ಆ್ಯಪ್ನಗರ

ಹರಿಯಾಣದಲ್ಲಿ 3ನೇ ಹಂತದ ಕೊವ್ಯಾಕ್ಸಿನ್ ಪರೀಕ್ಷೆ: ಅನಿಲ್ ವಿಜ್‌ಗೆ ಮೊದಲ ಲಸಿಕೆ ಪ್ರಯೋಗ!

ಹರಿಯಾಣದಲ್ಲಿ ಮಾರಕ ಕೊರೊನಾ ವೈರಸ್‌ಗೆ ಸಂಶೋಧನಾ ಹಂತದಲ್ಲಿರುವ ಕೊವ್ಯಾಕ್ಸಿನ್ ಲಸಿಕೆಯ, ಮೂರನೇ ಹಂತದ ಪ್ರಯೋಗಾರ್ಥ ಪರೀಕ್ಷೆ ನಡೆಯಲಿದ್ದು, ರಾಜ್ಯದ ಆರೋಗ್ಯ ಸಚಿವ ಅನಿಲ್ ವಿಜ್ ಅವರ ಮೇಲೆ ಮೊದಲ ಲಸಿಕೆಯ ಪ್ರಯೋಗ ಮಾಡಲಾಗುವುದು.

Vijaya Karnataka Web 20 Nov 2020, 11:28 am
ಚಂಡೀಗಢ: ಹರಿಯಾಣದಲ್ಲಿ ಮಾರಕ ಕೊರೊನಾ ವೈರಸ್‌ಗೆ ಸಂಶೋಧನಾ ಹಂತದಲ್ಲಿರುವ ಕೊವ್ಯಾಕ್ಸಿನ್ ಲಸಿಕೆಯ, ಮೂರನೇ ಹಂತದ ಪ್ರಯೋಗಾರ್ಥ ಪರೀಕ್ಷೆ ನಡೆಯಲಿದ್ದು, ರಾಜ್ಯದ ಆರೋಗ್ಯ ಸಚಿವ ಅನಿಲ್ ವಿಜ್ ಅವರ ಮೇಲೆ ಮೊದಲ ಲಸಿಕೆಯ ಪ್ರಯೋಗ ಮಾಡಲಾಗುವುದು.
Vijaya Karnataka Web anil vij
ಸಂಗ್ರಹ ಚಿತ್ರ


ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಯುತ್ತಿದೆ.

ಹರಿಯಾಣದಲ್ಲಿ ಆರಂಭವಾಗಿರುವ ಈ ಪ್ರಯೋಗದ ಮೊದಲ ಲಸಿಕೆಯನ್ನು, ತಮ್ಮ ಮೇಲೆ ಪ್ರಯೋಗ ಮಾಡಿಸಿಕೊಳ್ಳಲು ಸಿದ್ಧವಿರುವುದಾಗಿ ಅನಿಲ್ ವಿಜ್ ಸ್ಪಷ್ಟಪಡಿಸಿದ್ದಾರೆ.

‘ಕೊವ್ಯಾಕ್ಸಿನ್‌’ ಲಸಿಕೆ 2021ರ ಜೂನ್‌ಗೆ ಲಭ್ಯ - ಭಾರತ್‌ ಬಯೋಟೆಕ್ ವಿಶ್ವಾಸ

ಇದೇ ನವೆಂಬರ್ 20ರಿಂದ ಹರಿಯಾಣದಲ್ಲಿ ಮೂರನೇ ಹಂತದ ಪ್ರಯೋಗ ಆರಂಭವಾಗುತ್ತಿದ್ದು, ಅನಿಲ್ ವಿಜ್ ಸ್ವಯಂಸೇವಕರಾಗಿ ಮೊದಲ ಲಸಿಕೆಯನ್ನು ಪಡೆಯಲಿದ್ದಾರೆ.

ಮೊದಲ ಲಸಿಕೆ ಪ್ರಯೋಗವನ್ನು ತಮ್ಮ ಮೇಲೆ ಮಾಡುವಂತೆ ನಾನು ಕೊವ್ಯಾಕ್ಸಿನ್ ಕಂಪನಿಗೆ ಮನವಿ ಮಾಡಿದ್ದೇನೆ. ಅವರು ಇದಕ್ಕೆ ಒಪ್ಪಿದ್ದಾರೆ ಎಂದು ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.

ಯಾರ ಮೇಲೆ ಕೋವಿಡ್ ಲಸಿಕೆ ಪ್ರಯೋಗ, ಆಯ್ಕೆ ಹೇಗೆ?: ಇಲ್ಲಿದೆ ಮಾನವ ಪ್ರಯೋಗದ ರೋಚಕ ಮಾಹಿತಿ!

ಹರಿಯಾಣದ ರೋಹ್ಟಕ್‌ನ ಪಂಡಿತ್ ಭಗವತ್ ದಯಾಳ್ ಶರ್ಮಾ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಫರಿದಾಬಾದ್‌ನ ಇಎಸ್‌ಐಸಿ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗ ನಡೆಯಲಿದೆ.

ಏನಿದು ಕೊವ್ಯಾಕ್ಸಿನ್ ಲಸಿಕೆ?
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಎಂಬ ದೇಶೀಯ ಔಷಧ ಸಂಸ್ಥೆ, ಕೊರೊನಾ ವೈರಸ್‌ಗೆ ಲಸಿಕೆ ಸಂಶೋಧಿಸುವ ಸವಾಲನ್ನು ಸ್ವೀಕರಿಸಿ, ಅದರಂತೆ ಕೊವ್ಯಾಕ್ಸಿನ್ ಎಂಬ ಲಸಿಕೆಯನ್ನು ಸಂಶೋಧಿಸಿದೆ.

ಸಂಪೂರ್ಣ ದೇಶೀಯ ನಿರ್ಮಿತ ಕೊವ್ಯಾಕ್ಸಿನ್ ಲಸಿಕೆಯ‌ನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಪ್ರಮಾಣೀಕರಿಸಿದ ಬಳಿಕಷ್ಟೇ ಮಾನವ ಪ್ರಯೋಗಕ್ಕೆ ಅನುಮತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ