ಆ್ಯಪ್ನಗರ

ಭವಿಷ್ಯದ ಅಯೋಧ್ಯೆ ಮಸೀದಿ ಮತ್ತು ಆಸ್ಪತ್ರೆಯ ಮುನ್ನೋಟ: ಯಾವುದೇ ಚಕ್ರವರ್ತಿ ಹೆಸರಿಡದಿರಲು ನಿರ್ಧಾರ!

ಕಳೆದ ವರ್ಷದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ಅನ್ವಯ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್, ಈ ಯೋಜನೆಯ ಮೊದಲ ವಾಸ್ತುಶಿಲ್ಪ ಯೋಜನೆಯನ್ನು ಬಿಡುಗಡೆ ಮಾಡಿದೆ.

Vijaya Karnataka Web 20 Dec 2020, 7:08 am
ಲಖನೌ: ಕಳೆದ ವರ್ಷದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ಅನ್ವಯ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್, ಈ ಯೋಜನೆಯ ಮೊದಲ ವಾಸ್ತುಶಿಲ್ಪ ಯೋಜನೆಯನ್ನು ಬಿಡುಗಡೆ ಮಾಡಿದೆ.
Vijaya Karnataka Web ayodhya mosque
ಉದ್ದೇಶಿತ ಅಯೋಧ್ಯೆ ಮಸೀದಿಯ ವಾಸ್ತುಶಿಲ್ಪ


ಯೋಜನೆಯ ಮೊದಲ ಹಂತದಲ್ಲಿ ಭವ್ಯ ಮಸೀದಿ ಹಾಗೂ ವಿಶಾಲ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಎರಡನೇ ಹಂತದಲ್ಲಿ ಆಸ್ಪತ್ರೆಯನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಸ್ಪಷ್ಟಪಡಿಸಿದೆ.

ಮುಂದಿನ ವರ್ಷ ಅಯೋಧ್ಯಾ ಮಸೀದಿ ಹಾಗೂ ಆಸ್ಪತ್ರೆಯ ಅಡಿಪಾಯ ಸಮಾರಂಭ ಏರ್ಪಡಿಸುವ ಯೋಜನೆಯಿದ್ದು, ಶೀಘ್ರದಲ್ಲೇ ಈ ಮಸೀದಿಯ ಹೆಸರನ್ನೂ ನಿರ್ಧರಿಸಲಾಗುವುದು ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಮಾಹಿತಿ ನೀಡಿದೆ.

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯಷ್ಟೇ ದೊಡ್ಡ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್‌ ಮಂಡಳಿ ನಿರ್ಧಾರ

ಮಸೀದಿಗೆ ಭಾರತದ ಮಧ್ಯಕಾಲೀನ ಇತಿಹಾಸದ ಯಾವುದೇ ದೊರೆಯ ಹೆಸರಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್, ಈ ಕುರಿತು ಚರ್ಚೆ ನಡೆಸಿ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದೆ.


ಐದು ಎಕರೆ ಜಾಗದ ಕಟ್ಟಡ ಯೋಜನೆಯನ್ನು ಲಖನೌದ ಐಐಸಿಎಫ್ ಟ್ರಸ್ಟ್ ಕಚೇರಿಯಲ್ಲಿ ಪ್ರಾಧ್ಯಾಪಕ ಎಸ್.ಎಂ. ಅಖ್ತರ್ ಬಿಡುಗಡೆಗೊಳಿಸಿದರು. ಈ ವಿನ್ಯಾಸ ಪ್ರಪಂಚದಾದ್ಯಂತ ಇರುವ ಮಸೀದಿಗಳ ಆಧುನಿಕ ವಾಸ್ತುಶಿಲ್ಪವನ್ನು ಪ್ರತಿಧ್ವನಿಸುತ್ತದೆ ಎಂದು ಐಐಸಿಎಫ್ ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಅಯೋಧ್ಯಾ ಬಾಬ್ರಿ ಮಸೀದಿ ಪ್ರಕರಣದ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಮಕೋರ್ಟ್, ವಿವಾದಾತ್ಮಕ ಭೂಮಿಯನ್ನು ರಾಮ ಜನ್ಮಭೂಮಿ ಟ್ರಸ್ಟ್‌ಗೆ ವಹಿಸಿ ಆದೇಶ ನೀಡಿತ್ತು. ಅಲ್ಲದೇ ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಜಾಗ ನೀಡಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ತಿಳಿಸಿತ್ತು.

ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ: ಮಂದಿರ ನಿರ್ಮಾಣದತ್ತ ದೇಶದ ಚಿತ್ತ!

ಅದರಂತೆ ಅಯೋಧ್ಯೆ ಸಮೀಪದ ಧನ್ನಿಪುರ್‌ನಲ್ಲಿ ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಐದು ಎಕರೆ ಜಾಗವನ್ನು ಮಂಜೂರು ಮಾಡಿದೆ.

ಪ್ರಧಾನಿ ಮೋದಿ ಕಳೆದ ಆಗಸ್ಟ್ 5ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕಾಗಿ ಶಿಲಾನ್ಯಾಸ ನೆರವೇರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ