ಆ್ಯಪ್ನಗರ

14 ಪ್ರಯಾಣಿಕರಿಗೆ ಕೊರೊನಾ, ಏರ್‌ ಇಂಡಿಯಾ ವಿಮಾನಕ್ಕೆ ಹಾಂಕಾಂಗ್‌ ನಿರ್ಬಂಧ

ಆಗಸ್ಟ್‌ 14 ರಂದು ಹಾಂಕಾಂಗ್‌ನಲ್ಲಿ ಇಳಿದ ಏರ್‌ ಇಂಡಿಯಾ ವಿಮಾನವೊಂದರಲ್ಲೇ 11 ಪ್ರಯಾಣಿಕ ವರದಿ ಪಾಸಿಟಿವ್‌ ಬಂದಿದೆ. ಹೀಗಾಗಿ ಆಗಸ್ಟ್‌ 18 ರಿಂದ 31ರವರೆಗೆ ಏರ್‌ ಇಂಡಿಯಾ ವಿಮಾನಗಳ ಲ್ಯಾಂಡಿಂಗ್‌ಗೆ ನಿರ್ಬಂಧ ಹೇರಲಾಗಿದೆ.

Agencies 21 Aug 2020, 11:41 pm
ಹೊಸದಿಲ್ಲಿ: ಆಗಸ್ಟ್‌ 14ರಂದು ಏರ್‌ ಇಂಡಿಯಾ ವಿಮಾನದಲ್ಲಿ ದಿಲ್ಲಿಯಿಂದ ಹಾಂಕಾಂಗ್‌ಗೆ ಪ್ರಯಾಣ ಬೆಳೆಸಿದವರ ಪೈಕಿ 14 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ತಿಂಗಳಾಂತ್ಯದವರೆಗೆ (ಎರಡು ವಾರಗಳವರೆಗೆ) ಏರ್ ‌ಇಂಡಿಯಾ ವಿಮಾನಗಳಿಗೆ ಹಾಂಕಾಂಗ್‌ಗೆ ನಿರ್ಬಂಧ ಹೇರಿದೆ.
Vijaya Karnataka Web Air India


ಕಳೆದ ಜುಲೈನಲ್ಲಿ ಹಾಂಕಾಂಗ್‌ ಸರಕಾರ ಹೊರಡಿಸಿದ್ದ ಮಾರ್ಗಸೂಚಿಗಳ ಪ್ರಕಾರ 72 ಗಂಟೆಗಳಿಗೂ ಮುನ್ನ ಮಾಡಿಸಲಾದ ಕೊರೊನಾ ಪತ್ತೆ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್‌ ಬಂದಿದ್ದರೆ ಮಾತ್ರ ಭಾರತದ ಯಾತ್ರಿಕರು ಹಾಂಕಾಂಗ್‌ ಪ್ರವೇಶಿಸಬಹುದು ಎನ್ನಲಾಗಿತ್ತು.

ಭಾರತದವಲ್ಲದೆ ಪಾಕಿಸ್ತಾನ, ನೇಪಾಳ, ಇಂಡೋನೇಷ್ಯಾ, ಬಾಂಗ್ಲಾದೇಶ, ಫಿಲಿಪ್ಪೀನ್ಸ್‌, ಅಮೆರಿಕ, ದಕ್ಷಿಣ ಆಫ್ರಿಕಾ ಯಾತ್ರಿಕರಿಗೂ ಪ್ರಿ -ಫ್ಲೆಟ್‌‌ ಕೋವಿಡ್‌-19 ನೆಗೆಟಿವ್‌ ಟೆಸ್ಟ್‌ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿತ್ತು.

ಇದೀಗ ಆಗಸ್ಟ್‌ 14 ರಂದು ಹಾಂಕಾಂಗ್‌ನಲ್ಲಿ ಇಳಿದ ಏರ್‌ ಇಂಡಿಯಾ ವಿಮಾನವೊಂದರಲ್ಲೇ 11 ಪ್ರಯಾಣಿಕ ವರದಿ ಪಾಸಿಟಿವ್‌ ಬಂದಿದೆ. ಆಗಸ್ಟ್‌ 20ರ ವೇಳೆಗೆ ಈ ಸಂಖ್ಯೆ 14ಕ್ಕೆ ಮುಟ್ಟಿದೆ. ಹೀಗಾಗಿ ಆಗಸ್ಟ್‌ 18 ರಿಂದ 31ರವರೆಗೆ ಏರ್‌ ಇಂಡಿಯಾ ವಿಮಾನಗಳ ಲ್ಯಾಂಡಿಂಗ್‌ಗೆ ನಿರ್ಬಂಧ ಹೇರಲಾಗಿದೆ.

ಇದುವರೆಗೆ ಹಾಂಕಾಂಗ್‌ನಲ್ಲಿ 4,632 ಕೊರೊನಾ ವೈರಸ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಆ ಪೈಕಿ 3,900 ಮಂದಿ ಗುಣಮುಖರಾಗಿದ್ದು, 75 ಸೋಂಕಿತರು ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ