ಆ್ಯಪ್ನಗರ

ಹಿಂದೂ ಹುಡುಗಿ- ಮುಸ್ಲಿಂ ಹುಡುಗನ ಅಪರೂಪದ ಪ್ರೇಮ ಕಥೆಯಿದು

ಗುಜರಾತ್‌ನ ಶ್ರೀಮಮತ ಕುಟುಂಬದ ಹಿಂದೂ ಯುವತಿ ಮತ್ತು ದಿನಗೂಲಿ ಮುಸ್ಲಿಂ ಯುವಕನ ಮಧ್ಯೆ ಬಾಲಿವುಡ್ ಪ್ರೇಮಕಥೆಯನ್ನು ಹೋಲುವಂಥ ಪ್ರೀತಿ.

ಏಜೆನ್ಸೀಸ್ 16 Jun 2016, 11:17 am
ಕೋಲ್ಕೊತಾ: ಗುಜರಾತ್‌ನ ಶ್ರೀಮಂತ ಕುಟುಂಬದ ಹಿಂದೂ ಯುವತಿ ಮತ್ತು ದಿನಗೂಲಿ ಮುಸ್ಲಿಂ ಯುವಕನ ಮಧ್ಯೆ ಬಾಲಿವುಡ್ ಪ್ರೇಮಕಥೆಯನ್ನು ಹೋಲುವಂಥ ಪ್ರೀತಿ. ಆದರೆ ಕೋರ್ಟ್‌ ಆದೇಶವು ಈ ಕಥೆಯ ನಾಯಕ, ನಾಯಕಿಯಬದುಕನ್ನು ಎಲ್ಲಿಗೆ ತಂದು ನಿಲ್ಲಿಸಲಿದೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
Vijaya Karnataka Web hindu girl and muslim boys rare love story
ಹಿಂದೂ ಹುಡುಗಿ- ಮುಸ್ಲಿಂ ಹುಡುಗನ ಅಪರೂಪದ ಪ್ರೇಮ ಕಥೆಯಿದು

ಪಶ್ಚಿಮ ಮಿಡ್ನಾಪುರದ ಸರಬಾ ಗ್ರಾಮದ ನಿವಾಸಿ ಸೇಖ್‌ ಶಾರುಖ್ ಪೈಪ್‌ ಲೈನ್ ಕಾಮಗಾರಿಗೆಂದು ಗುಜರಾತ್‌ ಸೇರಿ ಸೂರತ್‌ನಲ್ಲಿ ರಾಮ್‌ಬಾನು ಚೌಧರಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿರುತ್ತಾನೆ.

ಮನೆ ಮಾಲೀಕ ಚೌಧರಿ ಅವರ ಮಗಳು ರಾಣಿ ಪರಸ್ಪರ ಹತ್ತಿರವಾಗುತ್ತಾರೆ. ಆದರೆ ಇವರಿಬ್ಬರಿಗೂ ಪ್ರೇಮದ ಗುಂಗಿನಲ್ಲಿ ತಮ್ಮ ಧರ್ಮ, ಸಾಮಾಜಿಕ ಸ್ಥಿತಿ ಗತಿ ಯಾವುದರ ಯೋಚನೆಯೂ ಕಾಡಲಿಲ್ಲ. ಇದೇ ಪ್ರೀತಿ 'ಲವ್‌ ಜಿಹಾದ್' ಆಯಿತು. ವಿಷಯ ತಿಳಿದ ಮನೆ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವೆ ಎಂಬ ಬೆದರಿಕೆಯೊಡ್ಡಿ ಮಗಳನ್ನು ಮನೆಯೊಳಗೆ ಕೂಡಿ ಹಾಕಿದರು. ಬಾಡಿಗೆದಾರ ಶಾರುಖ್‌ನನ್ನು ಮನೆಯಿಂದ ಓಡಿಸಿದರು. ಆದರೆ ಈ ಪ್ರೇಮಿಗಳ ವ್ಯವಹಾರ ಫೇಸ್‌ಬುಕ್‌ನಲ್ಲಿ ಮುಂದುವರಿದಿತ್ತು.

18ನೇ ಹುಟ್ಟುಹಬ್ಬದ ಹಿಮದಿಬ ದಿನ ರಾಣಿ ಮನೆಯಿಂದ ಪರಾರಿಯಾಗಿ ಸೂರತ್‌ನಿಂದ ಪ್ರಿಯಕರನನ್ನು ಹುಡುಕಿಕೊಂಡು ಮಿಡ್ನಾಪುರಕ್ಕೆ ಪ್ರಯಾಣಿಸಿದಳು. ಆದರೆ ಇದರಿಂದ ಭೀತಿಗೊಂಡ ಶಾರುಖ್‌ ಕುಟುಂಬ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸರು ಆಕೆಯನ್ನು ಸರಕಾರಿ ಗೃಹಕ್ಕೆ ಕಳಿಸಿದ್ದಾರೆ. ಇತ್ತ ರಾಣಿಯ ತಂದೆ ಮಗಳನ್ನು ಶಾರುಖ್‌ ಅಪಹರಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು.

18 ವರ್ಷ ಪೂರ್ಣಗೊಂಡ ರಾಣಿ ತಾನು ಮನೆಗೆ ವಾಪಸ್ ಹೋಗುವುದಿಲ್ಲ ಎಂದು ಮಿಡ್ನಾಪುರದಲ್ಲಿ ನ್ಯಾಯಾಲಯಕ್ಕೆ ತಿಳಿಸುತ್ತಾಳೆ. ಆದರೆ ನ್ಯಾಯಮೂರ್ತಿ ಮಂಜುಶ್ರೀ ಮಂಡಲ್ ಅದಕ್ಕೆ ಸೊಪ್ಪು ಹಾಕದೆ ಪೊಲೀಸ್‌ ರಕ್ಷಣೆಯಲ್ಲಿ ಗುಜರಾತ್‌ಗೆ ಕಳಿಸುವಂತೆ ಆದೇಶಿಸಿದರು.

ಆದರೆ ಮನೆಗೆ ಹೋದರೆ ಪೋಷಕರೇ ಕೊಲೆ ಮಾಡಿ ಬಿಡುತ್ತಾರೆ ಎಂದು ಹೆದರಿದ ರಾಣಿ ತಾನು ತವರಿಗೆ ವಾಪಸ್ ಹೋಗಲಾರೆ ಎಂದು ಮತ್ತೆ ಮತ್ತೆ ಮನವಿ ಮಾಡಿದರೂ ನ್ಯಾಯಮೂರ್ತಿಯವರು ಒಪ್ಪಲಿಲ್ಲ.

ಆದರೆ ದೇಶದಲ್ಲಿ ಮರ್ಯಾದೆಗೇಡು ಹತ್ಯೆ ಎಂಬುದು ಸಾಮಾನ್ಯವಾಗಿದ್ದು, ಗುಜರಾತ್‌ನಲ್ಲಿ ರಾಣಿಗೆ ಏನು ಕಾದಿದೆ ಎಂಬುದು ಪ್ರಶ್ನೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ