ಆ್ಯಪ್ನಗರ

ಚಿದು ಕುಟುಂಬದ ವಿರುದ್ಧ 4 ಚಾರ್ಜ್‌ಶೀಟ್‌

ವಿದೇಶಿ ಆಸ್ತಿಪಾಸ್ತಿಗಳನ್ನು ಬಹಿರಂಗಪಡಿಸದಿರುವ ಆರೋಪದ ಮೇಲೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಅವರ ಪತ್ನಿ ನಳಿನಿ, ಪುತ್ರ ಕಾರ್ತಿ ಮತ್ತು ಸೊಸೆ ಶ್ರೀನಿಧಿ ವಿರುದ್ಧ ಆದಾಯ ತೆರಿಗೆ ಇಲಾಖೆ ಕಾಳಧನ ಕಾಯಿದೆಯಡಿ ನಾಲ್ಕು ಚಾರ್ಜ್‌ಶೀಟ್‌ ದಾಖಲಿಸಿದೆ.

Vijaya Karnataka 12 May 2018, 8:59 am
ಚೆನ್ನೈ : ವಿದೇಶಿ ಆಸ್ತಿಪಾಸ್ತಿಗಳನ್ನು ಬಹಿರಂಗಪಡಿಸದಿರುವ ಆರೋಪದ ಮೇಲೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಅವರ ಪತ್ನಿ ನಳಿನಿ, ಪುತ್ರ ಕಾರ್ತಿ ಮತ್ತು ಸೊಸೆ ಶ್ರೀನಿಧಿ ವಿರುದ್ಧ ಆದಾಯ ತೆರಿಗೆ ಇಲಾಖೆ ಕಾಳಧನ ಕಾಯಿದೆಯಡಿ ನಾಲ್ಕು ಚಾರ್ಜ್‌ಶೀಟ್‌ ದಾಖಲಿಸಿದೆ.
Vijaya Karnataka Web Chidambaram


ಕಾಳಧನ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಸಂಪತ್ತು) ಕಾಯಿದೆಯ ಸೆಕ್ಷನ್‌50ರ ಅಡಿ ಹಾಗೂ 2015ರ ತೆರಿಗೆ ಹೇರಿಕೆ ಕಾಯಿದೆಯಡಿ ಆದಾಯ ತೆರಿಗೆ ಇಲಾಖೆ ಈ ನಾಲ್ಕು ಆರೋಪ ಪಟ್ಟಿಗಳನ್ನು ಚೆನ್ನೈನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ನಳಿನಿ ಚಿದಂಬರಂ, ಕಾರ್ತಿ ಮತ್ತು ಶ್ರೀನಿಧಿ ಅವರು ಬ್ರಿಟನ್‌ನ ಕೇಂಬ್ರಿಜ್‌ನಲ್ಲಿರುವ ತಮ್ಮ 5.37 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಅಮೆರಿಕದಲ್ಲಿರುವ 3.28 ಕೋಟಿ ರೂ. ಮೌಲ್ಯದ ಆಸ್ತಿಯ ಬಗ್ಗೆ ಮಾಹಿತಿ ಮರೆಮಾಚಿದ ಆರೋಪ ಎದುರಿಸುತ್ತಿದ್ದಾರೆ. ಚಿದಂಬರಂ ಕುಟುಂಬ ಸದಸ್ಯರು ತಮ್ಮ ಈ ಹೂಡಿಕೆಗಳನ್ನು ತೆರಿಗೆ ಅಧಿಕಾರಿಗಳ ಮುಂದೆ ಬಹಿರಂಗಪಡಿಸಿಲ್ಲ. ಅಲ್ಲದೆ, ಕಾರ್ತಿ ಅವರ ಜಂಟಿ ಒಡೆತನದ 'ಚೆಸ್‌ ಗ್ಲೋಬಲ್‌ ಅಡ್ವೈಸರಿ' ಸಂಸ್ಥೆಯು ಕಾಳಧನ ಕಾಯಿದೆಯ ಉಲ್ಲಂಘನೆ ಮಾಡಿದೆ ಎಂದೂ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ವಿದೇಶದಲ್ಲಿ ರಹಸ್ಯವಾಗಿ ಅಕ್ರಮ ಸಂಪತ್ತು ಕೂಡಿಟ್ಟಿರುವ ಭಾರತೀಯರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಕಪ್ಪು ಹಣದ ವಿರುದ್ಧ ಅಭಿಯಾನದ ಭಾಗವಾಗಿ ಕೇಂದ್ರ ಸರಕಾರ 2015ರಲ್ಲಿ ಈ ಕಾಯಿದೆ ಜಾರಿಗೆ ತಂದಿತ್ತು. ಐಟಿ ಇಲಾಖೆ ಇತ್ತೀಚೆಗೆ ಕಾರ್ತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಸಂಬಂಧ ನೊಟೀಸ್‌ ಜಾರಿ ಮಾಡಿದ್ದು, ಅದನ್ನವರು ಮದ್ರಾಸ್‌ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ