ಆ್ಯಪ್ನಗರ

ರಫೇಲ್‌ ಸ್ವಾಗತಕ್ಕೆ ಸದ್ದಿಲ್ಲದೆ ಐಎಎಫ್‌ ಸಿದ್ಧತೆ

ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನಗಳ ಆಮದು ಸನ್ನಿಹಿತವಾದ ಬೆನ್ನಲ್ಲೇ, ಹೊಸ ವಿಮಾನಗಳನ್ನು ಸ್ವಾಗತಿಸಲು ವಾಯುಪಡೆ ಸದ್ದಿಲ್ಲದೆ ಸಿದ್ಧತೆ ಆರಂಭಿಸಿದೆ.

Vijaya Karnataka Web 9 Sep 2018, 9:26 pm
ಹೊಸದಿಲ್ಲಿ: ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನಗಳ ಆಮದು ಸನ್ನಿಹಿತವಾದ ಬೆನ್ನಲ್ಲೇ, ಹೊಸ ವಿಮಾನಗಳನ್ನು ಸ್ವಾಗತಿಸಲು ವಾಯುಪಡೆ ಸದ್ದಿಲ್ಲದೆ ಸಿದ್ಧತೆ ಆರಂಭಿಸಿದೆ.
Vijaya Karnataka Web Rafale


ರಫೇಲ್‌ ಯುದ್ಧ ವಿಮಾನಕ್ಕೆ ಬೇಕಾದ ಮೂಲಸೌಕರ್ಯ ಸೃಷ್ಟಿ, ಪೈಲಟ್‌ಗಳ ತರಬೇತಿ ಸೇರಿದಂತೆ ಹಲವು ಸಿದ್ಧತೆಗಳನ್ನು ಶುರು ಮಾಡಲಾಗಿದೆ. ವಿಶೇಷ ತರಬೇತಿಗಾಗಿ ವರ್ಷಾಂತ್ಯಕ್ಕೆ ಪೈಲಟ್‌ಗಳ ತಂಡವೊಂದನ್ನು ಫ್ರಾನ್ಸ್‌ಗೆ ಕಳುಹಿಸಲೂ ಐಎಎಫ್‌ ನಿರ್ಧರಿಸಿದೆ. ಈಗಾಗಲೇ ವಾಯುಪಡೆಯ ಹಲವು ತಂಡಗಳು ಫ್ರಾನ್ಸ್‌ಗೆ ಭೇಟಿ ನೀಡಿ, ರಫೇಲ್‌ ಯುದ್ಧ ವಿಮಾನದಲ್ಲಿ ಭಾರತಕ್ಕೆ ಬೇಕಾದ ಅಗತ್ಯಗಳ ಬಗ್ಗೆ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್‌ ಏವಿಯೇಷನ್‌ಗೆ ಮಾಹಿತಿ ನೀಡಿವೆ.

2016ರ ಸೆಪ್ಟೆಂಬರ್‌ನಲ್ಲಿ 58,000 ಕೋಟಿ ರೂ. ವೆಚ್ಚದಲ್ಲಿ 36 ರಫೇಲ್‌ ಯುದ್ಧ ವಿಮಾನಗಳ ಪೂರೈಕೆಗಾಗಿ ಭಾರತ ಫ್ರಾನ್ಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತಕ್ಕೆ ರಫ್ತಾಗಲಿರುವ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಫೇಲ್‌ ಯುದ್ಧವಿಮಾನಗಳ ಪ್ರಾಯೋಗಿಕ ಹಾರಾಟವನ್ನೂ ಡಸಾಲ್ಟ್‌ ಏವಿಯೇಷನ್‌ ಈಗಾಗಲೇ ಆರಂಭಿಸಿದ್ದು, 2019ರ ಸೆಪ್ಟೆಂಬರ್‌ ಅಂತ್ಯದೊಳಗೆ ಮೊದಲ ವಿಮಾನ ಪೂರೈಕೆಯಾಗಲಿದೆ.

ಭಾರತದ ಬೇಡಿಕೆಗೆ ಅನುಗುಣವಾಗಿ ಇಸ್ರೇಲಿ ಹೆಲ್ಮೆಟ್‌ ಮೌಂಟೆಡ್‌ ಡಿಸ್ಪ್ಲೇ, ರೆಡಾರ್‌ ವಾರ್ನಿಂಗ್‌, ಲೋ ಬ್ಯಾಂಡ್‌ ಜಾಮರ್‌, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇನ್ಫ್ರಾರೆಡ್‌ ಶೋಧ ಮತ್ತು ಟ್ರ್ಯಾಕಿಂಗ್‌ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು ರಫೇಲ್‌ ಯುದ್ಧವಿಮಾನದಲ್ಲಿ ಫ್ರಾನ್ಸ್‌ ಅಳವಡಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ