ಆ್ಯಪ್ನಗರ

ದುಂಡಿಗಲ್ ವಾಯುನೆಲೆಯಲ್ಲಿ 50 ಕಾಡು ಹಂದಿಗಳ ಹತ್ಯೆ

ದುಂಡಿಗಲ್ ವಾಯುನೆಲೆಯಲ್ಲಿ 50 ಕ್ಕೂ ಹೆಚ್ಚು ಕಾಡು ಹಂದಿಗಳನ್ನು ಹತ್ಯೆ ಮಾಡಲಾಗಿದೆ. ಏರ್ ಫೋರ್ಸ್ ಅಕಾಡೆಮಿಯಲ್ಲಿ ಕೆಲ ದಿನಗಳಿಂದ ಹಂದಿಗಳ ಉಪಟಳ ಮೀರಿ ಮೀರಿ ಹೋಗಿತ್ತು. ಇವು ಹುಲ್ಲು ಮತ್ತು ಹಸಿರನ್ನು ಹಾಳುಗೆಡವುತ್ತಿದ್ದವು ಜತೆಗೆ ಅವುಗಳಿಂದ ಅಕಾಡೆಮಿಗೆ ಮತ್ತು ಅಲ್ಲಿನ ಟ್ರೈನಿಗಳಿಗೆ ಅಪಾಯವೂ ಇದ್ದುದರಿಂದ ಕೊಲ್ಲುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ತಿಳಿದು ಬಂದಿದೆ.

TIMESOFINDIA.COM 30 Apr 2018, 1:20 pm
ಹೈದರಾಬಾದ್: ದುಂಡಿಗಲ್ ವಾಯುನೆಲೆಯಲ್ಲಿ 50 ಕ್ಕೂ ಹೆಚ್ಚು ಕಾಡು ಹಂದಿಗಳನ್ನು ಹತ್ಯೆ ಮಾಡಲಾಗಿದೆ. ಏರ್ ಫೋರ್ಸ್ ಅಕಾಡೆಮಿಯಲ್ಲಿ ಕೆಲ ದಿನಗಳಿಂದ ಹಂದಿಗಳ ಉಪಟಳ ಮೀರಿ ಮೀರಿ ಹೋಗಿತ್ತು. ಇವು ಹುಲ್ಲು ಮತ್ತು ಹಸಿರನ್ನು ಹಾಳುಗೆಡವುತ್ತಿದ್ದವು ಜತೆಗೆ ಅವುಗಳಿಂದ ಅಕಾಡೆಮಿಗೆ ಮತ್ತು ಅಲ್ಲಿನ ಟ್ರೈನಿಗಳಿಗೆ ಅಪಾಯವೂ ಇದ್ದುದರಿಂದ ಕೊಲ್ಲುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ತಿಳಿದು ಬಂದಿದೆ.
Vijaya Karnataka Web Cruel


ಸಂಗಾರೆಡ್ಡಿ ಜಿಲ್ಲಾ ಅರಣ್ಯಾಧಿಕಾರಿ ವಿ.ವೆಂಕಟೇಶ್ವರ ರಾವ್ ಅಪಾಯಕಾರಿಯಾಗಿದ್ದ ಈ ಕಾಡುಹಂದಿಗಳ ಹತ್ಯೆಗೆ ಆದೇಶಿಸಿದ್ದರು. ಶಾರ್ಪ್ ಶೂಟರ್ ನವಾಬ್ ಶಾಫತ್ ಅಲಿ ಖಾನ್ ಮತ್ತವರ ತಂಡ ಶನಿವಾರ ರಾತ್ರಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಭಾನುವಾರದವರೆಗೂ ಮುಂದುವರೆಸಿತ್ತು.

ಕ್ಯಾಂಪಸ್ 1,500 ಎಕರೆ ವಿಸ್ತಾರಕ್ಕೆ ಹಬ್ಬಿದ್ದು ದಟ್ಟ ಅರಣ್ಯದಿಂದ ಸುತ್ತುವರೆದಿದೆ. ಕಾಡು ಹಂದಿಗಳು ಕ್ಯಾಂಪ್‌ನಲ್ಲಿ ತರಬೇತಿ ನಿರತ ಸೈನಿಕರ ಮೇಲೆ ದಾಳಿ ಮಾಡುತ್ತಿವೆ ಮತ್ತು ರನ್ ವೇಗೆ ನುಗ್ಗುತ್ತಿರುವುದರಿಂದ ಜೆಟ್ ವಿಮಾನಗಳ ಹಾರಾಟಕ್ಕೆ ಸಹ ಅಪಾಯ ತಂದೊಡ್ಡುತ್ತಿವೆ ಎಂದು ವಾಯುನೆಲೆಯ ಅಧಿಕಾರಿಗಳು ಏಪ್ರೀಲ್ 11ಕ್ಕೆ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದವು. ಹೀಗಾಗಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು ಎಂದು ವೆಂಕಟೇಶ್ವರ ರಾವ್ ಹೇಳಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅಕಾಡೆಮಿಯಲ್ಲಿ ಕಾಡು ಹಂದಿಗಳ ಕಾಟ ಮೀತಿ ಮೀರಿತ್ತು. ಇವು ನಿಶಾಚರಿ ಪ್ರಾಣಿಗಳಾಗಿದ್ದು, ರಾತ್ರಿ ಸಮಯದಲ್ಲಿ ಜೆಟ್ ವಿಮಾನಗಳ ಹಾರಾಟಕ್ಕೆ ಅಪಾಯ ತಂದೊಡ್ಡುತ್ತಿದ್ದವು ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಲಿ ಖಾನ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ