ಆ್ಯಪ್ನಗರ

ಗುಜರಾತ್‌, ರಾಜಸ್ಥಾನ ಪ್ರವಾಹ ಪೀಡಿತರ ರಕ್ಷಣೆಗೆ ವಾಯುಪಡೆ ನೆರವು

ಗುಜರಾತ್‌ ಮತ್ತು ರಾಜಸ್ಥಾನದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭಾರತೀಯ ವಾಯುಪಡೆ ಬೃಹತ್‌ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

ಟೈಮ್ಸ್ ಆಫ್ ಇಂಡಿಯಾ 25 Jul 2017, 12:19 pm
ಹೊಸದಿಲ್ಲಿ: ಗುಜರಾತ್‌ ಮತ್ತು ರಾಜಸ್ಥಾನದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭಾರತೀಯ ವಾಯುಪಡೆ ಬೃಹತ್‌ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.
Vijaya Karnataka Web iaf launches rescue operations in gujarat rajasthan
ಗುಜರಾತ್‌, ರಾಜಸ್ಥಾನ ಪ್ರವಾಹ ಪೀಡಿತರ ರಕ್ಷಣೆಗೆ ವಾಯುಪಡೆ ನೆರವು


ಒಟ್ಟು ಐದು ಎಂಐ-17ವಿ5 ಹೆಲಿಕಾಪ್ಟರ್‌ಗಳನ್ನು ಸೇವೆಗೆ ನಿಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಎರಡು ಹೆಲಿಕಾಪ್ಟರ್‌ಗಳನ್ನು ಗುಜರಾತ್‌ನ ದೀಸಾದಿಂದ ಕಳುಹಿಸಲಾಗಿದ್ದರೆ, ಇನ್ನೆರಡು ಹೆಲಿಕಾಪ್ಟರ್‌ಗಳನ್ನು ರಾಜಸ್ಥಾನದ ಜೋಧ್‌ಪುರ ವಾಯುನೆಲೆಯಿಂದ ಕಳುಹಿಲಾಗಿದೆ.

ಸಂತ್ರಸ್ತರ ರಕ್ಷಣೆಗೆ ವಾಯುಪಡೆ ರಾಷ್ಟ್ರೀಯ ಪ್ರಕೃತಿ ವಿಕೋಪ ಸ್ಪಂದನಾ ಪಡೆಯ ಜತೆಗೆ ನಿಕಟವಾಗಿ ಕೆಲಸ ಮಾಡುತ್ತಿದೆ.

ಇನ್ನೂ ಒಂದು ಹೆಲಿಕಾಪ್ಟರ್‌ ಅನ್ನು ಔಷಧ, ಆಹಾರದ ಪೊಟ್ಟಣಗಳು ಮತ್ತು ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆಯ ಸಿಬ್ಬಂದಿಗಳ ರವಾನೆಗೆ ನಿಯೋಜಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುಜರಾತ್ ಹಾಗೂ ರಾಜಸ್ಥಾನದ ಹಲವು ಭಾಗಗಳು ತೀವ್ರ ಪ್ರವಾಹಕ್ಕೆ ತುತ್ತಾಗಿವೆ.

IAF launches rescue operations in Gujarat, Rajasthan

NEW DELHI: The Indian Air Force (IAF) on Tuesday started massive aerial relief and rescue operations in the flood affected regions of Gujarat and Rajasthan.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ