ಆ್ಯಪ್ನಗರ

ದುಷ್ಕರ್ಮಿಗಳನ್ನು ಬಿಡಬೇಡಿ, ಗಲ್ಲಿಗೇರಿಸಿ: ಉನ್ನಾವ್‌ ರೇಪ್‌ ಸಂತ್ರಸ್ತೆ ಕೊನೆಯಾಸೆ

ಉನ್ನಾವ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ದುರುಳರು ಹತ್ಯೆ ಮಾಡಿದ್ದಾರೆ. ಈ ದುಷ್ಕರ್ಮಿಗಳಿಗೂ ಹೈದರಾಬಾದ್‌ ಅತ್ಯಾಚಾರಿಗಳಿಗೆ ಆದ ಗತಿಯೇ ಆಗಲಿ ಎಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.

Vijaya Karnataka Web 7 Dec 2019, 10:40 am
ಲಖನೌ/ಹೊಸದಿಲ್ಲಿ: ನನ್ನನ್ನು ಬದುಕಿಸು, ನಾನು ಸಾಯಲು ಇಷ್ಟಪಡುವುದಿಲ್ಲ. ಆದರೆ ನನ್ನ ಮೇಲೆ ಹಲ್ಲೆ ನಡೆಸಿದವರನ್ನು ಸುಮ್ಮನೆ ಬಿಡಬಾರದು. ಅವರನ್ನು ಗಲ್ಲಿಗೇರಿಸಬೇಕು.....
Vijaya Karnataka Web ಉನ್ನಾವ್‌
ಉನ್ನಾವ್


ಇದು ಉನ್ನಾವ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಕೊನೆಯ ಮಾತುಗಳು.

ಕಳೆದ ಗುರುವಾರ (ಡಿಸೆಂಬರ್‌ 5) ನ್ಯಾಯಾಲಯಕ್ಕೆ ಹಾಜರಾಗಲು ಆಗಮಿಸುತ್ತಿದ್ದ ಸಂದಭದಲ್ಲೇ ದುರುಳರು ಆಕೆಯನ್ನು ಅಡ್ಡಗಟ್ಟಿ ಕುತ್ತಿಗೆಗೆ ಇರಿದು ನಂತರ ಸೀಮೆ ಎಣ್ಣೆ ಹಾಕಿ ಸುಟ್ಟು ಹಾಕಿದ್ದರು. ಉನ್ನಾವ್‌ ಸಂತ್ರಸ್ತೆ ಹೊಸದಿಲ್ಲಿಯ ಸಫ್ದಾರ್‌ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.

ಆಕೆಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಹೋದರ ಸುದ್ದಿಗಾರರಿಗೆ ಕೆಲವು ಮಾಹಿತಿ ನೀಡಿದ್ದಾರೆ.

ನನ್ನ ಸೋದರಿಯನ್ನು ತಬ್ಬಿಕೊಂಡಾಗ ಆಕೆ ಮನದಾಳದ ಮಾತುಗಳನ್ನು ಹಂಚಿಕೊಂಡಳು ಎಂದು ಆಸ್ಪತ್ರೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.

ಹೈದರಾಬಾದ್‌ನಲ್ಲಿ ಅತ್ಯಾಚಾರಿಗಳನ್ನು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಿದ ಸುದ್ದಿ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತೆಯ ಸಹೋದರ, ನನ್ನ ಸಹೋದರಿಯನ್ನು ಹತ್ಯೆ ಮಾಡಿದವರಿಗೂ ಇದೇ ರೀತಿಯಲ್ಲಿ ಶಿಕ್ಷೆ ನೀಡಬೇಕು. ವರ್ಷಾನುಗಟ್ಟಲೇ ವಿಚಾರಣೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಉನ್ನಾವ್‌ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಹೊಸದಿಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಶೇಕಡ 90ರಷ್ಟು ಸುಟ್ಟುಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ಮೊದಲಿಗೆ ಲಖನೌ, ಕಾನ್ಪುರ ನಂತರ ಹೊಸದಿಲ್ಲಿಯ ಸಫ್ದಾರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಯಿತು.

ಸುಮಾರು 40 ಗಂಟೆಗಳ ಜೀವನ ಮರಣದ ಹೋರಾಟದಲ್ಲಿ ಉನ್ನಾವೋ ಸಂತ್ರಸ್ತೆ ಸಾವಿಗೆ ಶರಣಾದಳು.

ಕಳೆದ ಗುರುವಾರ (ಡಿಸೆಂಬರ್‌ 5) ಬೆಳಗ್ಗೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಸಂತ್ರಸ್ತೆ ಆಗಮಿಸಬೇಕಾಗಿತ್ತು. ರಾಯಬರೇಲಿಗೆ ಬರಲು ರೈಲು ನಿಲ್ದಾಣಕ್ಕೆ ಬೆಳಗಿನ ಜಾವ 4.30ಕ್ಕೆ ಆಗಮಿಸಿದ ಸಂತ್ರಸ್ತೆಯನ್ನು ಗೌರಾ ಕ್ರಾಸಿಂಗ್‌ನಲ್ಲಿ ದುಷ್ಕರ್ಮಿಗಳು ತಡೆಹಿಡಿದರು.

ಕೂಡಲೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಂತ್ರಸ್ತೆ ನೀಡಿರುವ ಮಾಹಿತಿ ಪ್ರಕಾರ ಆರು ಮಂದಿ ದುಷ್ಕಮಿಗಳು ಅಡ್ಡಗಟ್ಟಿ ತಲೆಗೆ ಹೊಡೆದಿದ್ದಾರೆ. ನಂತರ ಕುತ್ತಿಗೆಯನ್ನು ಕತ್ತಿಯಿಂದ ತಿವಿದಿದ್ದಾರೆ. ಆಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಉನ್ನಾವ್‌ ಅತ್ಯಾಚಾರ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 2017ರಲ್ಲಿ ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಈ ಘಟನೆಯಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕರ ಹೆಸರು ಕೇಳಿಬಂದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ