ಆ್ಯಪ್ನಗರ

ಸಯೀದ್‌ ಬಿಡುಗಡೆ: ಭಯೋತ್ಪಾದನೆಗೆ ಮತ್ತೆ ಮಣೆ ಹಾಕಿದ ಪಾಕ್‌ಗೆ ಭಾರತ ತಿರುಗೇಟು

ಈ ಒಂದು ಪ್ರಕರಣ ಸಾಕು ಪಾಕಿಸ್ತಾನ ಉಗ್ರರನ್ನು ಯಾವ ಮಟ್ಟಕ್ಕೆ ಶಿಕ್ಷಿಸುತ್ತಿದೆ ಎಂದು ತಿಳಿಯುತ್ತದೆ ಎಂದು ಹೇಳಿದೆ.

TNN 23 Nov 2017, 7:29 pm
ಹೊಸದಿಲ್ಲಿ: ಮುಂಬಯಿ ದಾಳಿಯ ರೂವಾರಿ ಜಮಾತ್‌ ಉದ್‌ ದವಾ ಮುಖ್ಯಸ್ಥ ಸಫೀಜ್‌ ಸಯೀದ್‌ ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಿರುವ ಪಾಕಿಸ್ತಾನದ ವಿರುದ್ಧ ಭಾರತ ಕಿಡಿಕಾರಿದ್ದು, ಈ ಒಂದು ಪ್ರಕರಣ ಸಾಕು ಪಾಕಿಸ್ತಾನ ಉಗ್ರರನ್ನು ಯಾವ ಮಟ್ಟಕ್ಕೆ ಶಿಕ್ಷಿಸುತ್ತಿದೆ ಎಂದು ತಿಳಿಯುತ್ತದೆ ಎಂದು ಹೇಳಿದೆ.
Vijaya Karnataka Web hafiz saeeds release is an attempt by pak to mainstream un proscribed terrorists
ಸಯೀದ್‌ ಬಿಡುಗಡೆ: ಭಯೋತ್ಪಾದನೆಗೆ ಮತ್ತೆ ಮಣೆ ಹಾಕಿದ ಪಾಕ್‌ಗೆ ಭಾರತ ತಿರುಗೇಟು


'ಉಗ್ರ ಹಫೀಜ್‌ ಪ್ರಕರಣವೊಂದೇ ಸಾಕು ಪಾಕ್‌ ಭಯೋತ್ಪಾದನೆಯನ್ನು ಮುಖ್ಯವಾಹಿನಿಗೆ ತರಲು ಯತ್ನಿಸುತ್ತಿದೆ ಎಂದು ತಿಳಿಯುತ್ತದೆ. ಉಗ್ರರ ವಿರುದ್ಧ ಪಾಕ್‌ ತನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಇದರ ನಿಜ ಮುಖ ನಾವು ಇಂದಿಗೂ ನೋಡಬಹುದು' ಎಂಬುದಾಗಿ ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಕಳೆದ 10 ತಿಂಗಳನಿಂದ ಗೃಹ ಬಂಧನದಲ್ಲಿದ್ದ ಹಫೀಜ್ ಸಯೀದ್‌ನನ್ನು ಬಂಧಮುಕ್ತಿಗೊಳಿಸಿ ಎಂದು ಲಾಹೋರ್ ಹೈಕೋರ್ಟ್ ಆದೇಶಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಭಾರತ, ಉಗ್ರವಾದದ ಕುರಿತು ನೆರೆಯ ರಾಷ್ಟ್ರಕ್ಕೆ ಗಂಭೀರತೆಯಿಲ್ಲ ಎಂದು ಹೇಳಿದೆ.

hafiz saeed's release is an attempt by pak to 'mainstream' un-proscribed terrorists

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ