ಆ್ಯಪ್ನಗರ

ವಾಯುಪಡೆ ಮುಖ್ಯಸ್ಥ ಸುಳ್ಳುಗಾರ: ವಿವಾದ ಸೃಷ್ಟಿಸಿದ ಮೊಯಿಲಿ ಹೇಳಿಕೆ

ರಫೇಲ್‌ ಡೀಲ್‌ ಪ್ರಕರಣದಲ್ಲಿ ಧನೋವಾ ಸತ್ಯ ಮುಚ್ಚಿಟ್ಟು ಸುಳ್ಳುಗಳನ್ನು ತೂರಿ ಬಿಡುತ್ತಿದ್ದಾರೆ. ಸರಕಾರಿ ದಾಖಲೆಗಳ ಪ್ರಕಾರ, ಈ ಒಪ್ಪಂದದಲ್ಲಿ ಎಚ್‌ಎಎಲ್‌ ಪಾಲುದಾರ ಆಗಬೇಕೆಂದು ರಕ್ಷಣಾ ಸಚಿವರು ಹಾಗೂ ವಾಯುಪಡೆ ಮುಖ್ಯಸ್ಥರು ಬಯಸಿದ್ದರು. ಅಂದು ಡಸಾಲ್ಟ್‌ ಜತೆಗೂಡಿ ಎಚ್‌ಎಎಲ್‌ ಸಂಸ್ಥೆಗೆ ಭೇಟಿ ನೀಡಿದ್ದ ಐಎಎಫ್‌ ಮುಖ್ಯಸ್ಥ ಧನೋವಾ ಅವರು, ಅದರ ಸಾಮರ್ಥ್ಯ‌ ಕುರಿತು ಮೆಚ್ಚುಗೆಯ ಮಾತಾಡಿದ್ದರು. ಈಗ ಅದೇ ಮುಖ್ಯಸ್ಥರು ತಮ್ಮ ಹಿಂದಿನ ಹೇಳಿಕೆ ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಎಂ.ವೀರಪ್ಪ ಮೊಯಿಲಿ ಟೀಕಿಸಿದ್ದಾರೆ.

Vijaya Karnataka Web 21 Dec 2018, 8:01 am
ಹೊಸದಿಲ್ಲಿ: ರಫೇಲ್‌ 'ಅದ್ಭುತ ಯುದ್ಧ ವಿಮಾನ', ಈ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ನಿಂದ 'ಅತ್ಯುತ್ತಮ ತೀರ್ಪು' ಹೊರ ಬಿದ್ದಿದೆ ಎಂದು ಕೊಂಡಾಡಿರುವ ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ ವಿರುದ್ಧ ಕಾಂಗ್ರೆಸ್‌ ಮುಖಂಡ ಎಂ.ವೀರಪ್ಪ ಮೊಯಿಲಿ ಹರಿಹಾಯ್ದಿದ್ದಾರೆ.
Vijaya Karnataka Web moily


ರಫೇಲ್‌ ಡೀಲ್‌ ಪ್ರಕರಣದಲ್ಲಿ ಧನೋವಾ ಸತ್ಯ ಮುಚ್ಚಿಟ್ಟು ಸುಳ್ಳುಗಳನ್ನು ತೂರಿ ಬಿಡುತ್ತಿದ್ದಾರೆ ಎಂದಿರುವ ಮೊಯಿಲಿ, ಸರಕಾರಿ ದಾಖಲೆಗಳ ಪ್ರಕಾರ, ಈ ಒಪ್ಪಂದದಲ್ಲಿ ಎಚ್‌ಎಎಲ್‌ ಪಾಲುದಾರ ಆಗಬೇಕೆಂದು ರಕ್ಷಣಾ ಸಚಿವರು ಹಾಗೂ ವಾಯುಪಡೆ ಮುಖ್ಯಸ್ಥರು ಬಯಸಿದ್ದರು.

ಅಂದು ಡಸಾಲ್ಟ್‌ ಜತೆಗೂಡಿ ಎಚ್‌ಎಎಲ್‌ ಸಂಸ್ಥೆಗೆ ಭೇಟಿ ನೀಡಿದ್ದ ಐಎಎಫ್‌ ಮುಖ್ಯಸ್ಥ ಧನೋವಾ ಅವರು, ಅದರ ಸಾಮರ್ಥ್ಯ‌ ಕುರಿತು ಮೆಚ್ಚುಗೆಯ ಮಾತಾಡಿದ್ದರು. ಈಗ ಅದೇ ಮುಖ್ಯಸ್ಥರು ತಮ್ಮ ಹಿಂದಿನ ಹೇಳಿಕೆ ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ರಫೇಲ್‌ ಒಪ್ಪಂದದಲ್ಲಿ ಅನಿಲ್‌ ಅಂಬಾನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಾರ್ವಜನಿಕ ಸ್ವಾಮ್ಯದ ಎಚ್‌ಎಎಲ್‌ ಅನ್ನು ಮೋದಿ ಸರಕಾರ ಕಡೆಗಣಿಸಿತು ಎಂದು ಕಾಂಗ್ರೆಸ್‌ ಆರೋಪಿಸಿರುವಾಗಲೇ ಮೊಯಿಲಿ ಅವರಿಂದ ಈ ಟೀಕೆ ಕೇಳಿ ಬಂದಿದೆ.

ಸ್ವಾಮಿ ತಿರುಗೇಟು:
ರಫೇಲ್‌ ಡೀಲ್‌ ವಿಷಯದಲ್ಲಿ ಧನೋವಾ ಕುರಿತು ಮೊಯಿಲಿ ಮಾಡಿರುವ ಟೀಕೆಗೆ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ತಿರುಗೇಟು ನೀಡಿದ್ದಾರೆ. ಮೊಯಲಿ ಲಘುವಾಗಿ ಮಾತಾಡುವ ಮೂಲಕ ವಾಯುಪಡೆ ಮುಖ್ಯಸ್ಥರಿಗೆ ಅವಮಾನ ಮಾಡಿದ್ದಾರೆ. ಈ ನಿರಾಧಾರ ಆರೋಪಕ್ಕಾಗಿ ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ