ಆ್ಯಪ್ನಗರ

ಪುಲ್ವಾಮಾ ಮಾದರಿ ದಾಳಿಯ ಹೊಣೆ ಹೊತ್ತ ಹಿಜ್ಬುಲ್ ಮುಜಾಹಿದೀನ್

ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್ ಸಮೀಪವೇ ಸ್ಯಾಂಟ್ರೋ ಕಾರು ಸ್ಫೋಟಗೊಂಡಿತ್ತು. ಕಾರು ಹಿಂದಿನಿಂದ ಬಸ್‌ಗೆ ಗುದ್ದಿತ್ತಾದರೂ ಯಾವುದೇ ರೀತಿಯ ಅನಾಹುತ ಸಂಭವಿಸಿರಲಿಲ್ಲ. ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅನಾಹುತ ಸಂಭವಿಸಿದೆ ಎಂದು ಮೊದಲು ಭಾವಿಸಲಾಗಿತ್ತು.

Times Now 31 Mar 2019, 12:32 pm
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬನಿಹಾಲ್ ನಗರದಲ್ಲಿ ಶನಿವಾರ ಮುಂಜಾನೆ ನಡೆದ ಪುಲ್ವಾಮಾ ಮಾದರಿ ದಾಳಿಯ ಹೊಣೆಯನ್ನು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಹೊತ್ತು ಕೊಂಡಿದೆ.
Vijaya Karnataka Web jammu


ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್ ಸಮೀಪವೇ ಸ್ಯಾಂಟ್ರೋ ಕಾರು ಸ್ಫೋಟಗೊಂಡಿತ್ತು. ಕಾರು ಹಿಂದಿನಿಂದ ಬಸ್‌ಗೆ ಗುದ್ದಿತ್ತಾದರೂ ಯಾವುದೇ ರೀತಿಯ ಅನಾಹುತ ಸಂಭವಿಸಿರಲಿಲ್ಲ. ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅನಾಹುತ ಸಂಭವಿಸಿದೆ ಎಂದು ಮೊದಲು ಭಾವಿಸಲಾಗಿತ್ತು. ಆದರೆ ಬಳಿಕ ಘಟನೆ ನಡೆದ ಸ್ಥಳದ ಸಮೀಪವೇ ಸುಸೈಡ್ ನೋಟ್ ಪತ್ತೆಯಾಗಿತ್ತು. ಬಳಿಕವಷ್ಟೇ ಇದು ಹಿಜ್ಬುಲ್ ಮುಜಾಹಿದೀನ ಸಂಘಟನೆಯವರು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿ ಯತ್ನ ಎಂದು ತಿಳಿದು ಬಂತು.

ಘಟನೆ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಕಾರನ್ನು ಚಲಿಸುತ್ತಿದ್ದ ಬೆಂಗಾವಲು ವಾಹನದ ಕಡೆಗೆ ನ್ಯೂಟ್ರಲ್ ಗೇರ್ ಮೇಲಿಟ್ಟು ಆತ ಸ್ಥಳದಿಂದ ಓಡಿ ಹೋಗಿರಬಹುದೆಂದು ಹೇಳಲಾಗುತ್ತಿದೆ. ಕಾರಿನ ಮಾಲೀಕನಾಗಿಗಾಗಿ ಭದ್ರತಾ ಪಡೆ ಶೋಧ ನಡೆಸುತ್ತಿದೆ.

ಸಿಆರ್‌ಪಿಎಫ್‌ನ 10 ಬೆಂಗಾವಲು ವಾಹನಗಳು ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಈ ಕೃತ್ಯವನ್ನು ನಡೆಸಲಾಗಿದೆ. ಆದರೆ ಎಲ್ಲರೂ ಅಪಾಯದಿಂದ ಮುಕ್ತರಾಗಿದ್ದಾರೆ. ಸ್ಪೋಟದ ತೀವ್ರತೆ ಕಡಿಮೆ ಇದ್ದುದರಿಂದ ಜೀವಹಾನಿಯಾಗಿಲ್ಲ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ.

ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ 40 ಜನ ಸೈನಿಕರು ಹುತಾತ್ಮರಾಗಿದ್ದರು.

ಕಾಶ್ಮೀರದಲ್ಲಿ ಪುಲ್ವಾಮಾ ದಾಳಿ ಮಾದರಿಯಲ್ಲಿ ಕಾರು ಬಾಂಬ್ ದಾಳಿ ನಡೆಸಲು ಉಗ್ರರು 12ಕ್ಕೂ ಹೆಚ್ಚು ವಾಹನಗಳನ್ನು ಸಿದ್ಧಪಡಿಸಿಟ್ಟಿದ್ದಾರೆಂದು ಗುಪ್ತಚರ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಇದೀಗ ಮತ್ತೊಂದು ಕಾರು ಸ್ಪೋಟಗೊಂಡಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ