ಆ್ಯಪ್ನಗರ

ಯೋಗಿಯಂಥ ನಾಯಕನ ಹುಡುಕಾಟದಲ್ಲಿ ಹೈದರಾಬಾದ್ ಬಿಜೆಪಿ!

ಉತ್ತರ ಪ್ರದೇಶದ ಸಂತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನಪ್ರಿಯತೆಯಿಂದ ಪ್ರಭಾವಿತವಾಗಿರುವ ತೆಲಂಗಾಣ ಬಿಜೆಪಿ ಮತ್ತು ಇತರ ಹಿಂದೂ ಸಂಘ ಸಂಸ್ಥೆಗಳು, ತಮ್ಮ ರಾಜ್ಯದಲ್ಲೂ ಸಹ ಸಂತ ನಾಯಕನನ್ನು ಹುಟ್ಟುಹಾಕಲು ಸಿದ್ಧತೆ ನಡೆಸಿದಂತಿದೆ

TIMESOFINDIA.COM 4 Sep 2018, 12:02 pm
[This story originally published in Times Of India on Sep. 4, 2018]
Vijaya Karnataka Web yogi


ಹೈದರಾಬಾದ್: ಉತ್ತರ ಪ್ರದೇಶದ ಸಂತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನಪ್ರಿಯತೆಯಿಂದ ಪ್ರಭಾವಿತವಾಗಿರುವ ತೆಲಂಗಾಣ ಬಿಜೆಪಿ ಮತ್ತು ಇತರ ಹಿಂದೂ ಸಂಘ ಸಂಸ್ಥೆಗಳು, ತಮ್ಮ ರಾಜ್ಯದಲ್ಲೂ ಸಹ ಸಂತ ನಾಯಕನನ್ನು ಹುಟ್ಟುಹಾಕಲು ಸಿದ್ಧತೆ ನಡೆಸಿದಂತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಂಗಳವಾರ ಮುಂಜಾನೆ ಹೈದರಾಬಾದಿಗೆ ಆಗಮಿಸಿದ ಪರಿಪೂರ್ಣಾನಂದ ಸ್ವಾಮಿಜೀ ಅವರಿಗೆ ಬಿಜೆಪಿ, ವಿಶ್ವಹಿಂದೂ ಪರಿಷತ್, ಆರ್‌ಎಸ್ಎಸ್, ಬಜರಂಗದಳ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ಭವ್ಯ ಸ್ವಾಗತ ಕೋರಿವೆ.

ಸ್ವಾಮೀಜಿ ಅವರನ್ನು ಸಿಕಂದರಾಬಾದ್ ಅಥವಾ ಮಾಲ್ಕಜ್‌ಗಿರಿ ಲೋಕಸಭೆ ಕ್ಷೇತ್ರ ಇಲ್ಲವೇ ಕಾರ್ವಾನ್ ಅಥವಾ ಚಂದ್ರಯಾನಗುಟ್ಟ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸುತ್ತಿವೆ. ಹಿಂದೂ ಸಮುದಾಯದ ಮತ ಸೆಳೆಯುವ ಉದ್ದೇಶದಿಂದ ಸ್ವಾಮೀಜಿ ಅವರನ್ನು ಚುನಾವಣಾ ಅಖಾಡಕ್ಕಿಳಿಸುವ ತಂತ್ರ ಹಿಂದೂ ಸಂಘಟನೆಗಳದ್ದು.

ಕಾಕಿನಾಡಿನ ಮಠದಿಂದ ನಗರಕ್ಕೆಗೆ ಬಂದ ಪರಿಪೂರ್ಣಾನಂದ ಸ್ವಾಮಿಜೀ ಅವರಿಗೆ ಸ್ವಾಗತ ಕೋರಲು ಬಿಜೆಪಿ ಶಾಸಕ ಎನ್‌ವಿಎಸ್‌ಎಸ್ ಪ್ರಭಾಕರ್ ವಿಜವಾಡಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, 'ತೆಲಂಗಾಣ ರಾಜ್ಯಕ್ಕೆ ಯೋಗಿ ಆದಿತ್ಯನಾಥ್ ಅವರಂತಹ ನಾಯಕನ ಅವಶ್ಯಕತೆ ಇದೆ ಎಂದು ಈಗಾಗಲೇ ಹೇಳಿದ್ದೆ. ಸ್ವಾಮೀಜಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ' ಎಂದು ಹೇಳಿದರು.

10 ದಿನಗಳ ಹಿಂದಷ್ಟೇ, ಪರಿಪೂರ್ಣಾನಂದ ಸ್ವಾಮಿಜೀ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ, ದಕ್ಷಿಣ ಭಾಗದಲ್ಲಿ ಸ್ಥಳೀಯ ಭಾಷೆ ಮಾತನಾಡುವ ನಾಯಕರನ್ನೇ ಪ್ರೋತ್ಸಾಹಿಸಲು ಆರ್‌ಎಸ್‌ಎಸ್ ಆಂತರಿಕ ಸಹಕಾರ ಸಭೆಯಲ್ಲಿ ನಿರ್ಣಯ ಕೈಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ