ಆ್ಯಪ್ನಗರ

ಗಂಡು, ಗಂಡನ್ನೇ ಮದುವೆಯಾದರೆ ಮಕ್ಕಳಾಗುತ್ತವೆಯೇ?: ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಶ್ನೆ

Nitish Kumar: ಪುರುಷನೊಬ್ಬ ಮತ್ತೊಬ್ಬ ಪುರುಷನನ್ನು ಮದುವೆಯಾದರೆ ಮಕ್ಕಳು ಜನಿಸುತ್ತವೆಯೇ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ. ವರದಕ್ಷಿಣೆ ಪಿಡುಗಿನ ವಿರುದ್ಧ ಕಿಡಿಕಾರಿರುವ ಅವರು, ವರದಕ್ಷಿಣೆಗಿಂತ ಕೆಟ್ಟದ್ದು ಬೇರೆ ಇಲ್ಲ ಎಂದಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 25 May 2022, 4:23 pm

ಹೈಲೈಟ್ಸ್‌:

  • ವರದಕ್ಷಿಣೆ ವ್ಯವಸ್ಥೆ ವಿರುದ್ಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಿಡಿ
  • ಮದುವೆಗೆ ವರದಕ್ಷಿಣೆ ಪಡೆಯುವುದಕ್ಕಿಂತ ಕೆಟ್ಟದ್ದು ಬೇರೊಂದಿಲ್ಲ ಎಂದ ನಿತೀಶ್
  • ಪುರುಷ, ಪುರುಷನನ್ನೇ ಮದುವೆಯಾದೆ ಮಕ್ಕಳು ಹುಟ್ಟುತ್ತವೆಯೇ? ಎಂದು ಪ್ರಶ್ನೆ
  • ಮದುವೆಯಾಗಿ ಮಕ್ಕಳನ್ನು ಪಡೆಯುತ್ತೀರಿ, ಮದುವೆಗೆ ವರದಕ್ಷಿಣೆ ಕೇಳುತ್ತೀರಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web if a man marries another man will there be childbirth asks bihar cm nitish kumar
ಗಂಡು, ಗಂಡನ್ನೇ ಮದುವೆಯಾದರೆ ಮಕ್ಕಳಾಗುತ್ತವೆಯೇ?: ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಶ್ನೆ
ಪಟ್ನಾ: ವರದಕ್ಷಿಣೆ ವಿರುದ್ಧ ಕಠಿಣ ಸಂದೇಶ ರವಾನಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, "ಪುರುಷನೊಬ್ಬ ಮತ್ತೊಬ್ಬ ಪುರುಷನನ್ನು ಮದುವೆಯಾದರೆ, ಮಗು ಹುಟ್ಟುತ್ತದೆಯೇ?" ಎಂಬ ಪ್ರಶ್ನೆ ಮೂಲಕ ಅನೇಕರ ಹುಬ್ಬೇರುವಂತೆ ಮಾಡಿದ್ದಾರೆ.
ಪಟ್ನಾದಲ್ಲಿ ಬಾಲಕಿಯರ ಹಾಸ್ಟೆಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಿತೀಶ್, ತಮ್ಮ ಸಮಯದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಲ್ಲಿ ಕೆಲವೇ ವಿದ್ಯಾರ್ಥಿನಿಯರು ಕಲಿಯುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. "ಇದು ಬಹಳ ಬೇಸರದ ಸಂಗತಿ. ಯಾರಾದರೂ ಒಬ್ಬ ಹುಡುಗಿ ಕೋರ್ಸ್‌ಗೆ ಪ್ರವೇಶ ಪಡೆದರೆ ಸಾಕು, ಎಲ್ಲರ ಕಣ್ಣುಗಳೂ ಆಕೆಯ ಮೇಲೆ ದಿಟ್ಟಿಸಿರುತ್ತಿದ್ದವು" ಎಂದು ತಮಾಷೆಯಾಗಿ ಹೇಳಿದ್ದಾರೆ.
ಯಾರದ್ದೋ ಅಭಿಪ್ರಾಯ ನಮಗೆ ಮುಖ್ಯವಲ್ಲ! ಪ್ರಶಾಂತ್‌ ಕಿಶೋರ್‌ ವಿರುದ್ಧ ನಿತೀಶ್‌ ಕುಮಾರ್‌ ಕಿಡಿ

"ಆದರೆ ಈಗ ಅನೇಕ ಯುವತಿಯರು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ" ಎಂದು ಅವರು ಹೇಳಿದ್ದಾರೆ.

"ಮಹಿಳೆಯರ ಬೇಡಿಕೆ ಮೇರೆಗೆ ನಮ್ಮ ಸರ್ಕಾರ ಆಲ್ಕೋಹಾಲ್ ಸೇವನೆಯನ್ನು ನಿಷೇಧಿಸಿದೆ. ವರದಕ್ಷಿಣೆ ಪದ್ಧತಿ ಮತ್ತು ಬಾಲ್ಯ ವಿವಾಹದ ವಿರುದ್ಧ ಆಂದೋಲನಗಳನ್ನು ಕೂಡ ಆರಂಭಿಸಿದ್ದೇವೆ" ಎಂದು ತಿಳಿಸಿದ್ದಾರೆ.


"ಮದುವೆಗಾಗಿ ವರದಕ್ಷಿಣೆ ಪಡೆದುಕೊಳ್ಳುವುದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ. ನೀವು ಮದುವೆಯಾದರೆ ಮಾತ್ರ ಮಕ್ಕಳನ್ನು ಪಡೆಯುತ್ತೀರಿ. ಇಲ್ಲಿರುವ ನೀವೆಲ್ಲರೂ, ನಾವೆಲ್ಲರೂ ತಾಯಂದಿರಿಗೆ ಜನಿಸಿದವರು. ಪುರುಷನೊಬ್ಬ ಮತ್ತೊಬ್ಬ ಪುರುಷನನ್ನು ಮದುವೆಯಾದರೆ ಯಾರಾದರೂ ಹುಟ್ಟುತ್ತಾರೆಯೇ?" ಎಂದು ಕೇಳಿದ್ದಾರೆ.
ನಿತೀಶ್‌-ತೇಜಸ್ವಿ ಮತ್ತೆ ಇಫ್ತಾರ್‌ ಕೂಟದಲ್ಲಿ ಭಾಗಿ : ರಾಜಕೀಯ ವದಂತಿಗೆ ರೆಕ್ಕೆಪುಕ್ಕ

"ಹೀಗಾಗಿ ನೀವು ಮದುವೆಯಾಗುತ್ತೀರಿ ಮತ್ತು ಮಕ್ಕಳನ್ನು ಪಡೆಯುತ್ತೀರಿ. ಮದುವೆಯಾಗಲು ವರದಕ್ಷಿಣೆ ಕೇಳುತ್ತೀರಿ. ಇದಕ್ಕಿಂತಲೂ ಕೆಟ್ಟ ಸಂಗತಿ ಬೇರೊಂದಿಲ್ಲ" ಎಂದಿದ್ದಾರೆ.

ತಾವು ಯಾವುದೇ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ಗಂಡಿನ ಕಡೆಯವರು ಘೋಷಣೆ ಮಾಡಿದ್ದರೆ ಮಾತ್ರ ತಾವು ಆ ಮದುವೆಯಲ್ಲಿ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. "ನಾವು ವರದಕ್ಷಿಣೆ ಪಡೆದುಕೊಂಡಿಲ್ಲ ಎಂದು ಬರಹದಲ್ಲಿ ಖಚಿತಪಡಿಸಿದರೆ ಮಾತ್ರ ನಾವು ಆ ಮದುವೆಗೆ ಹಾಜರಾಗುತ್ತೇವೆ. ಇದನ್ನು ಎಲ್ಲರಿಗೂ ಹೇಳಿದ್ದೇನೆ" ಎಂದು ಹೇಳಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ