ಆ್ಯಪ್ನಗರ

ದೇಶದ ಹಿತಕ್ಕಾಗಿ ಮನಮೋಹನ್‌ ಸಿಂಗ್ ನೀಡಿದ ಸಲಹೆಗಳನ್ನು ಪ್ರಧಾನಿ ಪಾಲಿಸಲಿ ಎಂದು ರಾಹುಲ್ ಆಶಯ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಪತ್ರ ಬರೆದು ಒಂದಿಷ್ಟು ಸಲಹೆಗಳನ್ನು ನೀಡಿದ ಬೆನ್ನಲ್ಲಿಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ದೇಶದ ಹಿತಕ್ಕಾಗಿ ಮಾಜಿ ಪ್ರಧಾನಿ ಸಲಹೆಗಳನ್ನು ಮೋದಿ ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Vijaya Karnataka Web 22 Jun 2020, 3:00 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ನೀಡಿರುವ ಸಲಹೆಯನ್ನು ದೇಶದ ಒಳಿತಿಗಾಗಿ ಪಾಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Vijaya Karnataka Web rahul gandhi
ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ)


ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ಮನಮೋಹನ್‌ ಸಿಂಗ್‌ ಅವರ ಪತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಭಾರತದ ಹಿತಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪ್ರಮುಖ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಪ್ರಧಾನಿ ನರೇಂದ್ರ ಮೋದಿ ಪಾಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.


ಸೋಮವಾರ ಪ್ರಧಾನಿಗೆ ಪತ್ರ ಬರೆದಿದ್ದ ಡಾ.ಮನಮೋಹನ್‌ ಸಿಂಗ್‌, ಎಲ್ಲ ಭಾರತೀಯರು ರಾಷ್ಟ್ರದೊಂದಿಗೆ ಒಗ್ಗೂಡಿ ನಿಲ್ಲಬೇಕು ಎಂದು ಕೇಳಿಕೊಂಡಿದ್ದರು. ಜೊತೆಗೆ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಆಡಿದ ಮಾತು ವಿವಾದ ಸೃಷ್ಟಿಸಿದ ಪ್ರಸಂಗವನ್ನು ಉಲ್ಲೇಖಿಸಿರುವ ಡಾ.ಮನಮೋಹನ್‌ ಸಿಂಗ್‌, ಹೇಳಿಕೆಗಳ ಪರಿಣಾಮಗಳ ಕುರಿತು ಯಾವಾಗಲೂ ಜಾಗೃತರಾಗಿರಬೇಕು ಎಂದು ಪ್ರಧಾನಿಗೆ ಸಲಹೆ ನೀಡಿದ್ದಾರೆ.

ಹುತಾತ್ಮರ ಬಲಿದಾನಕ್ಕೆ ನ್ಯಾಯ ಒದಗಿಸಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಗ್ರಹ!

ಲಡಾಖ್ ಹಿಂಸಾತ್ಮಕ ಘರ್ಷಣೆಯನ್ನು ಅತ್ಯಂತ ಖೇದಕರ ಎಂದು ಹೇಳಿರುವ ಡಾ.ಮನಮೋಹನ್‌ ಸಿಂಗ್, ಗಡಿಯಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ ಎಂದು ಸೂಚ್ಯವಾಗಿ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

'ಗಡಿ ಅತಿಕ್ರಮಣವನ್ನು ಉಪಗ್ರಹ ಚಿತ್ರಗಳು ಸ್ಪಷ್ಟವಾಗಿ ಹೇಳ್ತಿವೆ': ಪ್ರಧಾನಿ ವಿರುದ್ಧ ರಾಹುಲ್‌ ಗಾಂಧಿ ಕಿಡಿ

ಇನ್ನು, ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ವೀರ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಿಕೊಡಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಗಡಿ ಸುರಕ್ಷತೆ ಹಾಗೂ ದೇಶದ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಕೇಂದ್ರದೊಂದಿಗೆ ಜೊತೆಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ್ದರು.

ಗಡಿಗೆ ನಿಶ್ಯಸ್ತ್ರ ಸೈನಿಕರನ್ನು ಕಳುಹಿಸಿದ್ದು ಏಕೆ? ಇದಕ್ಕೆಲ್ಲಾ ಜವಾಬ್ದಾರಿ ಯಾರು?: ರಾಹುಲ್‌ ಪ್ರಶ್ನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ