ಆ್ಯಪ್ನಗರ

ಮೆದುಳು ಜ್ವರ ಬಾಧಿತ ಮಕ್ಕಳಿದ್ದ ಐಸಿಯು ಛಾವಣಿ ಬಿರುಕು

ಶನಿವಾರವಷ್ಟೇ ಎಸ್‌ಕೆಎಂಸಿಎಚ್‌ ಸಮೀಪದ ಅರಣ್ಯಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ನೂರಾರು ಅಸ್ಥಿಪಂಜರಗಳು ಪತ್ತೆಯಾಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು.

Agencies 24 Jun 2019, 5:00 am
ಮುಜಪ್ಫರ್‌ಪುರ: ಮೆದುಳು ಜ್ವರ ಪೀಡಿತ ಮಕ್ಕಳು ದಾಖಲಾಗಿರುವ ಬಿಹಾರದ ಮುಜಪ್ಫರ್‌ಪುರದ ಶ್ರೀಕೃಷ್ಣ ಮೆಡಿಕಲ್‌ ಕಾಲೇಜಿನ ಮತ್ತು ಆಸ್ಪತ್ರೆಯ (ಎಸ್‌ಕೆಎಂಸಿಎಚ್‌) ಐಸಿಯು ವಾರ್ಡ್‌ನ ಚಾವಣಿ ಭಾನುವಾರ ಸುರಿದ ಮಳೆಗೆ ಬಿರುಕು ಬಿಟ್ಟಿದೆ. ಗೋಡೆಯಲ್ಲಿಯೂ ಸಣ್ಣಪುಟ್ಟ ಬಿರುಕುಗಳು ಕಾಣಿಸಿಕೊಂಡಿವೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆಯೂ ಮಕ್ಕಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಹಾರದ ಅತಿದೊಡ್ಡ ಸರಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಯ ಎಸ್‌ಕೆಎಂಸಿಎಚ್‌ನಲ್ಲಿ ಜೂನ್‌ 1ರಿಂದ ಸುಮಾರು 200ಕ್ಕೂ ಅಧಿಕ ಮಕ್ಕಳು ಮೆದುಳು ಜ್ವರಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 120 ಮಕ್ಕಳು ಜ್ವರದಿಂದ ಮೃತಪಟ್ಟಿದ್ದಾರೆ.
Vijaya Karnataka Web icu roof collapses at hospital in bihar hit by encephalitis deaths
ಮೆದುಳು ಜ್ವರ ಬಾಧಿತ ಮಕ್ಕಳಿದ್ದ ಐಸಿಯು ಛಾವಣಿ ಬಿರುಕು


ಶನಿವಾರವಷ್ಟೇ ಎಸ್‌ಕೆಎಂಸಿಎಚ್‌ ಸಮೀಪದ ಅರಣ್ಯಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ನೂರಾರು ಅಸ್ಥಿಪಂಜರಗಳು ಪತ್ತೆಯಾಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು.

ಮಕ್ಕಳ ಐಸಿಯುಗೆ 100 ಕೋಟಿ ರೂ. ಅನುದಾನ ಕೊಡಿ: ಮೆದುಳು ಜ್ವರದಿಂದ ಮಕ್ಕಳು ಮೃತಪಡುತ್ತಿರುವ ಆತಂಕದ ನಡುವೆಯೇ ನಿತೀಶ್‌ ಕುಮಾರ್‌ ನೇತೃತ್ವದ ರಾಜ್ಯ ಸರಕಾರವು ಕೇಂದ್ರದಿಂದ 100 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಟ್ಟಿದೆ. ಎಸ್‌ಕೆಸಿಎಂಎಚ್‌ನಲ್ಲಿ ಮಕ್ಕಳಿಗಾಗಿ 100 ಹಾಸಿಗೆಯುಳ್ಳ ಸುಸಜ್ಜಿತ ಐಸಿಯು ವಿಭಾಗ ನಿರ್ಮಿಸಲು ಅನುದಾನ ಒದಗಿಸುವಂತೆ ಮುಂಗಡಪತ್ರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಬಿಹಾರ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ