ಆ್ಯಪ್ನಗರ

2020ರಲ್ಲಿ ಹುಂಡೈನಿಂದ 8 ಹೊಸ ವಾಹನಗಳು

ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹುಂಡೈ ಮೋಟಾರ್‌ ಉತ್ಪಾದನೆಯನ್ನು ಹೆಚ್ಚಿಸಿದ್ದು

Vijaya Karnataka Web 28 Feb 2017, 2:46 am
ಚೆನ್ನೈ: ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹುಂಡೈ ಮೋಟಾರ್‌ ಉತ್ಪಾದನೆಯನ್ನು ಹೆಚ್ಚಿಸಿದ್ದು, 2020ರ ಹೊತ್ತಿಗೆ 8 ನೂತನ ವಾಹನಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Vijaya Karnataka Web hyundai release 8 new car 2020
2020ರಲ್ಲಿ ಹುಂಡೈನಿಂದ 8 ಹೊಸ ವಾಹನಗಳು

‘‘ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ನಡೆದ ನ್ಯಾಷನಲ್‌ ಡೀಲರ್‌ ಕಾನಧಿರೆನ್ಸ್‌ನಲ್ಲಿ ಭಾರತೀಯ ಮಾರುಕಟ್ಟೆಗೆ 2017ರಿ ಂದ 2020ರ ಅವಧಿಯಲ್ಲಿ 8 ವಾಹನಗಳು ಬಿಡುಗಡೆಯಾಗುವ ವಿಷಯವನ್ನು ಪ್ರಕಟಿಸಿದ್ದೇವೆ. ಸುಸ್ಥಿರ ಬೆಳವಣಿಗೆಗೆ ಅವಕಾಶವಿರುವ ಭಾರತೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದೇವೆ,’’ ಎಂದು ಹುಂಡೈ ಮೋಟಾರ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈ.ಕೆ. ಕೂ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ಬಿಡುಗಡೆಯಾಗಲಿರುವ 8 ವಾಹನಗಳಲ್ಲಿ 5 ವಾಹನಗಳ ಮಾಡೆಲ್‌ಗಳು ಸಂಪೂರ್ಣ ವಿಭಿನ್ನವಾಗಿ ಇರಲಿವೆ. ಟರ್ಬೊ ಗ್ಯಾಸೋಲಿನ್‌ ಎಂಜಿನ್‌ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡಿದ್ದೇವೆ,’’ ಎಂದು ಹೇಳಿದರು.
ವಿಶ್ವದಲ್ಲಿ ಹುಂಡೈ ವಾಹನಗಳ ಮಾರಾಟದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಚೀನಾ ಮತ್ತು ಅಮೆರಿಕ ನಂತರದ ಸ್ಥಾನ ಭಾರತದ್ದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ