ಆ್ಯಪ್ನಗರ

12ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಹೆಚ್‌ಸಿಎಲ್‌ನಲ್ಲಿ ಉದ್ಯೋಗ

ದ್ವಿತೀಯ ಪಿಯುಸಿ ಮುಗಿಸಿ ಹೊರ ಬರುತ್ತಿರುವ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಆಯ್ಕೆ ಮಾಡಿ ಉದ್ಯೋಗ ನೀಡಿದ ಹೆಚ್‌ಸಿಎಲ್‌

ಟೈಮ್ಸ್ ಆಫ್ ಇಂಡಿಯಾ 24 Mar 2017, 2:51 pm
ಚೆನ್ನೈ: ದೇಶದಲ್ಲೇ ನಾಲ್ಕನೇ ಅತ್ಯಂತ ದೊಡ್ಡ ತಂತ್ರಾಂಶ ಸೇವೆಗಳ ರಫ್ತು ಸಂಸ್ಥೆ ಹೆಚ್‌ಸಿಎಲ್‌ ಟೆಕ್ನಾಲಜಿ ನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ದ್ವಿತೀಯ ಪಿಯುಸಿ ಮುಗಿಸಿ ಹೊರ ಬರುತ್ತಿರುವ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಆಯ್ಕೆ ಮಾಡಿ ತನ್ನ ಸಂಸ್ಥೆಯಿಂದಲೇ ಉದ್ಯೋಗದ ಜತೆ ವಿದ್ಯಾಭ್ಯಾಸ ಒದಗಿಸುವ ಯೋಜನೆಯನ್ನು ಕಾರ್ಯಗತಗೊಳಿಸಿದೆ.
Vijaya Karnataka Web hcl hiring kids straight out of high school
12ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಹೆಚ್‌ಸಿಎಲ್‌ನಲ್ಲಿ ಉದ್ಯೋಗ


ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿರವ ಸಂಸ್ಥೆ, ಇವರಿಗೆ ವರ್ಷಕ್ಕೆ 1.8 ಲಕ್ಷ ವೇತನ ನೀಡಿ ಕೆಲಸಕ್ಕೆ ನೇಮಿಸಿಕೊಂಡಿದೆ. ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸುವಿಕೆ ಹಾಗೂ ಅದರ ಟೆಸ್ಟಿಂಗ್‌ ವಿಚಾರದಲ್ಲಿ ಕೆಲಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯೇ ತಿಳಿಸಿಕೊಡಲಿದೆ.

ಎಂಜಿನಿಯರ್‌ ಕೋರ್ಸ್‌ಗಳಲ್ಲಿ ಒದಗಿಸುವ ಮಟ್ಟವನ್ನೇ ಇಲ್ಲಿ ನೀಡಲಾಗುತ್ತದೆ, ಸುಮಾರು ಒಂಭತ್ತು ತಿಂಗಳ ಕಾಲ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಮೂರು ತಿಂಗಳ ಕಾಲ ಪ್ರಾಯೋಗಿಕ ಪಾಠಗಳನ್ನು ನಡೆಸಲಾಗುತ್ತದೆ. ಇದಾದ ಬಳಿಕ ಇವರಿಗೆ ನೇರವಾಗಿ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ.

ತಮಿಳುನಾಡಿನಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆಯಿದ್ದರೂ ಹೆಚ್ಚಿನ ವಿದ್ಯಾರ್ಥಿಗಳು ಮಧ್ಯಮ ಹಾಗೂ ಕೆಳ ವರ್ಗದಿಂದ ಬಂದವರಾಗಿದ್ದಾರೆ, ಹೀಗಾಗಿ ಹೆಚ್ಚಿನವರು ಉನ್ನತ ಮಟ್ಟದ ಕಲಿಕೆಯನ್ನು ಮೊಟಕುಗೊಳಿಸತ್ತಾರೆ. ಇವರುಗಳನ್ನು ಗುರುತಿಸಿ ನಮ್ಮ ಸಂಸ್ಥೆಯಲ್ಲಿ ಕಲಿಕೆಯ ಜತೆಗೆ ಉದ್ಯೋಗವನ್ನು ನೀಡಲಾಗುತ್ತದೆ ಎಂದು ಹೆಚ್‌ಸಿಎಲ್‌ ಉಪಾಧ್ಯಕ್ಷೆ ಶ್ರೀಮತಿ ಶಿವಶಂಕರ್‌ ತಿಳಿಸಿದ್ದಾರೆ.

ತಜ್ಞರೂ ಕೂಡಾ ಸಂಸ್ಥೆಯ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಯೋಜನೆಯಿಂದ ಹೆಚ್ಚಿನ ವಿದ್ಯಾರ್ಥಿಗಳಿ ಉಪಯೋಗವಾಗಲಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ