ಆ್ಯಪ್ನಗರ

ವಿಮಾನ ಅಪಹರಣ ಬೆದರಿಕೆ: ಎಲ್ಲ ಏರ್‌ಪೋರ್ಟ್‌ಗಳಲ್ಲಿ ಕಟ್ಟೆಚ್ಚರ

ಪ್ರಯಾಣಿಕರು ವಿಮಾನ ಏರುವ ಮುನ್ನ ಬಿಗಿ ತಪಾಸಣೆ ಹಾಗೂ ಕಾರು ಪಾರ್ಕಿಂಗ್ ಸ್ಥಳಗಳಿಗೆ ತೆರಳುವ ವಾಹನಗಳ ತಪಾಸಣೆ ಸೇರಿದಂತೆ ಎಲ್ಲ ಬಗೆಯ ತಪಾಸಣೆ ನಿಯಮಗಳನ್ನು ಬಿಗಿಯಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ. ಏರ್‌ ಇಂಡಿಯಾದ ವಿಮಾನ ನಿಲ್ದಾಣ ನಿಯಂತ್ರಣ ಕಚೇರಿಗೆ ಶನಿವಾರ ಬಂದ ಫೋನ್ ಕರೆಯೊಂದು ಇಂಡಿಯನ್‌ ಏರ್‌ಲೈನ್ಸ್ ವಿಮಾನವನ್ನು ಪಾಕಿಸ್ತಾನಕ್ಕೆ ಹೈಜಾಕ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

Vijaya Karnataka Web 23 Feb 2019, 9:29 pm
ಹೊಸದಿಲ್ಲಿ: ಮುಂಬಯಿಯ ವಿಮಾನ ಸಂಸ್ಥೆಯ ಕಚೇರಿಗೆ ಬಂದ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಭಾರತೀಯ ವಿಮಾನವೊಂದನ್ನು ಪಾಕಿಸ್ತಾನಕ್ಕೆ ಹೈಜಾಕ್ ಮಾಡಲಾಗುವುದು ಎಂದು ಫೋನ್ ಕರೆಯಲ್ಲಿ ಎಚ್ಚರಿಸಲಾಗಿತ್ತು.
Vijaya Karnataka Web Airport Security


ಪ್ರಯಾಣಿಕರು ವಿಮಾನ ಏರುವ ಮುನ್ನ ಬಿಗಿ ತಪಾಸಣೆ ಹಾಗೂ ಕಾರು ಪಾರ್ಕಿಂಗ್ ಸ್ಥಳಗಳಿಗೆ ತೆರಳುವ ವಾಹನಗಳ ತಪಾಸಣೆ ಸೇರಿದಂತೆ ಎಲ್ಲ ಬಗೆಯ ತಪಾಸಣೆ ನಿಯಮಗಳನ್ನು ಬಿಗಿಯಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ.

ಏರ್‌ ಇಂಡಿಯಾದ ವಿಮಾನ ನಿಲ್ದಾಣ ನಿಯಂತ್ರಣ ಕಚೇರಿಗೆ ಶನಿವಾರ ಬಂದ ಫೋನ್ ಕರೆಯೊಂದು ಇಂಡಿಯನ್‌ ಏರ್‌ಲೈನ್ಸ್ ವಿಮಾನವನ್ನು ಪಾಕಿಸ್ತಾನಕ್ಕೆ ಹೈಜಾಕ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

ಪುಲ್ವಾಮಾ ದಾಳಿಯ ಬಳಿಕ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಭದ್ರತೆ ಹೆಚ್ಚಿಸಲಾಗಿತ್ತು. ಇದೀಗ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ನಾಗರಿಕ ವಿಮಾನ ಯಾನ ಭದ್ರತಾ ಬ್ಯೂರೋ (ಬಿಸಿಎಎಸ್‌) ಎಲ್ಲ ವಿಮಾನ ನಿಲ್ದಾಣಗಳು ಮತ್ತು ವಿಮಾನ ಸಂಸ್ಥೆಗಳಿಗೆ ಅನುಸರಿಸಲೇಬೇಕಾದ ಕ್ರಮಗಳ ಪಟ್ಟಿಯನ್ನು ನೀಡಿದೆ.

ಟರ್ಮಿನಲ್‌ ಮತ್ತು ಕಾರ್ಯಾಚರಣೆ ಸ್ಥಳಗಳಿಗೆ ಪ್ರವೇಶಕ್ಕೆ ಕಠಿಣ ನಿರ್ಬಂಧ ವಿಧಿಸಿ; ಏರ್‌ಪೋರ್ಟ್‌ಗೆ ಬರುವ ವಾಹನಗಳ ತೀವ್ರ ತಪಾಸಣೆ; ಪ್ರಯಾಣಿಕರು, ಸಿಬ್ಬಂದಿ, ಬ್ಯಾಗೇಜ್‌, ಕಾರ್ಗೋ ಮತ್ತು ಕೇಟರಿಂಗ್‌ ಸಿಬ್ಬಂದಿಯ ಬಿಗಿ ತಪಾಸಣೆ; ಅಲ್ಲದೆ ಪ್ರತಿ ಪ್ರವೇಶ ದ್ವಾರದಲ್ಲೂ ಹೆಚ್ಚು ಹೆಚ್ಚು ತಪಾಸಣೆ ನಡೆಸಿ ಎಂದು ಬಿಸಿಎಎಸ್‌ ಸೂಚನೆ ನೀಡಿದೆ. ಕ್ಷಿಪ್ರ ಪ್ರತಿಸ್ಪಂದನಾ ತಂಡಗಳ (ಕ್ಯುಆರ್‌ಟಿ) ನಿಯೋಜನೆ ಸೇರಿದಂತೆ ಸುತ್ತಲಿನ ಭದ್ರತೆ ಹೆಚ್ಚಿಸುವಂತೆ ನಿರ್ದೇಶನ ನೀಡಿದೆ.

ಬೆದರಿಕೆ ಕರೆಗಳು ಹುಸಿ ಕರೆಯಾಗಿದ್ದರೂ ಭದ್ರತಾ ಸಂಸ್ಥೆಗಳು ಹಗುರವಾಗಿ ಪರಿಗಣಿಸಕೂಡದು ಎಂದು ಭದ್ರತಾ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಪುಲ್ವಾಮಾ ದಾಳಿಯ ಬಳಿಕ ಸಿಐಎಸ್‌ಎಫ್‌ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಿದೆ.

ವಿಮಾನ ಅಪಹರಣದ ಸಂದರ್ಭ ಅನುಸರಿಸಬೇಕಾದ ನೂತನ ಕ್ರಮಗಳನ್ನು ಒಳಗೊಂಡ ಅಪಹರಣ ವಿರೋಧಿ (ತಿದ್ದುಪಡಿ) ವಿಧೇಯಕವ ಅನ್ನು ಸಂಸತ್ತು 2014ರಲ್ಲಿ ಅನುಮೋದಿಸಿತ್ತು.

ಅಪಹರಣಕಾರರಿಗೆ ಮರಣದಂಡನೆ ವಿಧಿಸುವ ಅವಕಾಶವನ್ನು ಈ ಕಾಯ್ದೆ ಒಳಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ