ಆ್ಯಪ್ನಗರ

ಠೇವಣಿದಾರರಿಗೆ ವಂಚನೆ: ಎಂಇಪಿ ಮುಖ್ಯಸ್ಥೆ ನೌಹೇರಾ ಶೇಖ್ ಬಂಧನ

ಹೀರಾ ಸಮೂಹ ಸಂಸ್ಥೆ 15 ಬೇರೆ ಬೇರೆ ಹೆಸರಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಶಾಖೆಗಳನ್ನು ಹೊಂದಿದೆ. ನೌಹೇರಾ ಶೇಖ್‌ ಅವರನ್ನು ಹೊಸದಿಲ್ಲಿಯಲ್ಲಿ ಬಂಧಿಸಲಾಗಿದ್ದು, ಮಂಗಳವಾರ ಹೈದರಾಬಾದ್‌ಗೆ ಕರೆತರಲಾಗಿದೆ.

Vijaya Karnataka 17 Oct 2018, 10:11 am
ಹೈದರಾಬಾದ್: ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಮಹಿಳಾ ಸ್ವಾವಲಂಬನೆ ಹೆಸರಿನಲ್ಲಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದ ಎಂಇಪಿ ಪಕ್ಷದ ಮುಖ್ಯಸ್ಥೆ ನೌಹೇರಾ ಶೇಖ್‌ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web nowhera sheikh


ಹೀರಾ ಸಮೂಹ ಸಂಸ್ಥೆ ಹೆಸರಿನಲ್ಲಿ ಲಾಭದಾಯಕ ಚಿನ್ನದ ಯೋಜನೆಗಳನ್ನು ಪ್ರಕಟಿಸಿ ಹೆಚ್ಚಿನ ಬಡ್ಡಿ ನೀಡುವ ಆಮಿಷ ಒಡ್ಡುತ್ತಿದ್ದ ಅವರು, ಠೇವಣಿ ಪಡೆದು ಹಣ ಮರುಪಾವತಿಸುತ್ತಿರಲಿಲ್ಲ. ಈ ಕುರಿತು ಹಲವರು ದೂರು ನೀಡಿದ್ದರು. ಹೀರಾ ಸಮೂಹ ಸಂಸ್ಥೆ 15 ಬೇರೆ ಬೇರೆ ಹೆಸರಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಶಾಖೆಗಳನ್ನು ಹೊಂದಿದೆ. ಶೇಖ್‌ ಅವರನ್ನು ಹೊಸದಿಲ್ಲಿಯಲ್ಲಿ ಬಂಧಿಸಲಾಗಿದ್ದು, ಮಂಗಳವಾರ ಹೈದರಾಬಾದ್‌ಗೆ ಕರೆತರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ