ಆ್ಯಪ್ನಗರ

ಪಿ ಚಿದಂಬರಂಗೆ ಸಿಬಿಐ ಕೇಳಿದ್ದ ಪ್ರಶ್ನೆಗಳೆಷ್ಟು? ಒಂದಾ, ಎರಡಾ...

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ನೀಡಲು ಪಿ ಚಿದಂಬರಂ ಅವರಿಗೆ ಅವಕಾಶ ನೀಡಿದಾಗ, ಅವರು ಹೇಳಿದ್ದು ನನಗೆ ಸಿಬಿಐ ಕೇಳಿದ್ದು ಕೇವಲ ಒಂದೇ ಒಂದು ಪ್ರಶ್ನೆ. ಆದರೆ, ನಿಜಕ್ಕೂ ಸಿಬಿಐ ಚಿದಂಬರಂ ಅವರಿಗೆ ಕೇಳಿದ ಪ್ರಶ್ನೆಗಳೆಷ್ಟು?

Vijaya Karnataka Web 23 Aug 2019, 11:57 am
ನವದೆಹಲಿ : ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಸಿಬಿಐನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ಚಿದಂಬರಂ ಮಾತ್ರವಲ್ಲ ಅವರ ವಕೀಲರೂ ಹಲ್ಲಾಗುಲ್ಲಾ ಮಾಡಿದ್ದರು.
Vijaya Karnataka Web New Delhi: Senior Congress leader and former finance minister P Chidambaram afte...
Senior Congress leader and former finance minister P Chidambaram after he was produced in a CBI court in the INX media case, in New Delhi. The court remanded Chidambaram for 4 days in CBI custody. (Photo)(


ಚಿದಂಬರಂ ಅವರನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು, ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಸರಿಯಾಗಿ ವಿಚಾರಣೆಗೊಳಪಡಿಸದೆ, ಪ್ರಶ್ನೆ ಕೇಳದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಹೇಳಿಕೆ ನೀಡಲು ಅವಕಾಶ ನೀಡಿದಾಗ, 2018ರ ಜೂನ್ 6ರಂದು ವಿಚಾರಣೆ ನಡೆಸಿದಾಗ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೆ. ನಿನ್ನೆ ಅವರು ಕೇಳಿದ್ದು ಒಂದೇ ಪ್ರಶ್ನೆ. ಅದೇನೆಂದರೆ, ವಿದೇಶದಲ್ಲಿ ನಿಮ್ಮದಾಗಲಿ, ನಿಮ್ಮ ಮಗನದಾಗಲಿ ಬ್ಯಾಂಕ್ ಖಾತೆ ಇದೆಯಾ ಎಂದು ಮಾತ್ರ ಎಂದು ಹೇಳಿದ್ದರು.

ಆದರೆ, ತಿಳಿದುಬಂದಿದ್ದೇನೆಂದರೆ, ಸಿಬಿಐ ಅಧಿಕಾರಿಗಳು ಅವರಿಗೆ ಕೇಳಿದ್ದು ಕೇವಲ ಒಂದೇ ಪ್ರಶ್ನೆಯಲ್ಲ, ಬರೊಬ್ಬರಿ 20 ಪ್ರಶ್ನೆಗಳು. ಆದರೆ, ಪಿ ಚಿದಂಬರಂ ಅವರು ಉಳಿದೆಲ್ಲ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ನೀಡಿದ್ದರು ಎಂದು ಕೋರ್ಟಿಗೆ ತಿಳಿಸಲಾಗಿತ್ತು. ಆ ಪ್ರಶ್ನೆಗಳಾವುವೆಂದರೆ...

1) ವಿದೇಶದಲ್ಲಿ ನೀವು ಮಾಡಿರುವ ಆಸ್ತಿಗಳ ಮೂಲ ಯಾವುದು?

2) ಯುಕೆ, ಸ್ಪೇನ್ ಮತ್ತು ಮಲೇಶಿಯಾದಲ್ಲಿ ಆಸ್ತಿ ಗಳಿಸಲು ಹಣ ಎಲ್ಲಿಂದ ಬಂತು?

3) ಬಾರ್ಸಿಲೋನಾ ಟೆನ್ನಿಸ್ ಕ್ಲಬ್ ಖರೀದಿಸಲು ನಿಮಗೆ ಹಣ ಎಲ್ಲಿಂದ ಸಿಕ್ಕಿತು?

4) ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನಿಂದ ಕಾರ್ತಿ ಚಿದಂಬರಂ ಅವರು ಹಣ ಏಕೆ ಇಸಿದುಕೊಂಡರು?

5) ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಪಡೆದ ಹಣವನ್ನು ನೀವು ಮತ್ತು ಕಾರ್ತಿ ಎಲ್ಲೆಲ್ಲಿ ಹೂಡಿಕೆ ಮಾಡಿದ್ದೀರಿ?

6) ವಿದೇಶದಲ್ಲಿ ನೀವು ಆರಂಭಿಸಿರುವ ಶೆಲ್ ಕಂಪನಿಗಳ ಬಗ್ಗೆ ನಮ್ಮ ಬಳಿ ಸಾಕ್ಷ್ಯವಿದೆ. ನೀವು ಇದಕ್ಕೇನು ಹೇಳುತ್ತೀರಿ?

7) ನಿಮ್ಮ ಮತ್ತು ಕಾರ್ತಿ ಹೆಸರಿನಲ್ಲಿ ಎಷ್ಟು ಶೆಲ್ ಕಂಪನಿಗಳಿವೆ?

8) ಈ ಶೆಲ್ ಕಂಪನಿಗಳು ಎಂಥ ವ್ಯಾಪಾರ ಮಾಡುತ್ತಿವೆ ಮತ್ತು ಯಾವ ಕ್ಷೇತ್ರದಲ್ಲಿ ತೊಡಗಿಕೊಂಡಿವೆ?

9) ಪೀಟರ್ ಮತ್ತು ಇಂದ್ರಾಣಿ ಮುಖರ್ಜಿಯಾ ಅವರ ಒಡೆತನಕ್ಕೆ ಸೇರಿದ್ದ ಐಎನ್ಎಕ್ಸ್ ಮೀಡಿಯಾ ಕಂಪನಿಯಲ್ಲಿ ಮಲೇಶಿಯಾದ ಕಂಪನಿಯೊಂದು 305 ಕೋಟಿ ರುಪಾಯಿ ವಿದೇಶಿ ಹಣ ಹೂಡಿಕೆ ಮಾಡಿದೆ ಎಂಬ ಆರೋಪವಿದೆ. ಈ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯವೇನು?

10) ಎಫ್ಐಪಿಬಿಯ ವಿವಿಧ ಇಲಾಖೆಗಳಲ್ಲಿ ಕಾರ್ತಿ ಚಿದಂಬರಂ ಅವರು ತಮ್ಮ ಪ್ರಭಾವ ಬಳಸಿದರೆ?

11) ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ವಿದೇಶಿ ಹೂಡಿಕೆ ನಿಯಮವನ್ನು ಉಲ್ಲಂಘಿಸಲು, ಹಣಕಾಸು ಸಚಿವರಾಗಿ ನಿಮ್ಮ ಮಗನಿಗೆ ಹೇಗೆ ಅವಕಾಶ ಮಾಡಿಕೊಟ್ಟಿರಿ?

12) ನಿಮ್ಮ ಕಚೇರಿಯ ನಾರ್ತ್ ಬ್ಲಾಕ್ ನಲ್ಲಿ ಇಂದ್ರಾಣಿ ಮುಖರ್ಜಿಯಾರನ್ನು ಏಕೆ ಭೇಟಿಯಾದಿರಿ?

13) ಕಾರ್ತಿ ಚಿದಂಬರಂ ಜೊತೆ ಸಂಪರ್ಕದಲ್ಲಿರಲು ಇಂದ್ರಾಣಿ ಅವರಿಗೆ ನಿರ್ದೇಶಿಸಿದ್ದಿರಾ?

14) ನೀವು ಪೀಟರ್ ಮುಖರ್ಜಿಯಾ ಅವರನ್ನೂ ಭೇಟಿಯಾಗಿದ್ದಿರಾ?

15) ನಿಮ್ಮ ನಿರ್ದೇಶನದಂತೆ ವಿದೇಶಿ ಹೂಡಿಕೆ ನಿಯಮ ಉಲ್ಲಂಘಿಸಲು ಸಹಕಾರ ತೋರಿದ ನಾರ್ತ್ ಬ್ಲಾಕ್ ನಲ್ಲಿದ್ದ ಇತರ ಅಧಿಕಾರಿಗಳು ಯಾರು?

16) ವಿಚಾರಣೆಗೆಂದು ನಿಮಗೆ ನೋಟೀಸ್ ನೀಡಿದ್ದರೂ ಅಂದು ನೀವೇಕೆ ವಿಚಾರಣೆಗೆ ಹಾಜರಾಗಲಿಲ್ಲ?

17) ದೆಹಲಿ ಹೈಕೋರ್ಟ್ ನಿಮ್ಮ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದ ನಂತರ, ಬುಧವಾರ ಸಂಜೆಯವರೆಗೆ ನೀವೆಲ್ಲಿ ಹೋಗಿದ್ದಿರಿ? ಆ ಸಮಯದಲ್ಲಿ ಯಾರ್ಯಾರನ್ನು ಭೇಟಿಯಾದಿರಿ?

18) ಆ ಸಮಯದಲ್ಲಿ ನಿಮ್ಮ ಮೊಬೈಲ್ ನಂಬರ್ ಸ್ವಿಚ್ಡ್ ಆಫ್ ಆಗಿತ್ತು. ಆಗ ನೀವು ಯಾವ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿದ್ದಿರಿ?

19) ಮಂಗಳವಾರ ಸುಪ್ರೀಂ ಕೋರ್ಟಿನಿಂದ ತೆರಳುವಾಗ ನೀವು ನಿಮ್ಮ ಡ್ರೈವರ್ ಮತ್ತು ಕಾರಕೂನನನ್ನು ಎಲ್ಲಿ ಇಳಿಸಿದಿರಿ? ಬಂಧನವನ್ನು ತಪ್ಪಿಸುವ ಉದ್ದೇಶವೇ ಇದ್ದಿದ್ದರೆ ಯಾಕೆ ಅವರನ್ನು ಇಳಿಸಿದಿರಿ?

20) ಸಿಬಿಐ ನೋಟೀಸ್ ನೀಡಿದ ಮೇಲೆಯೂ ನೀವು ಯಾಕೆ ವಿಚಾರಣೆಗೆ ಹಾಜರಾಗಲಿಲ್ಲ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ