಳಿಯ (ಜ್ಯುವೆನೈಲ್ ಜಸ್ಟಿಸ್‌ ಬೋರ್ಡ್‌- ಜೆಜೆಬಿ) ಆದೇಶವನ್ನು ಎತ್ತಿ ಹಿಡಿದಿದೆ. 16 ವರ್ಷದ ಆರೋಪಿಯನ್ನು ವಯಸ್ಕನಂತೆ ವಿಚಾರಣೆ ನಡೆಸಬೇಕು ಎಂದು ಬಾಲನ್ಯಾಯ ಮಂಡಳಿ ಆದೇಶಿಸಿತ್ತು.

ಮಂಡಳಿಯ ಆದೇಶವನ್ನು ಪ್ರಶ್ನಿಸಿ ಆರೋಪಿಯ ಕುಟುಂಬದವರು ಮೇಲ್ಮನವಿ ಸಲ್ಲಿಸಿದ್ದರು.

16 ವರ್ಷದ ಆರೋಪಿಯನ್ನು ವಯಸ್ಕನಂತೆ ವಿಚಾರಣೆ ನಡೆಸಬೇಕೆಂಬ ಜೆಜೆಬಿ ಆದೇಶ ಸಕಾರಣವಾಗಿದೆ; ಅದರಲ್ಲಿ ಕಾನೂನು ಬಾಹಿರವಾದದ್ದು ಏನೂ ಇಲ್ಲ ಎಂದು ಹತ್ಯೆಗೀಡಾದ 7 ವರ್ಷದ ಬಾಲಕನ ಪರ ವಕೀಲ ಸುಶೀಲ್‌ ಟೆಕ್ರಿವಾಲ್ ವಾದಿಸಿದರು.

NEW DELHI: The 16-year-old teenager accused of murdering a seven-year-old boy at a Gurugram school will be tried as an adult, a district sessions court said on Monday.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ