ಆ್ಯಪ್ನಗರ

ಕೃಷ್ಣನಿಗಾಗಿ ಒಂದಾದ ಆಗ್ರಾದ ಹಿಂದೂ- ಮುಸ್ಲಿಮರು

ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಕೋಮುದಳ್ಳುರಿ ಹೊತ್ತಿ ಉರಿಸಲು ಎಷ್ಟೇ ಪಿತೂರಿ ನಡೆಸಲಿ, ಆ ನೆಲದ ಮೂಲ ತತ್ವ ವಸುಧೈವ ಕುಟುಂಬಕಂ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇದಕ್ಕೊಂದು ಉದಾಹರಣೆ ಆಗ್ರಾದ ನಿವಾಸಿಗಳೆಲ್ಲ ಒಂದಾಗಿ ಶ್ರೀಕೃಷ್ಣಾಷ್ಟಮಿಯನ್ನಾಚರಿಸುತ್ತಿರುವುದು.

Indiatimes 4 Sep 2018, 2:43 pm
ಆಗ್ರಾ: ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಕೋಮುದಳ್ಳುರಿ ಹೊತ್ತಿ ಉರಿಸಲು ಎಷ್ಟೇ ಪಿತೂರಿ ನಡೆಸಲಿ, ಆ ನೆಲದ ಮೂಲ ತತ್ವ ವಸುಧೈವ ಕುಟುಂಬಕಂ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇದಕ್ಕೊಂದು ಉದಾಹರಣೆ ಆಗ್ರಾದ ನಿವಾಸಿಗಳೆಲ್ಲ ಒಂದಾಗಿ ಶ್ರೀಕೃಷ್ಣಾಷ್ಟಮಿ ಆಚರಿಸುತ್ತಿರುವುದು.
Vijaya Karnataka Web MUslim- BJP


ಧರ್ಮ ಸಮನ್ವಯತೆಗೊಂದು ಸ್ಪಷ್ಟ ನಿದರ್ಶನವೆಂಬಂತೆ ಆಗ್ರಾದ ಖೇರಿಯಾ ಮೋಡ್ ಪ್ರದೇಶದ ಹಿಂದೂ- ಮುಸ್ಲಿಮರು ಒಗ್ಗೂಡಿ ಮುರಳಿ ಮನೋಹರನ ಜನ್ಮದಿನವನ್ನಾಚರಿಸಿದ್ದಾರೆ. ಈ ಸಂಭ್ರಮಾಚರಣೆ ಹೊಸತಲ್ಲ. ಕಳೆದ 15 ವರ್ಷಗಳಿಂದ ಸಂಪ್ರದಾಯವಾಗಿ ನಡೆದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸುವ ಸ್ಥಳೀಯ ನಿವಾಸಿ ಶಾದಿಲ್ ಖುರೇಶಿ ನಾವು ಅಷ್ಟಮಿ ಹಬ್ಬದಾಚರಣೆಗೆ ಹಲವು ತಿಂಗಳ ಮೊದಲಿನಿಂದಲೇ ಸಿದ್ಧತೆ ನಡೆಸುತ್ತೇವೆ. ಹಿಂದೂ- ಮುಸ್ಲಿಮರೆಲ್ಲರೂ ಸೇರಿ ಕಷ್ಟಪಟ್ಟು ತಯಾರಿ ನಡೆಸುತ್ತಾರೆ. ಅಲಂಕಾರದಿಂದ ಹಿಡಿದು ಎಲ್ಲ ಕೆಲಸವನ್ನು ಕೂಡಿ ಮಾಡುತ್ತೇವೆ ಎನ್ನುತ್ತಾರೆ.

ಹಬ್ಬಗಳನ್ನಾಚರಿಸಲು ಧರ್ಮ, ಜಾತಿಯ ತಡೆ ಇಲ್ಲ. ನಾವಿದನ್ನು 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ ಮತ್ತು ನಮ್ಮ ಮುಂದಿನ ಪೀಳಿಗೆ ಸಹ ಇದನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಬಯಸುತ್ತೇವೆ. ದೇಶದಲ್ಲಿರುವ ಎಲ್ಲ ಹಿಂದೂ- ಮುಸ್ಲಿಮರು ಸೌಹಾರ್ದತೆಯಿಂದ ಜೀವಿಸುವಂತಾಗಲಿ ಎಂಬುದೇ ನಮ್ಮ ಆಶಯ ಎನ್ನುತ್ತಾರೆ ಖುರೇಶಿ.

ಪ್ರೀತಿ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರಲು ನಾವು ಈ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದೇವೆ ಎಂದು ಹಬ್ಬದಾಚರಣೆಯ ಉಸ್ತುವಾರಿ ಹೊತ್ತಿರುವ ಪ್ರಾದೇಶಿಕ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಹರಿಶಂಕರ್ ಶುಕ್ಲಾ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ