ಆ್ಯಪ್ನಗರ

ಮಿಡ್‌ನೈಟ್‌ ಆಪರೇಷನ್‌, ಮುಂಜಾನೆ ಆರ್ಡರ್‌

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಶುಕ್ರವಾರ ಸಂಜೆ ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು.

Vijaya Karnataka Web 27 Jul 2019, 10:38 am
ಹೊಸದಿಲ್ಲಿ: ಗುರುವಾರ ಸಂಜೆವರೆಗೂ ಸರಕಾರ ರಚನೆಗೆ ಬಿಜೆಪಿ ನಿಧಾನಗತಿಯ ಹೆಜ್ಜೆ ಇಡುತ್ತಿದೆ ಎಂಬ ಸಂದೇಶವಿತ್ತು. ವರಿಷ್ಠರ ಭೇಟಿಗಾಗಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಿಯೋಗ ದಿಲ್ಲಿಗೆ ತೆರಳಿ ಅಮಿತ್‌ ಶಾ ಭೇಟಿ ನಡೆಸಿತ್ತು. ಕಾನೂನಾತ್ಮಕವಾಗಿ ಎಚ್ಚರಿಕೆ ಹೆಜ್ಜೆ ಇಡಬೇಕಿದೆ ಎಂದು ವರಿಷ್ಠರು ಅಭಿಪ್ರಾಯಪಟ್ಟಿದ್ದರೇ ವಿನಃ ಒಪ್ಪಿಗೆ ನೀಡಿರಲಿಲ್ಲ.
Vijaya Karnataka Web bsy2


ಇತ್ತ ಬೆಂಗಳೂರಿನಲ್ಲಿ ಸ್ಪೀಕರ್‌ ಅವರು ಮೂವರು ಶಾಸಕರ ಅನರ್ಹತೆಗೆ ಆದೇಶ ನೀಡುತ್ತಿದ್ದಂತೆಯೇ ಹೈಕಮಾಂಡ್‌ ಚುರುಕಾಯಿತು. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕಾನೂನು ತಜ್ಞರು ಮತ್ತು ರಾಜ್ಯದ ಕೆಲವು ವಿಶ್ವಾಸಾರ್ಹ ನಾಯಕರನ್ನು ಕರೆಸಿಕೊಂಡು ಚರ್ಚೆ ನಡೆಸಿದರು. 105 ಸಂಖ್ಯಾ ಬಲದೊಂದಿಗೇ ಸರಕಾರ ರಚಿಸಬಹುದೇ, ಅದರಿಂದ ಉಂಟಾಗಬಹುದಾದ ಕಾನೂನು ತೊಡಕುಗಳು, ದೋಸ್ತಿಗಳಿಗೆ ಇರುವ ಅವಕಾಶಗಳ ಬಗ್ಗೆ ವಿವರ ಪಡೆದರು. ಕಾನೂನು ತಜ್ಞರು ಗ್ರೀನ್‌ ಸಿಗ್ನಲ್‌ ನೀಡಿದ ಬಳಿಕವೇ ವಿರಮಿಸಿದರು. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದರು.

ಕಾನೂನು ತಜ್ಞರು ಗ್ರೀನ್‌ ಸಿಗ್ನಲ್‌ ನೀಡಿದ ಬಳಿಕವೇ ವಿರಮಿಸಿದರು. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದರು.

ನಾಲ್ಕೈದು ತಿಂಗಳಲ್ಲಿ ಹಿಂದಿನ ಸರಕಾರ ಹಾಗೂ ನಮ್ಮ ಸರಕಾರದ ವ್ಯತ್ಯಾಸವನ್ನು ನೀವೇ ನೋಡುವಿರಿ. ನಾನು ದ್ವೇಷದ ರಾಜಕಾರಣ ಮಾಡಲ್ಲ. ಫರ್‌ಗೆಟ್‌ ಆ್ಯಂಡ್‌ ಫರ್‌ಗಿವ್‌ ನಮ್ಮ ನಿಲುವು.
-ಯಡಿಯೂರಪ್ಪ, ಮುಖ್ಯಮಂತ್ರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ