ಆ್ಯಪ್ನಗರ

ರಫೇಲ್‌ ಡೀಲ್‌ನಿಂದ ಎಚ್‌ಎಎಲ್‌ ಹೊರಗಿಟ್ಟಿದ್ದೇ ಯುಪಿಎ: ನಿರ್ಮಲಾ ಸೀತಾರಾಮನ್‌

ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಟೀಕೆಗೆ ಪ್ರತಿಕ್ರಿಯೆ

Vijaya Karnataka Web 18 Sep 2018, 5:25 pm
ಹೊಸದಿಲ್ಲಿ: ರಫೇಲ್‌ನಂಥ ಯುದ್ಧ ವಿಮಾನಗಳನ್ನು ತಯಾರಿಸಲು ಭಾರತದ ಎಚ್‌ಎಎಲ್‌ಗೆ ಸಾಮರ್ಥ್ಯವಿಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಈಗ ಅದಕ್ಕೆ ತೇಪೆ ಹಚ್ಚಲು ಮುಂದಾಗಿದ್ದಾರೆ.
Vijaya Karnataka Web ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌


ರಫೇಲ್‌ ಡೀಲ್‌ನಿಂದ ಎಚ್‌ಎಎಲ್‌ ಅನ್ನು ಹೊರಗಿಟ್ಟಿದ್ದೇ ಯುಪಿಎ ಸರಕಾರ. ಇದರಿಂದಾಗಿ ನಂತರವೂ ಅದನ್ನು ಹೊರಗಿಡಬೇಕಾಯಿತು ಎಂದು ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಅಸಾಲ್ಟ್‌ ಏವಿಯೇಷನ್‌ ಸಂಸ್ಥೆ ಜತೆಗಿನ ಒಪ್ಪಂದದಿಂದ ಎಚ್‌ಎಎಲ್‌ ಅನ್ನು ಹೊರಗಿಡುವ ನಿರ್ಧಾರವನ್ನು ಎನ್‌ಡಿಎ ಸರಕಾರ ಕೈಗೊಂಡಿಲ್ಲ. ಈ ನಿರ್ಧಾರವನ್ನು ಕೈಗೊಂಡಿದ್ದ ಯುಪಿಎ ಆಡಳಿತ ಎಂದು ಸಚಿವರು ತಿಳಿಸಿದರು.

ಇದಕ್ಕೂ ಮುನ್ನ ಆ್ಯಂಟನಿ ಮಾತನಾಡಿ, ದೇಶದ ಪ್ರತಿಷ್ಠಿತ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಒಂದಾಗಿರುವ ಎಚ್‌ಎಎಲ್‌ ಬಗ್ಗೆ ರಕ್ಷಣಾ ಸಚಿವರೇ ಅತ್ಯಂತ ಅವಹೇಳನ ಹೇಳಿಕೆ ನೀಡಿರುವುದು ಸಾಧುವಲ್ಲ. ರಕ್ಷಣಾ ಇಲಾಖೆ ಪರವಾಗಿ ಉತ್ಪಾದನೆ ಮಾಡುತ್ತಿರುವ ಎಚ್‌ಎಎಲ್‌ ಬಗ್ಗೆ ರಕ್ಷಣಾ ಸಚಿವರೇ ಬಾಲಿಶ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ