ಆ್ಯಪ್ನಗರ

ಸಾಹೇಬರೇ, ನನ್ನ ಪತ್ನಿ ಕೋಣೆಯಲ್ಲಿ ಕೂಡಿ ಹಾಕಿ, ಲಟ್ಟಣಿಗೆಯಿಂದ ಹೊಡೆಯುತ್ತಾಳೆ!

ಫೈಜುಲ್ಲಾಗಂಜ್ ನಿವಾಸಿ ಮಧ್ಯವಯಸ್ಕನೊಬ್ಬ ನೀಡಿರುವ ದೂರಿನ ಪ್ರಕಾರ ಆತನ ಪತ್ನಿ ಹೊಡೆದು ಆತನ ಕೈಯನ್ನೇ ಮುರಿದಿದ್ದಳು. 21 ವರ್ಷದ ಹಿಂದೆ ನಮ್ಮ ಮದುವೆಯಾಗಿತ್ತು.

Navbharat Times 12 Dec 2018, 11:30 am
ಲಖನೌ: ಸಾಹೇಬರೇ, ನನ್ನ ಪತ್ನಿ ಕೋಣೆಯಲ್ಲಿ ಕೂಡಿ ಹಾಕಿ ಲಟ್ಟಣಿಗೆ ಮತ್ತು, ಕೋಲಿನಿಂದ ಮನಬಂದಂತೆ ಥಳಿಸುತ್ತಾಳೆ. ವಿರೋಧಿಸಿದರೆ ವೃದ್ಧ ತಾಯಿ, ಸಹೋದರಿಯರಿಗೂ ಥಳಿಸುತ್ತಾಳೆ. ಸಂಪೂರ್ಣ ಕುಟುಂಬಕ್ಕೆ ಹಿಂಸೆ ಕೊಡುತ್ತಾಳೆ- ಉತ್ತರ ಪ್ರದೇಶದ ರಾಜಧಾನಿಯ ಠಾಕೂರ್‌ಗಂಜ್ ನಿವಾಸಿಯಾಗಿರುವ ಯುವಕನೊಬ್ಬ ಪೊಲೀಸ್ ಠಾಣೆಗೆ ಬಂದು ಕಣ್ಣೀರಿಡುತ್ತ ತೋಡಿಕೊಂಡ ಅಳಲಿದು.
Vijaya Karnataka Web beat


ಇದು ಈತನೊಬ್ಬನ ಕಥೆ ಅಲ್ಲ. ಇಂತಹ ಅನೇಕ ಯುವಕರು, ಮಧ್ಯ ವಯಸ್ಕರು ಪೊಲೀಸರಲ್ಲಿ ಪತ್ನಿ ಪೀಡನೆಯ ಬಗ್ಗೆ ದೂರು ನೀಡಿರುವುದು ಕಂಡುಬಂದಿದೆ.

ಕೈ ಮುರಿದಿದ್ದಳು


ಫೈಜುಲ್ಲಾಗಂಜ್ ನಿವಾಸಿ ಮಧ್ಯವಯಸ್ಕನೊಬ್ಬ ನೀಡಿರುವ ದೂರಿನ ಪ್ರಕಾರ ಆತನ ಪತ್ನಿ ಹೊಡೆದು ಆತನ ಕೈಯನ್ನೇ ಮುರಿದಿದ್ದಳು. 21 ವರ್ಷದ ಹಿಂದೆ ನಮ್ಮ ಮದುವೆಯಾಗಿತ್ತು. ಇತ್ತೀಚಿಗೆ ಆಕೆಗೆ ನನ್ನ ಮೇಲೆ ಸಂಶಯ ಶುರುವಾಗಿದೆ. ಕಳೆದ ಐದು ತಿಂಗಳಿಂದ ಜಗಳ ಜಾಸ್ತಿ ಆಗಿದೆ. ಒಂದು ದಿನ ದೊಣ್ಣೆಯಿಂದ ಹೊಡೆದು ಕೈಯನ್ನೇ ಮುರಿದಿದ್ದಳು. ವೃದ್ಧರಾಗಿರುವ ನನ್ನ ತಂದೆಗೂ ಊಟ ಕೊಡುವುದಿಲ್ಲ, ಎಂದಾತ ದೂರಿನಲ್ಲಿ ಬರೆದಿದ್ದ.

ಸುಂದರನಾಗು, ಆಗ ಮರಳಿ ಬರುತ್ತೇನೆ

ಬಲ್ದಿಖೇಡಾ ನಿವಾಸಿ ಯುವಕನೊಬ್ಬ , ನಾನು 21 ಜೂನ್, 2018ಕ್ಕೆ ಮೊಹದ್ದೀಪುರದ ನಿವಾಸಿ ಯುವತಿ ಜತೆ ವಿವಾಹವಾಗಿದ್ದೆ. ಮದುವೆಯಾದ ಕೆಲವೇ ದಿನಗಳಲ್ಲಿ ತವರಿಗೆ ಹೊರಟು ಹೋದಳು. ನೀನ್ಯಾಕೆ ನನ್ನ ಜತೆ ಇರುವುದಿಲ್ಲ ಎಂದು ಕೇಳಿದಾಗ ನೀನು ಸುಂದರನಾಗಿಲ್ಲ. ಸುಂದರನಾದಾಗ ಮರಳುತ್ತೇನೆ ಎಂದಿದ್ದಾಳೆ ಎಂದು ದೂರು ನೀಡಿದ್ದ. ಅವರಿಬ್ಬರನ್ನು ಕರೆದು ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ.

ಪೊಲೀಸ್ ಠಾಣೆಯ ಆಪ್ತ ಸಮಾಲೋಚನಾ ವಿಭಾಗದ ಅಧಿಕಾರಿ ಬಬಿತಾ ಅವರ ಪ್ರಕಾರ, ಇತ್ತೀಚಿಗೆ ಪತ್ನಿಯಿಂದ ಪೀಡನೆಗೊಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ಮಹಿಳೆಯರು ತಮ್ಮ ಪತಿಯ ಯಾವುದೇ ಮಾತಿಗೆ ಬೆಲೆ ಕೊಡುವುದಿಲ್ಲ. ವಿಚ್ಛೇದನ ನೀಡುತ್ತೇನೆ, ವರದಕ್ಷಿಣೆ ಪ್ರಕರಣ ದಾಖಲಿಸುತ್ತೇನೆ ಎಂದು ಧಮ್ಕಿ ಹಾಕುತ್ತಾರೆ. ಇಂತವರಿಗೆ ಆಪ್ತ ಸಮಾಲೋಚನೆ ಮಾಡುವ ಅಗತ್ಯವಿರುತ್ತದೆ.

ಹೆಚ್ಚಾಗುತ್ತಿದೆ ಇಂತಹ ಪ್ರಕರಣ

ಉತ್ತರ ಪ್ರದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಬೆಳಕಿಗೆ ಬಂದಿದೆ. 2016- 19 ಪ್ರಕರಣಗಳು ದಾಖಲಾಗಿದ್ದರೆ, 2017- 30 ಮತ್ತು 2018- 41 (ಇಲ್ಲಿಯವರೆಗೆ)ಪ್ರಕರಣಗಳು ದಾಖಲಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ