ಆ್ಯಪ್ನಗರ

ದೀಪಾವಳಿ ವೇಳೆ ಕಾಡಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ: ಮೋದಿ

''ಒಂಟಿತನದಲ್ಲಿ ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಂಡರೆ ಅದರಿಂದ ಸಿಗುವ ಅನುಭವವೇ ಬೇರೆ. ನೀವು ನಿಮ್ಮನ್ನು ಅರಿತುಕೊಳ್ಳುವ ಮೂಲಕ ಜಗತ್ತನ್ನು ಅರಿಯಲು ತೊಡಗುತ್ತೀರಿ. ಇದು ನಿಮ್ಮಲ್ಲಿ ಆತ್ಮ ವಿಶ್ವಾಸ ತುಂಬುತ್ತದೆ. ಸ್ಫೂರ್ತಿಗಾಗಿ ನೀವು ಬೇರೆ ಯಾರನ್ನೂ ಅವಲಂಬಿಸುವುದು ಬೇಡ. ಅದು ನಿಮ್ಮಲ್ಲಿಯೇ ಇದೆ,'' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Vijaya Karnataka 24 Jan 2019, 5:00 am
ಮುಂಬಯಿ: ದೀಪಾವಳಿ ಅಂದರೆ ಬೆಳಕಿನ ಹಬ್ಬ. ಇಡೀ ದೇಶವೇ ಈ ಹಬ್ಬದಲ್ಲಿ ಮಿಂದೇಳುತ್ತದೆ. ಆದರೆ ಪ್ರಧಾನಿ ಮೋದಿ ಮಾತ್ರ ಇದಕ್ಕೆ ತದ್ವಿರುದ್ಧ. ಅವರು ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಐದು ದಿನಗಳ ಕಾಲ ಕಾಡಿಗೆ ಹೋಗಿ ಏಕಾಂತದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರು!
Vijaya Karnataka Web modi 1


ಹೌದು, ಯಾರಿಗೂ ಗೊತ್ತಿರದ ಈ ಸಂಗತಿಯನ್ನು ಮೋದಿ ಅವರೇ ಜಗತ್ತಿನ ಮುಂದಿರಿಸಿದ್ದಾರೆ. ಫೇಸ್‌ಬುಕ್‌ನ 'ದಿ ಹ್ಯೂಮನ್ಸ್‌ ಆಫ್‌ ಬಾಂಬೆ' ಪೇಜ್‌ ನಿರ್ವಹಿಸುತ್ತಿರುವ ತಂಡಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ, ''ದೀಪಾವಳಿಯ ಐದು ದಿನಗಳ ಕಾಲ ನಾನು ಕಾಡಿಗೆ ಹೋಗಿ, ಚಾರಣಿಗರ ಸದ್ದು ಗದ್ದಲವಿಲ್ಲದ, ಶುಭ್ರತೆಯ ಪ್ರತಿಬಿಂಬದಂತೆ ಝಳು ಝಳು ನೀರು ಹರಿಯವ ಪ್ರಶಾಂತ ತಾಣವನ್ನು ಆಯ್ದುಕೊಂಡು ಅಲ್ಲಿ ಎಲ್ಲವನ್ನೂ ಮರೆತು ಏಕಾಂತವಾಸಿಯಾಗಿಬಿಡುತ್ತಿದ್ದೆ. ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ,'' ಎಂದು ಹೇಳಿದ್ದಾರೆ.

''ಒಂಟಿತನದಲ್ಲಿ ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಂಡರೆ ಅದರಿಂದ ಸಿಗುವ ಅನುಭವವೇ ಬೇರೆ. ನೀವು ನಿಮ್ಮನ್ನು ಅರಿತುಕೊಳ್ಳುವ ಮೂಲಕ ಜಗತ್ತನ್ನು ಅರಿಯಲು ತೊಡಗುತ್ತೀರಿ. ಇದು ನಿಮ್ಮಲ್ಲಿ ಆತ್ಮ ವಿಶ್ವಾಸ ತುಂಬುತ್ತದೆ. ಸ್ಫೂರ್ತಿಗಾಗಿ ನೀವು ಬೇರೆ ಯಾರನ್ನೂ ಅವಲಂಬಿಸುವುದು ಬೇಡ. ಅದು ನಿಮ್ಮಲ್ಲಿಯೇ ಇದೆ,'' ಎಂದು ಹೇಳಿದ್ದಾರೆ. ಸಾಧ್ಯವಾದರೆ, ಯುವಕರೆಲ್ಲರೂ ಈ ರೀತಿಯ ಆತ್ಮಾವಲೋಕನಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸಂದರ್ಶನದ ಹಿಂದಿನ ಸಂಚಿಕೆಯಲ್ಲಿ ಮೋದಿ ಅವರು, ತಮ್ಮ ಬಾಲ್ಯ ಮತ್ತು ಹದಿಹರೆಯದ ಜೀವನದ ಬಗ್ಗೆ ಮಾತನಾಡಿದ್ದರು. ''17ನೇ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಚಿಂತನೆಯಿಂದ ಹಿಮಾಲಯಕ್ಕೆ ಹೋಗಿದ್ದೆ. ಅಲ್ಲಿ ಸುರ್ಯೋದಯಕ್ಕೂ ಮೂರು ಗಂಟೆ ಮುನ್ನವೇ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದೆ. ಇದು ಅತಿಯಾದ ಆತ್ಮಬಲ ನೀಡುತ್ತದೆ,'' ಎಂದಿದ್ದರು. ಅಲ್ಲದೇ ಆರೆಸ್ಸೆಸ್‌ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದನ್ನೂ ಹೇಳಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ