ಆ್ಯಪ್ನಗರ

ಗಡಿ ವಿಷಯದಲ್ಲಿ ರಾಜಕೀಯ ಮೇಲಾಟಗಳಿಗೆ ಆಸ್ಪದ ಬೇಡ: ಯೋಧರ ಬೆಂಬಲಿಸಲು ಸಂಸದರಿಗೆ ಮೋದಿ ಮನವಿ

ಗಡಿ ರಕ್ಷಣೆ ವಿಷಯದಲ್ಲಿ ರಾಜಕೀಯ ಮೇಲಾಟಗಳಿಗೆ ಆಸ್ಪದ ನೀಡಬೇಡಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಸಂಸದರೆಲ್ಲರೂ ಒಗ್ಗಟ್ಟಿನಿಂದ ಯೋಧರ ಬೆನ್ನಿಗೆ ನಿಲ್ಲಬೇಕು. ದೇಶದ ಗಡಿಗಳನ್ನು ಕಾಪಾಡುವ ಧೈರ್ಯಶಾಲಿ ವೀರ ಸೈನಿಕರ ಬೆನ್ನ ಹಿಂದೆ ಇಡೀ ರಾಷ್ಟ್ರವು ಒಗ್ಗಟ್ಟಿನಿಂದ ನಿಂತಿರುವಂತೆಯೇ ಸಂಸತ್ತು ಕೂಡ ನಿಲ್ಲಬೇಕು ಎಂದು ಕೇಳಿಕೊಂಡಿದ್ದಾರೆ.

Agencies 14 Sep 2020, 9:20 pm
ಹೊಸದಿಲ್ಲಿ: ದೇಶದ ಗಡಿಗಳನ್ನು ಕಾಪಾಡುವ ಧೈರ್ಯಶಾಲಿ ವೀರ ಸೈನಿಕರ ಬೆನ್ನ ಹಿಂದೆ ಇಡೀ ರಾಷ್ಟ್ರವು ಒಗ್ಗಟ್ಟಿನಿಂದ ನಿಂತಿರುವಂತೆಯೇ ಸಂಸತ್ತು ಕೂಡ ಸರ್ವಾನುಮತದ ಸಮರ್ಥ ಸಂದೇಶವನ್ನು ರವಾನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vijaya Karnataka Web hope parliament sends message that nation stands with soldiers says pm narendra modi
ಗಡಿ ವಿಷಯದಲ್ಲಿ ರಾಜಕೀಯ ಮೇಲಾಟಗಳಿಗೆ ಆಸ್ಪದ ಬೇಡ: ಯೋಧರ ಬೆಂಬಲಿಸಲು ಸಂಸದರಿಗೆ ಮೋದಿ ಮನವಿ


ಸಂಸತ್‌ ಅಧಿವೇಶನಕ್ಕೂ ಮೊದಲು ಮಾಧ್ಯಮಗಳ ಜತೆ ಮಾತನಾಡಿದ ಪ್ರಧಾನಿ,''ಗಡಿ ರಕ್ಷಣೆ ವಿಷಯದಲ್ಲಿ ರಾಜಕೀಯ ಮೇಲಾಟಗಳಿಗೆ ಆಸ್ಪದ ನೀಡಬೇಡಿ. ಸಂಸದರೆಲ್ಲರೂ ಒಗ್ಗಟ್ಟಿನಿಂದ ಯೋಧರ ಬೆನ್ನಿಗೆ ನಿಲ್ಲಬೇಕು. ಹಾಗೆ ಮಾಡುವುದು ನಮ್ಮೆಲ್ಲರ ನಿರ್ಣಾಯಕ ಜವಾಬ್ದಾರಿ ಕೂಡ ಹೌದು,'' ಎಂದು ಹೇಳಿದರು.

ಲಡಾಖ್‌ ಭಾಗದ ಎಲ್‌ಎಸಿಯಲ್ಲಿ ಚೀನಾ ಸೈನಿಕರ ಉದ್ಧಟತನದಿಂದ ಸವಾಲಿನ ಸನ್ನಿವೇಶ ನಿರ್ಮಾಣಗೊಂಡಿದೆ. ಈ ಬಿಕ್ಕಟ್ಟನ್ನು ಸರಕಾರ ಸಮರ್ಥವಾಗಿ ನಿಭಾಯಿಸಿಲ್ಲ ಎನ್ನುವ ಟೀಕೆಗಳನ್ನು ಪ್ರತಿಪಕ್ಷಗಳು ಮಾಡಿವೆ. ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ತುದಿಗಾಲ ಮೇಲೆ ನಿಂತಿವೆ. ಇದನ್ನು ಗಮನದಲ್ಲಿಟ್ಟುಕೊಂಡೇ ಪ್ರಧಾನಿ ಮೋದಿ, ಸಂಸದರ ಹೊಣೆಗಾರಿಕೆಯ ಕುರಿತು ಎಚ್ಚರಿಸಿದರು.

ಮಂಗಳವಾರ ಸಂಸತ್ತು ಉದ್ದೇಶಿಸಿ ರಾಜನಾಥ್ ಭಾಷಣ?: ಲಡಾಖ್ ವರದಿ ಒಪ್ಪಿಸಲಿದ್ದಾರಾ ರಕ್ಷಣಾ ಸಚಿವ?

''ಮಹತ್ವದ ಅನೇಕ ವಿಷಯಗಳ ಕುರಿತು ಗಂಭೀರ ಚರ್ಚೆಯಾಗಬೇಕಿದೆ. ವಿಷಯ ಯಾವುದೇ ಇದ್ದರು ಅರ್ಥಪೂರ್ಣ ಚರ್ಚೆ ನಡೆಯುವುದು ಮುಖ್ಯ. ಅಂತಹದ್ದೊಂದು ಸಮರ್ಥ ಜವಾಬ್ದಾರಿಯನ್ನು ಸಂಸದರು ನಿಭಾಯಿಸುವ ವಿಶ್ವಾಸ ಇದೆ. ಸಂಸತ್ತಿನಲ್ಲಿ ಹೆಚ್ಚು ಆಳವಾದ ಹಾಗೂ ವೈವಿಧ್ಯಮಯ ಚರ್ಚೆಗಳು ನಡೆಯುತ್ತವೆ. ಅದರಿಂದ ಚರ್ಚೆಯ ವಿಷಯ ಹಾಗೂ ದೇಶಕ್ಕೆ ಹೆಚ್ಚಿನ ಪ್ರಯೋಜನ ತರುತ್ತದೆ ಎಂಬುದು ನಮ್ಮ ಅನುಭವ,'' ಎಂದು ತಿಳಿಸಿದರು.

ಎನ್‌ಡಿಎಗೆ ಮೋದಿ ಒಬ್ಬರೇ ಸ್ಟಾರ್‌ ಪ್ರಚಾರಕರು; ನಟಿ ಕಂಗನಾ ಬೇಕಿಲ್ಲ ಎಂದು ಫಡ್ನವೀಸ್ ಸ್ಪಷ್ಟನೆ‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ