ಆ್ಯಪ್ನಗರ

ಮದ್ಯಕ್ಕಲ್ಲ, ಪೆಟ್ರೋಲ್‌ ಅಡಿಕ್ಟ್ ಈ ಮರ್ಕಟ!

ಸಾಮಾನ್ಯವಾಗಿ ಕೋತಿಗಳು ಎಲೆಗಳುಳ್ಳ ತರಕಾರಿ ಮತ್ತು ಹಣ್ಣು ಹಂಪಲಗಳನ್ನು ಕದ್ದು ತಿನ್ನುತ್ತವೆ.

Vijaya Karnataka Web 9 Nov 2017, 1:19 pm
ಪಾಣಿಪತ್: ಕೋತಿಗಳು ಎಲೆ, ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ತಿನ್ನೋದು ಎಲ್ಲರಿಗೂ ಗೊತ್ತು. ಆದರೆ, ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ಕೋತಿಯೊಂದು ಪೆಟ್ರೋಲ್ ಕದ್ದು ಕುಡಿಯುತ್ತಿದ್ದು, ಸ್ಥಳೀಯ ಮಾರಾಟಗಾರರಲ್ಲಿ ಆತಂಕ ಸೃಷ್ಟಿಸಿದೆ.
Vijaya Karnataka Web haryanas panipat neighbourhood under the grip of a petrol addict monkey
ಮದ್ಯಕ್ಕಲ್ಲ, ಪೆಟ್ರೋಲ್‌ ಅಡಿಕ್ಟ್ ಈ ಮರ್ಕಟ!


ಪೆಟ್ರೋಲ್ ಕುಡಿಯುವ ಚಟ ಹಚ್ಚಿಕೊಂಡಿರುವ ಕೋತಿಯ ಈ ವರ್ತನೆ ಕಂಡು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಈ ವಿಚಿತ್ರ ಕೋತಿ ಮಾರುಕಟ್ಟೆಯಲ್ಲಿ ನಿಲ್ಲಿಸಿರುವ ಬೈಕ್‌ಗಳ ಪೆಟ್ರೋಲ್ ಪೈಪ್‌ ತೆಗೆದು ಪೆಟ್ರೋಲ್ ಹಿರುವ ಮೂಲಕ ತನ್ನ ಬಾಯಾರಿಕೆಯನ್ನು ತಗ್ಗಿಸಿಕೊಳ್ಳುತ್ತಿದೆ.

ಸಾರ್ವಜನಿಕರು ಸಕಲ ರೀತಿಯಲ್ಲಿ ಯತ್ನಿಸಿದರೂ, ಈ ಮರ್ಕಟವನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ.

ಪೆಟ್ರೋಲ್ ಕುಡಿಯುವ ಕೋತಿಯ ಜನಪ್ರಿಯತೆಯೂ ಹೆಚ್ಚಾಗುತ್ತಿದ್ದು, ದೇಶಾದ್ಯಂತ ಸುದ್ದಿಯಾಗುತ್ತಿದೆ. ಈ ಮಂಗನ ವರ್ತನೆಯ ಬಗ್ಗೆ ಸಾಕಷ್ಟು ಸುದ್ದಿಗಳೂ ಪ್ರಕಟವಾಗುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ