ಆ್ಯಪ್ನಗರ

ಕೈಮಗ್ಗ ಧರಿಸುವೆ: ಸ್ಮೃತಿ ಟ್ವೀಟ್‌ ಹಿಟ್

ಮಾನವ ಸಂಪನ್ಮೂಲ ಖಾತೆಯಿಂದ ಜವಳಿ ಖಾತೆ ಜವಾಬ್ದಾರಿ ವಹಿಸಿಕೊಂಡಿರುವ ಸ್ಮೃತಿ ಇರಾನಿ ವರ್ಚಸ್ಸು ಎಲ್ಲಿಯೋ ಕುಂದುತ್ತಿದೆ ಎಂದು ಭಾಸವಾಗಲು ಆರಂಭವಾಗಿತ್ತು.

ಏಜೆನ್ಸೀಸ್ 7 Aug 2016, 10:28 pm
ಹೊಸದಿಲ್ಲಿ: ಮಾನವ ಸಂಪನ್ಮೂಲ ಖಾತೆಯಿಂದ ಜವಳಿ ಖಾತೆ ಜವಾಬ್ದಾರಿ ವಹಿಸಿಕೊಂಡಿರುವ ಸ್ಮೃತಿ ಇರಾನಿ ವರ್ಚಸ್ಸು ಎಲ್ಲಿಯೋ ಕುಂದುತ್ತಿದೆ ಎಂದು ಭಾಸವಾಗಲು ಆರಂಭವಾಗಿತ್ತು. ಆದರೆ, ಇದೀಗ ಸ್ಮೃತಿ ಅದನ್ನು ಸುಳ್ಳಾಗಿಸಿದ್ದು, ಹೊಸ ಖಾತೆಯಲ್ಲಿಯೂ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದ್ದಾರೆ. ಈ ಸಂಬಂಧವಾಗಿ ಮಾಡಿದೊಂದು ಟ್ವೀಟ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ.
Vijaya Karnataka Web how smriti iranis i wear handloom campaign became a hit on twitter
ಕೈಮಗ್ಗ ಧರಿಸುವೆ: ಸ್ಮೃತಿ ಟ್ವೀಟ್‌ ಹಿಟ್


'ದೇಶದೆಲ್ಲೆಡೆ ಕೈಮಗ್ಗ ಅಂಗಡಿಗಳನ್ನು ತೆರೆಯಲಾಗುತ್ತದೆ', ಎಂದು ಪ್ರಧಾನಿ ಮೋದಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಿನ್ನೆಲೆಯಲ್ಲಿ ಘೋಷಿಸಿದ್ದಾರೆ. ಖಾತೆಗೆ ಪ್ರಧಾನಿ ಬೆಂಬಲ ಗಮನಿಸಿದ ಸ್ಮೃತಿ 'ನಾನು ಕೈಮಗ್ಗ ಧರಿಸುವೆ' ಎಂದು ಹೇಳಿ, ಕೈಮಗ್ಗ ಸೀರೆಯಲ್ಲಿರುವ ಪೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಗಣ್ಯಾತಿ ಗಣ್ಯರು ಕೈಮಗ್ಗದಲ್ಲಿರುವ ಫೋಟೋ ಪೋಸ್ಟ್ ಮಾಡಿ, ಸಚಿವೆಯ ಕರೆಗೆ ಓಗೊಟ್ಟಿದ್ದಾರೆ.

I support Indian weavers, here's my #IWearHandloom look - Handwoven Silk from Bihar. Share your look & tag 5 people pic.twitter.com/1NOuueJ0mS — Smriti Z Irani (@smritiirani) August 1, 2016 ಕೈಮಗ್ಗಕ್ಕೆ ಆಧುನಿಕ ಸ್ಪರ್ಶ ನೀಡಿರುವ ಫೋಟೋ ಹಾಕಿರುವ ರೂಪದರ್ಶಿ ಮಿಲಿಂದ್ ಸೋಮನ್, ತಮ್ಮ ಫೋಟವನ್ನು ಪೋಸ್ಟ್ ಮಾಡಿದ್ದಾರೆ.
@milindrunning not only supports athletics but also appreciates Indian handloom weaver #IWearHandloom #SunilSethi pic.twitter.com/wVI2dHGjrT — FDCI (@TheFDCI) August 4, 2016 ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್‌ ಹ್ಯಾಂಡ್‌ಲೂಮ್ ಸೀರೆಯಲ್ಲಿರುವ ಫೋಟೋವನ್ನು ಸಹೋದರಿ ರಂಗೋಲಿ ಕೈಯಲ್ಲಿ ನೇಯ್ದ ಸೀರೆಯಲ್ಲಿರುವ ಫೋಟೋವನ್ನು ಅಪ್‌ಲೋಡ್ ಮಾಡಿಕೊಂಡಿದ್ದಾರೆ.
#IWearHandloom @stylebyami @KanganaFanClub @smritiirani @shnoy09 pics of Kangana fr Shravan Rudra puja at Amis Plc pic.twitter.com/lqYtIJVDeS — Rangoli Chandel (@Rangoli_A) August 3, 2016

ಬಾಲಿವುಡ್ ನಟ ಜಾಕಿ ಶ್ರಾಫ್ 70ರ ದಶಕದಿಂದಲೂ ಕೈಮಗ್ಗದೊಂದಿಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
Handloom and Me dates back to 70s ViVa Handloom ViVa Weavers #IWearHandloom pic.twitter.com/Zp6fPYN4vP — Jackie Shroff (@bindasbhidu) August 4, 2016 ಮೊಮ್ಮಗಳೊಂದಿಗೆ ಕೈಮಗ್ಗದ ಸೀರೆಯಲ್ಲಿ ಮಿಂಚುತ್ತಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ತಮ್ಮ ಫೋಟೋ ಅಪ್‌ಲೋಡ್ ಮಾಡಿ ಸ್ಮೃತಿ ಕರೆಗೆ ಬೆಂಬಲ ಸೂಚಿಸಿದ್ದಾರೆ.

In the family. #IWearHandloom My granddaughter too! pic.twitter.com/pK4beSUQHd — Nirupama Rao (@NMenonRao) August 1, 2016 ಇವೆರೆಲ್ಲರೊಂದಿಗೆ ಪುದುಚೆರಿ ಲೆಫ್ಟಿನೆಂಟ್ ಗೌವರ್ನರ್ ಕಿರಣ್ ಬೇಡಿ ಸಹ ಸಾಥ್ ನೀಡಿದ್ದು, ಅವರೂ ಖಾದಿ ಉಡುಗೆಯಲ್ಲಿರುವ ಫೋಟೋ ಹಾಕಿ, ಸ್ಮೃತಿ ಚಿಂತನೆಗೆ ಕೈ ಜೋಡಿಸಿದ್ದಾರೆ.
I support Indian weavers. Here's my #IWearHandloom look. Share your look & tag 5 people. @smritiirani @SushmaSwaraj pic.twitter.com/9XzBwo7Pob — Kiran Bedi (@thekiranbedi) August 2, 2016

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ