ಆ್ಯಪ್ನಗರ

ಮಾನ್ಸೂನ್‌ ಆತಂಕ ಬೇಡ, ಇನ್ನೆರಡು ತಿಂಗಳು ಉತ್ತಮ ಮಳೆ

ಬಿಹಾರ, ಜಾರ್ಖಂಡ್‌ ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ದೇಶದೆಲ್ಲೆಡೆ ಜುಲೈ ಅಂತ್ಯದವರೆಗೆ ಅತ್ಯುತ್ತಮ ಮಳೆ ಹಂಚಿಕೆಯಾಗಿದ್ದು, ನೈಋುತ್ಯ ಮುಂಗಾರಿನ ಎರಡನೇ ಘಟ್ಟವಾದ ಆಗಸ್ಟ್‌-ಸೆಪ್ಟೆಂಬರ್‌ನಲ್ಲೂ ಉತ್ತಮ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಹೇಳಿದೆ.

Vijaya Karnataka 4 Aug 2018, 9:54 am
ಹೊಸದಿಲ್ಲಿ: ಬಿಹಾರ, ಜಾರ್ಖಂಡ್‌ ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ದೇಶದೆಲ್ಲೆಡೆ ಜುಲೈ ಅಂತ್ಯದವರೆಗೆ ಅತ್ಯುತ್ತಮ ಮಳೆ ಹಂಚಿಕೆಯಾಗಿದ್ದು, ನೈಋುತ್ಯ ಮುಂಗಾರಿನ ಎರಡನೇ ಘಟ್ಟವಾದ ಆಗಸ್ಟ್‌-ಸೆಪ್ಟೆಂಬರ್‌ನಲ್ಲೂ ಉತ್ತಮ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಹೇಳಿದೆ.
Vijaya Karnataka Web Mansoon 1


ಮುಂದಿನ ಎರಡು ತಿಂಗಳಲ್ಲಿ ಮಳೆ ಹಂಚಿಕೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಗಾಗಿ ಮುಂಗಾರು ಕೃಷಿ ಬೆಳೆಗಳಿಗೆ ಆಶಾದಾಯಕ ವಾತಾವರಣವಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಮಳೆ ಲೆಕ್ಕಾಚಾರದ ಪ್ರಕಾರ, ದೀರ್ಘಾಂತರ ಸರಾಸರಿಯ ಶೇಕಡಾ 96-104ರಷ್ಟು ಮಳೆ ಬಂದರೆ ಅದನ್ನು ವಾಡಿಕೆ ಮಳೆ ಎಂದು ಪರಿಗಣಿಸಲಾಗುತ್ತದೆ. 90-96% ಇದ್ದರೆ ಸಾಮಾನ್ಯಕ್ಕಿಂತ ಕಡಿಮೆ ಎನ್ನಲಾಗುತ್ತದೆ. ಆಗಸ್ಟ್‌ ತಿಂಗಳಲ್ಲಿ ಶೇಕಡಾ 9ರಷ್ಟು ವ್ಯತ್ಯಾಸ ನಿರೀಕ್ಷೆಯೊಂದಿಗೆ 96% ಮಳೆ ಬೀಳಬಹುದು ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಹವಾಮಾನ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಎಂ.ಮಹಾಪಾತ್ರ ಅವರ ಪ್ರಕಾರ, ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ 94ರಿಂದ 100 ಶೇಕಡಾ ಮಳೆ ಬೀಳಬಹುದು.

ಸ್ಕೈಮೆಟ್‌ ಹೇಳುವುದೇನು?:
ಈ ನಡುವೆ ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್‌, ಪೆಪಿಫಿಕ್‌ ಸಾಗರದ ಮೇಲ್ಮೈ ಉಷ್ಣತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಿದೆ.

ಬಿದ್ದ ಮಳೆ ಪ್ರಮಾಣ (ಮಿ.ಮೀಗಳಲ್ಲಿ)

ತಿಂಗಳು ಪ್ರಮಾಣ ವಾಡಿಕೆ ಮಳೆ

ಜೂನ್‌ 155.3 163.5

ಜುಲೈ 272.4 289.2

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ