ಆ್ಯಪ್ನಗರ

ದೇಶದಲ್ಲಿ ಕೊರೊನಾದ ಹೊಸ ದಾಖಲೆ: ಒಂದೇ ದಿನ 32,695 ಹೊಸ ಕೇಸ್‌, 606 ಮಂದಿ ಸಾವು!

ಒಂದೇ ದಿನದಲ್ಲಿ 32,695 ಹೊಸ ಕೊರೊನಾ ಕೇಸ್‌ ದೃಢಪಟ್ಟಿದೆ. ಅಲ್ಲದೇ ಒಂದೇ ದಿನದಲ್ಲಿ 606 ಮಂದಿ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 968,876ಕ್ಕೆ ತಲುಪಿದೆ.

ANI 16 Jul 2020, 11:48 am
ನವದೆಹಲಿ: ದೇಶದಲ್ಲಿ ಕೊರೊನಾ ಪಾಸಿಟಿವ್‌ ಆಗುತ್ತಿರುವ ಸಂಖ್ಯೆ ಎಲ್ಲೆ ಮೀರುತ್ತಿದೆ. ಈವರೆಗೆ ದಿನದ ದಾಖಲೆ ಎಂದರೆ 29 ಸಾವಿರದ ಗಡಿಯಲ್ಲಿ ಕೊರೊನಾ ಪಾಸಿಟಿವ್‌ ಆಗಿತ್ತು. ಆದರೆ ಇದೀಗ ಈ ಸಂಖ್ಯೆ ಏಕಾಏಕಿ ಭಾರಿ ಏರಿಕೆ ಕಂಡಿದೆ. ಬುಧವಾರ ಒಂದೇ ದಿನದಲ್ಲಿ 32,695 ಹೊಸ ಕೊರೊನಾ ಕೇಸ್‌ ದೃಢಪಟ್ಟಿದೆ.
Vijaya Karnataka Web 75755812


ಅಲ್ಲದೇ ಒಂದೇ ದಿನದಲ್ಲಿ 606 ಮಂದಿ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 968,876ಕ್ಕೆ ತಲುಪಿದೆ. ಇನ್ನು ದೇಶದಲ್ಲಿ 3,31,146 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು 606 ಮಂದಿ ಕೊರೊನಾ ಸೋಂಕಿನಿಂದ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 24,915 ಆಗಿದೆ ಎಂದು ಇಲಾಖೆ ತಿಳಿಸಿದೆ.

ಗುಣಮುಖರ ದರದಲ್ಲಿ ಏರಿಕೆ!
ಇನ್ನು ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಭಾರತದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗುವ ಸಂಖ್ಯೆಯೂ ಹೆಚ್ಚುತ್ತಿದೆ. ಸದ್ಯ ದೇಶದಲ್ಲಿ ಕೊರೊನಾ ರೋಗಿಗಳ ಗುಣಮುಖ ದರ ಶೇ. 63.24 ಇದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೇ ಸಾವಿನ ದರ ಕೂಡ ತುಂಬಾನೆ ಕಡಿಮೆ ಇದ್ದು ಶೇ. 3.91 ರಷ್ಟಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಸಪ್ಟೆಂಬರ್‌ ಆರಂಭಕ್ಕೆ ಭಾರತದಲ್ಲಿ 35 ಲಕ್ಷ ಕೊರೊನಾ ಕೇಸ್‌, ಕರ್ನಾಟಕದಲ್ಲಿ 2.1 ಲಕ್ಷ: ಐಐಎಸ್‌ಸಿ ಅಧ್ಯಯನ

ಇನ್ನು ಬೆಂಗಳೂರಿನ ಐಐಎಸ್‌ಸಿ ಸಪ್ಟೆಂಬರ್‌ ಆರಂಭಕ್ಕೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂವತ್ತೈದು ಲಕ್ಷಕ್ಕೆ ತಲುಪಲಿದೆ ಎಂದು ಅಂದಾಜಿಸಿದೆ. ಕರ್ನಾಟಕದಲ್ಲಿ ಸುಮಾರು ಎರಡು ಲಕ್ಷ ಕೊರೊನಾ ಸೋಂಕಿತರು ಇರಲಿದ್ದಾರೆ ಎಂದು ಮಾಹಿತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ