ಆ್ಯಪ್ನಗರ

ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ: '10 ರಾಜ್ಯಗಳಲ್ಲಿ ಕೊರೊನಾವನ್ನು ಮಣಿಸಿದರೆ ದೇಶವೇ ಗೆದ್ದಂತೆ'!

ಶೇ.80ರಷ್ಟು ಪಾಲು ಕೊರೊನಾ ಪ್ರಕರಣಗಳನ್ನು ಹೊಂದಿರುವ ಹತ್ತು ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಸರಣ ನಿಯಂತ್ರಿ­ಸಿದರೆ ಕೋವಿಡ್‌­ -19 ವಿರುದ್ಧದ ಸಮರದಲ್ಲಿಇಡೀ ದೇಶ ಗೆದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ­ಪಟ್ಟಿದ್ದಾರೆ.

Vijaya Karnataka Web 12 Aug 2020, 7:43 am
ಹೊಸದಿಲ್ಲಿ: ದೇಶದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ ಶೇ.80ರಷ್ಟು ಪಾಲು ಹೊಂದಿರುವ ಹತ್ತು ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಸರಣ ನಿಯಂತ್ರಿ­ಸಿದರೆ ಕೋವಿಡ್‌­ -19 ವಿರುದ್ಧದ ಸಮರದಲ್ಲಿಇಡೀ ದೇಶ ಗೆದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ­ಪಟ್ಟಿದ್ದಾರೆ.
Vijaya Karnataka Web 59027856


ಹೆಚ್ಚು ಕೊರೊನಾ ಸೋಂಕಿ­ತರನ್ನು ಹೊಂದಿ­ರುವ ಕರ್ನಾಟಕ, ಆಂಧ್ರ­ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್‌, ಬಿಹಾರ, ಗುಜರಾತ್‌, ತೆಲಂಗಾಣ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಜತೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ಸಂವಾದ ನಡೆಸಿದರು.

''ಕೊರೊನಾ ನಿಯಂತ್ರಣದ ವಿಚಾರ­ದಲ್ಲಿ ಪ್ರತಿ ರಾಜ್ಯವೂ ಗರಿಷ್ಠ ಸಹಕಾರ ನೀಡಿದೆ. ಇದು ಟೀಮ್‌ ಇಂಡಿಯಾದ ಪ್ರದರ್ಶನ. ಆಸ್ಪತ್ರೆಗಳು ಮತ್ತು ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಸವಾ­ಲುಗಳು ಮತ್ತು ಒತ್ತಡಗಳನ್ನು ನಾವು ಈ ವೇಳೆ ಗಮನಿಸಬೇಕು. ಸೋಂಕು ನಿಯಂತ್ರಣದಲ್ಲಿ ಕಂಟೈನ್‌ಮೆಂಟ್‌, ಸಂಪರ್ಕ ಪತ್ತೆ ಮತ್ತು ಕಣ್ಗಾವಲು ಅತ್ಯಂತ ಪರಿಣಾಮಕಾರಿ ಅಸ್ತ್ರಗಳಾಗಿವೆ. ಈ ಸೂತ್ರ­ಗಳನ್ನು ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸ­ಬೇಕು,'' ಎಂದು ಸಲಹೆ ಮಾಡಿದರು.

ದಿನನಿತ್ಯ ಸೋಂಕಿತರ ಪತ್ತೆಗಾಗಿ ನಡೆಸಲಾಗುವ ಪರೀಕ್ಷೆಗಳ ಸಂಖ್ಯೆ ಸುಮಾರು 7 ಲಕ್ಷ ತಲುಪಿದೆ. ತಪಾಸಣೆ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದು ರೋಗವನ್ನು ಆರಂಭದಲ್ಲೇ ಗುರುತಿಸಲು ಮತ್ತು ನಿಯಂತ್ರಿಸಲು ನೆರವಾಗಿದೆ. ವಿಶ್ವದಲ್ಲೇ ಅತೀ ಕಡಿಮೆ ಸರಾಸರಿ ಮರಣ ಪ್ರಮಾಣ ಇರುವುದು ಭಾರತದಲ್ಲಿ ಮಾತ್ರ ಎನ್ನುವುದು ಸಮಾಧಾನಕರ ಸಂಗತಿ.

ಕೊರೊನಾ ಎಫೆಕ್ಟ್‌: ಪ್ರಯಾಣಿಕ ರೈಲು ಸಂಚಾರ ಸದ್ಯಕ್ಕಿಲ್ಲ ಎಂದ ಇಲಾಖೆ!
ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಮರಣ ಪ್ರಮಾಣವನ್ನು ಶೇ.1 ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಶೀಘ್ರದಲ್ಲೇ ಸಾಧಿಸಬಹುದು,'' ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ