ಆ್ಯಪ್ನಗರ

ಬಿಜೆಪಿ ಅಧಿಕಾರಕ್ಕೆ ಬಂದರೆ ಬುರ್ಖಾ, ಟೋಪಿ ನಿರ್ಬಂಧ; ಅಸ್ಸಾಂ ಸಂಸದ ವಿವಾದಿತ ಹೇಳಿಕೆ

​​ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು '' ರಾಜ್ಯದಲ್ಲಿ ಕೂಡ ಆಡಳಿತಾರೂಢ ಬಿಜೆಪಿ ಪಕ್ಷ ಮುಸ್ಲಿಮರ ವಿರುದ್ಧವಿದೆ. ನಮ್ಮ ಪದ್ಧತಿಗಳಿಗೆ ನಿರ್ಬಂಧ ಹೇರಿದರೆ ಅದರಂತೆ ನಾವು ಬದುಕಲು ಸಾಧ್ಯವೇ?'' ಎಂದು ಪ್ರಶ್ನಿಸಿದ್ದಾರೆ.

Vijaya Karnataka Web 22 Jan 2021, 10:24 pm
ಗುವಾಹಟಿ: ಕೇಂದ್ರದಲ್ಲಿ ಮತ್ತೊಂದು ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಬುರ್ಖಾ, ಟೋಪಿ, ದಾಡಿ ಮತ್ತು ಆಝಾನ್‌ಗೆ ನಿರ್ಬಂಧ ಹೇರಲಿದೆ ಎಂದು ಅಸ್ಸಾಂ ಸಂಸದ ಹಾಗೂ ಅಖಿಲ ಭಾರತ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಐಯುಡಿಎಫ್‌) ಅಧ್ಯಕ್ಷ ಮೌಲಾನಾ ಬದ್ರುದ್ದೀನ್‌ ಅಜ್ಮಲ್‌ ಹೇಳಿದ್ದಾರೆ.
Vijaya Karnataka Web ಸಂಸದ ಬದ್ರುದ್ದೀನ್‌ ಅಜ್ಮಲ್‌
ಸಂಸದ ಬದ್ರುದ್ದೀನ್‌ ಅಜ್ಮಲ್‌


ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು '' ರಾಜ್ಯದಲ್ಲಿ ಕೂಡ ಆಡಳಿತಾರೂಢ ಬಿಜೆಪಿ ಪಕ್ಷ ಮುಸ್ಲಿಮರ ವಿರುದ್ಧವಿದೆ. ನಮ್ಮ ಪದ್ಧತಿಗಳಿಗೆ ನಿರ್ಬಂಧ ಹೇರಿದರೆ ಅದರಂತೆ ನಾವು ಬದುಕಲು ಸಾಧ್ಯವೇ?'' ಎಂದು ಪ್ರಶ್ನಿಸಿದ್ದಾರೆ.

ಇಂತಹ ಪ್ರಚೋದನಾಕಾರಿ ಹೇಳಿಕೆ ಮೂಲಕ ಅವರು ಮುಂಬರುವ ಏಪ್ರಿಲ್‌- ಮೇನಲ್ಲಿ ನಡೆಯುವ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಮತಗಳ ಧ್ರುವೀಕರಣಕ್ಕೆ ಯತ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ