ಹೊಸದಿಲ್ಲಿ: ಮಹಿಳೆಯೊಬ್ಬರು ಆಕ್ಸಿಜನ್ ಸಾಂದ್ರಕದ ಬಲದೊಂದಿಗೆ ಉಸಿರಾಡುತ್ತಲೇ ಅಡುಗೆ ಮಾಡುತ್ತಿರುವ ಚಿತ್ರವೊಂದು ಭಾರಿ ಸಂಚಲನ ಸೃಷ್ಟಿಸಿದೆ. 'ಷರತ್ತುಗಳೇ ಇಲ್ಲದ ಪ್ರೀತಿ: ಅಮ್ಮ ಯಾವತ್ತೂ ರಜೆ ಹಾಕಿದ್ದೇ ಇಲ್ಲ' ಎಂಬ ಟಿಪ್ಪಣಿಯೊಂದಿಗೆ ಯಾರೋ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿರುವ ಚಿತ್ರವಿದು. ಹಲವಾರು ಮಂದಿ ಈ ಚಿತ್ರವನ್ನು ಅಮ್ಮನ ತ್ಯಾಗ, ಬದ್ಧತೆ, ಪ್ರೀತಿ ಮತ್ತು ಎಂಥ ಕಷ್ಟ ಕಾಲದಲ್ಲೂ ಹಿಂಜರಿಯದೆ ಕರ್ತವ್ಯ ನಿರ್ವಹಿಸುವ ಅವಳ ಕರ್ತವ್ಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ. ಅದೇ ಹೊತ್ತಿಗೆ, ಇಂಥ ಕಠಿಣ ಪರಿಸ್ಥಿತಿಯಲ್ಲೂ ಆಕೆಯ ಕೈಯಿಂದಲೇ ಅಡುಗೆ ಮಾಡಿಸಿಕೊಂಡು ತಿನ್ನುವ ಪುರುಷ ಪ್ರಧಾನ ವ್ಯವಸ್ಥೆಯ ಬಗ್ಗೆ ಹಲವಾರು ಮಂದಿ ತಮ್ಮ ಆಕ್ರೋಶವನ್ನು ಹೊರಗೆಡವಿದ್ದಾರೆ.
ಚಿತ್ರದಲ್ಲಿ ಕಾನ್ಸಂಟ್ರೇಟರ್ನಿಂದ ಬಂದ ಪೈಪ್ ಆಕೆಯ ಮೂಗನ್ನು ಆವರಿಸಿಕೊಂಡು ಉಸಿರು ನೀಡುತ್ತಿದೆ. ಆಕೆ ಒಲೆಯ ಮುಂದೆ ನಿಂತು ಚಪಾತಿ ಬೇಯಿಸುತ್ತಿದ್ದಾರೆ. ಚಿತ್ರ ನಿಜವೋ, ಫೋಟೊಶಾಪ್ ಮಾಡಿದ್ದೋ ಎಂಬ ಚರ್ಚೆಯೂ ಶುರುವಾಗಿದೆ.
ಕರ್ನಾಟಕದಲ್ಲಿ 500 ಕಪ್ಪು ಶಿಲೀಂದ್ರ ಪ್ರಕರಣ, 1270 ಬಾಟಲಿ ಔಷಧ ಪೂರೈಕೆ: ಸದಾನಂದ ಗೌಡ