ಆ್ಯಪ್ನಗರ

ಹರಿಯಾಣ ಗ್ರಾಮಕ್ಕೆ ಟ್ರಂಪ್‌ ಹೆಸರು

ಹರಿಯಾಣದ ಮೇವಟ್‌ನಲ್ಲಿ ಬಯಲು ಶೌಚ ಮುಕ್ತ ಗ್ರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರಿಡಲು ನಿರ್ಧರಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 14 Jun 2017, 2:29 pm
ಗುರುಗ್ರಾಮ್‌: ಹರಿಯಾಣದ ಮೇವಟ್‌ನಲ್ಲಿ ಬಯಲು ಶೌಚ ಮುಕ್ತ ಗ್ರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರಿಡಲು ನಿರ್ಧರಿಸಲಾಗಿದೆ.
Vijaya Karnataka Web haryanas open defecation free village to be named after donald trump
ಹರಿಯಾಣ ಗ್ರಾಮಕ್ಕೆ ಟ್ರಂಪ್‌ ಹೆಸರು


ಸುಲಭ್ ಇಂಟರ್ ನ್ಯಾಷನಲ್‌ ಸ್ಥಾಪಕ ಹಾಗೂ ಮುಖ್ಯಸ್ಥ ಬಿಂದೇಶ್ವರ್ ಪಾಠಕ್ ಈ ವಿಷಯ ಪ್ರಕಟಿಸಿದ್ದಾರೆ.

ಟ್ರಂಪ್‌ ಹೆಸರಿಡುವ ಮೂಲಕ ದೇಶದ ಸ್ವಚ್ಛಾತಾ ಅಭಿಯಾನವನ್ನು ವಿಶ್ವದ ಗಮನ ತರಬಹುದು ಎಂಬುದು ಸುಲಭ್‌ ವಾದ. ಬಯಲು ಶೌಚ ಮುಕ್ತಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಕೆಲ ಗ್ರಾಮಗಳಲ್ಲಿ ಯೋಜನೆ ಕೈಗೊಂಡಿದೆ.

'ಮೇವಟ್‌ ಪ್ರದೇಶವನ್ನು ಯೋಜನೆಗೆ ಆಯ್ಕೆ ಮಾಡಿಕೊಂಡಿದ್ದೇವೆ. ಈ ಪೈಕಿ ಒಂದು ಗ್ರಾಮಕ್ಕೆ ಟ್ರಂಪ್‌ ಹೆಸರಿಡಲಾಗುವುದು,'ಎಂದು ಅಮೆರಿಕದಲ್ಲಿರುವ ಪಾಠಕ್‌ ಹೇಳಿದ್ದಾರೆ. ದೇಶಕ್ಕೆ ವಾಪಸಾದ ನಂತರ ಮೇವಟ್‌ ಜನರನ್ನು ಅವರು ಭೇಟಿಯಾಗಲಿದ್ದಾರೆ.

'ದೇಶವನ್ನು ಬಯಲು ಶೌಚ ಮುಕ್ತಗೊಳಿಸಲು ಸರಕಾರ ಪ್ರಯತ್ನಿಸುತ್ತಿದೆ. ನಮ್ಮ ಸಂಸ್ಥೆಯೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಯೋಜನೆಗೆ ಇಡೀ ವಿಶ್ವದ ಜನ ಕೈ ಜೋಡಿಸಬೇಕು. ಅಭಿಯಾನದ ಭಾಗವಾಗಿ ಕಾರ್ಪೊರೇಟ್‌ ಸಂಸ್ಥೆಗಳು ಗ್ರಾಮಗಳನ್ನು ದತ್ತು ತೆಗೆದುಕೊಳ್ಳಬಹುದು,'ಎಂದು ವಾಷಿಂಗ್ಟನ್‌ ಡಿಸಿಯಲ್ಲಿ ಆಯೋಜಿಸಿದ್ದ ಸಮುದಾಯ ಕಾರ್ಯಕ್ರಮದಲ್ಲಿ ಪಾಠಕ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ