ಆ್ಯಪ್ನಗರ

ಹೋಟೆಲ್‌ ಕಟ್ಟಡ ಕುಸಿತ: 10 ಜನರ ದುರ್ಮರಣ

ಮೂರು ಮಹಡಿಯ ಹೋಟೆಲ್‌ ಕುಸಿದು 10 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.

Vijaya Karnataka 2 Apr 2018, 10:02 am
ಇಂದೋರ್‌: ಮೂರು ಮಹಡಿಯ ಹೋಟೆಲ್‌ ಕುಸಿದು 10 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.
Vijaya Karnataka Web hotel collapses after vehicle crashes into it in indore 10 dead
ಹೋಟೆಲ್‌ ಕಟ್ಟಡ ಕುಸಿತ: 10 ಜನರ ದುರ್ಮರಣ


ಘಟನೆ ಕುರಿತು ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ತೆರವು ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ. ಶರವೇಗದಲ್ಲಿ ಬಂದ ಕಾರು ನಗರದ ಬಸ್‌ ನಿಲ್ದಾಣದ ಸಮೀಪದಲ್ಲಿರುವ ಹೋಟೆಲ್‌ ಕಟ್ಟಡದ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅನಾಹುತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಪಿಲ್ಲರ್‌ ಕಿತ್ತುಕೊಂಡು ಹೋಗುತ್ತಿದ್ದಂತೆ 60 ವರ್ಷ ಹಳೆಯ ಕಟ್ಟಡ ಉರುಳಿಬಿತ್ತು.

ನೋಡನೋಡುತ್ತಿದ್ದಂತೆಯೇ ಜನರು ಅವಶೇಷಗಳಡಿ ಸಿಲುಕಿ ಜೀವ ಕಳೆದುಕೊಂಡರು ಎಂದು ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಉಲ್ಲೇಖಿಸಿ ಪೊಲೀಸ್‌ ಅಧಿಕಾರಿ ಸಂಜು ಕಾಂಬ್ಳೆ ವಿವರಣೆ ನೀಡಿದ್ದಾರೆ. ಈ ಹೋಟೆಲ್‌ನಲ್ಲಿ ಲಾಡ್ಜ್‌ ಕೂಡ ಇದ್ದ ಕಾರಣ ಘಟನೆ ನಡೆದಾಗ ಸುಮಾರು 40 ಜನ ಕಟ್ಟಡದೊಳಗಿದ್ದರು ಎನ್ನಲಾಗಿದೆ. ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ