ಆ್ಯಪ್ನಗರ

ಆಗಸ್ಟ್‌ 15ರೊಳಗೆ ಬರಲಿದೆ ದೇಶೀಯ ಕೊರೊನಾ ವ್ಯಾಕ್ಸಿನ್‌! ಐಸಿಎಂಆರ್‌ ಅಭಯ!

ಮಿಂಚಿನಂತೆ ಹರಡುತ್ತಿರುವ ಕೊರೊನಾ ವೈರಸ್‌ಗೆ 'ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಶೀಘ್ರದಲ್ಲೇ ಕೊರೊನಾ ಲಸಿಕೆ ಹೊರತರುವುದಾಗಿ ಹೇಳಿರುವುದು, ಎಲ್ಲರಲ್ಲೂ ಆಶಾಭಾವನೆ ಮೂಡಿಸಿದೆ.

Vijaya Karnataka Web 3 Jul 2020, 4:44 pm
ಹೊಸದಿಲ್ಲಿ: ಮಿಂಚಿನಂತೆ ಹರಡುತ್ತಿರುವ ಕೊರೊನಾ ವೈರಸ್‌ಗೆ ಚಿಕಿತ್ಸೆ ಇಲ್ಲದೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ 'ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಶೀಘ್ರದಲ್ಲೇ ಕೊರೊನಾ ಲಸಿಕೆ ಹೊರತರುವುದಾಗಿ ಹೇಳಿರುವುದು ಎಲ್ಲರಲ್ಲೂ ಆಶಾಭಾವನೆ ಮೂಡಿಸಿದೆ.
Vijaya Karnataka Web coronavirus vaccine


ಆಗಸ್ಟ್‌ 15ರ ಒಳಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕೋವಿಡ್‌-19 ವ್ಯಾಕ್ಸಿನ್‌ ಅನ್ನು ಹೊರತರುವ ಗುರಿ ಹೊಂದಿರುವುದಾಗಿ ಐಸಿಎಂಆರ್‌ ತಿಳಿಸಿದೆ. ಇದಕ್ಕಾಗಿ ಕೆಲವು ವೈದ್ಯಕಿಯ ಸಂಸ್ಥೆಗಳಲ್ಲಿ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗ ನಡೆಸಲು ಮುಂದಾಗಿದೆ. ಭಾರತ್ ಬಯೋಟೆಕ್‌ ಸಂಶೋಧನಾ ಸಂಸ್ಥೆ ಸಹಭಾಗಿತ್ವದಲ್ಲಿ ಕೊರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್‌ ನಡೆಯಲಿದೆ.


ಈಗಾಗಲೇ ದೇಶಾದ್ಯಂತ ಕ್ಲಿನಿಕಲ್‌ ಟ್ರಯಲ್‌ ನಡೆಸಬಹುದಾದ 12 ತಣಗಳನ್ನು ಗುರುತಿಸಲಾಗಿದೆ. ಜುಲೈ 7ರೊಳಗೆ ಕ್ಲಿನಿಕಲ್‌ ಟ್ರಯಲ್‌ಗೆ ಒಳಗಾಗುವವರ ನೋಂದಣಿಗೆ ತಿಳಿಸಲಾಗಿದೆ. ಜುಲೈ 7ರ ನಂತರ ನೋಂದಣಿ ಮಾಡುವಂತಿಲ್ಲ ಎಂದು ಐಸಿಎಂಆರ್‌ ತಿಳಿಸಿದೆ.

ಕರಾವಳಿಯಲ್ಲಿ ಉತ್ತಮ ಮಳೆ: ಜು.5ರವರೆಗೆ ಆರೆಂಜ್‌ ಅಲರ್ಟ್‌ ಘೋಷಣೆ!

ಹಲವು ಔಷಧಗಳು ಕೊರೊನಾ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿವೆ ಎನ್ನಲಾಗಿದ್ದು, ಅವುಗಳ ಬಳಕೆಗೆ ಅವಕಾಶ ನೀಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಆಗಸ್ಟ್ 15 ರಂದು ಭಾರತೀಯ ಕೊರೊನಾ ತಡೆ ಔಷಧಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ

ಐಸಿಎಂಆರ್, ಭಾರತ್ ಬಯೋಟೆಕ್ ವತಿಯಿಂದ ಕೊರೋನಾಗೆ ಔಷಧ ಬಿಡುಗಡೆ ಮಾಡಲಾಗುವುದು. ಕೋವಿಡ್ -19 ವ್ಯಾಕ್ಸಿನ್ ಹೆಸರಿನ ಔಷಧವನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲಾಗುವುದು. ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ನೀಡಿರುವ ಮಾಹಿತಿಯಂತೆ, ಆಗಸ್ಟ್ 15 ರೊಳಗೆ ಕೋವಿಡ್-19 ಲಸಿಕೆ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ತ್ವರಿತಗತಿಯಲ್ಲಿ ಕ್ಲಿನಿಕಲ್‌ ಪ್ರಯೋಗಗಳನ್ನು ನಡೆಸಿ ಲಸಿಕೆ ಸಿದ್ಧಪಡಿಸಲಾಗಿದ್ದು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಮಾನವರ ಮೇಲೆ ಪ್ರಯೋಗವಾಗಲಿದೆ ಕೊರೊನಾ ವ್ಯಾಕ್ಸೀನ್‌: ಬ್ರಿಟ‌ನ್‌ ಸರಕಾರ

ಏನಿದು ಭಾರತ್‌ ಬಯೋಟೆಕ್‌?
ಹೈದರಾಬಾದ್ ಮೂಲದ ಭಾರತ್-ಬಯೋಟೆಕ್ ಎಂಬ ಫಾರ್ಮಸಿ ಕಂಪನಿ 'ಕೊರೊಫ್ಲೂ' ಎಂದು ಕರೆಯಲ್ಪಡುವ ಕೊರೊನಾವೈರಸ್ ಕಾಯಿಲೆ (ಕೋವಿಡ್ -19) ವಿರುದ್ಧ ‘ಇಂಟ್ರಾನಾಸಲ್’ ಎನ್ನುವ ಲಸಿಕೆ ಶೋಧಿಸುತ್ತಿದೆ. ಈಗಾಗಲೆ ಪ್ರಾಣಿಗಳ ಮೇಲೆ ಕ್ಲಿನಿಕಲ್‌ ಟ್ರಯಲ್ ಯಶಸ್ವಿಯಾಗಿದೆ. ಇನ್ನು ಮನುಷ್ಯರ ಮೇಲೆ ಕ್ಲಿನಿಕಲ್‌ ಟ್ರಯಲ್‌ ನಡೆಯಬೇಕಷ್ಟೇ.

ಪ್ರಸ್ತುತ ಮಾನವರಲ್ಲಿ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷೆ ಮಾಡಲಾಗುತ್ತದೆ. ಅಕ್ಟೋಬರ್ ವೇಳೆಗೆ ಮಾನವನ ಕ್ಲಿನಿಕಲ್ ಪ್ರಯೋಗಳು ಆಗಬಹದು 'ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಭಾರತ್ ಬಯೋಟೆಕ್‌ ಈಗಾಗಲೇ 19 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ಕೀರ್ತಿ ಹೊಂದಿದೆ. ಅತಿಸಾರ (ಭೇದಿ )ಕ್ಕೆ ರೊಟಾವ್ಯಾಕ್ ಎಂಬ ಲಸಿಕೆ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ತೃತೀಯ ರಾಷ್ಟ್ರಗಳ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಹೊಂದಿದೆ. ಜಿಕಾ ವೈರಸ್ ತಡೆಯುವ ಜಿಕಾವ್ಯಾಕ್ ಲಸಿಕೆ ಸಂಶೋಧಿಸಿದೆ. ಇದೇ ಅಲ್ಲದೆ, ಟೈಫಾಯಿಡ್ ಜ್ವರಕ್ಕೆ ಟೈಪರ್ ಟಿಸಿವಿ ಎಂಬ ಲಸಿಕೆಯನ್ನೂ ಮಾರುಕಟ್ಟೆಗೆ ಬಿಟ್ಟಿದೆ. ಚಿಕೂನ್‌ ಗುನ್ಯ ಲಸಿಕೆ ಸಿದ್ಧಪಡಿಸಿದೆ. ಇದೀಗ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ಗೆ ಲಸಿಕೆ ಶೋಧಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ