ಆ್ಯಪ್ನಗರ

ಅನುಕಂಪದ ಆಧಾರದಲ್ಲಿ ಸರಕಾರಿ ನೌಕರಿ ಪಡೆಯಲು ಅಕ್ರಮ ಸಂತಾನಕ್ಕಿಲ್ಲ ಹಕ್ಕು: ಮದ್ರಾಸ್ ಹೈಕೋರ್ಟ್

ಸರಕಾರಿ ನೌಕರರ 'ಅಕ್ರಮ ಸಂತಾನ'ಕ್ಕೆ, ಕರುಣೆಯ ಆಧಾರದ ಮೇಲೆ ತಂದೆಯ ಕೆಲಸ ಕೇಳುವ ಹಕ್ಕಿಲ್ಲವೆಂದು ಮದ್ರಾಸ್ ಹೈ ಕೋರ್ಟ್ ಗುರುವಾರ ತೀರ್ಪು ನೀಡಿದೆ.

ಏಜೆನ್ಸೀಸ್ 26 May 2016, 7:54 pm
ಚೆನ್ನೈ: ಸರಕಾರಿ ನೌಕರರ 'ಅಕ್ರಮ ಸಂತಾನ'ಕ್ಕೆ, ಅನುಕಂಪ ಆಧಾರದ ಮೇಲೆ ತಂದೆಯ ಕೆಲಸ ಕೇಳುವ ಹಕ್ಕಿಲ್ಲವೆಂದು ಮದ್ರಾಸ್ ಹೈ ಕೋರ್ಟ್ ಗುರುವಾರ ತೀರ್ಪು ನೀಡಿದೆ.
Vijaya Karnataka Web illegitimate children cant claim jobs on compassionate grounds madras hc
ಅನುಕಂಪದ ಆಧಾರದಲ್ಲಿ ಸರಕಾರಿ ನೌಕರಿ ಪಡೆಯಲು ಅಕ್ರಮ ಸಂತಾನಕ್ಕಿಲ್ಲ ಹಕ್ಕು: ಮದ್ರಾಸ್ ಹೈಕೋರ್ಟ್


'ತಂದೆಯ ಆಸ್ತಿ ಪಡೆಯಲು ಈ ಮಕ್ಕಳು ಅರ್ಹರಾಗಿರುತ್ತಾರೆಯೇ ಹೊರತು, ತಂದೆಯ ಸರಕಾರಿ ನೌಕರಿ ಪಡೆಯಲಲ್ಲ,' ಎಂದು ನ್ಯಾ.ಪುಷ್ಪಾ ಸತ್ಯನಾರಾಯಣ್ ಹೇಳಿದ್ದಾರೆ.

'ಕಾನೂನಿನಲ್ಲಿ ಏಕ ಪತ್ನಿತ್ವಕ್ಕೆ ಮಾತ್ರ ಅವಕಾಶವಿದ್ದು, ಇದನ್ನು ಕೋರ್ಟ್ ಮುಂದೆ ಪ್ರಶ್ನಿಸಲು ಸಾಧ್ಯವಿಲ್ಲ. ಎರಡನೇ ಮದುವೆಯನ್ನೇ ಕಾನೂನು ನಿಷೇಧಿಸಿದ್ದರಿಂದ, ಆ ಮದುವೆಯಿಂದ ಹುಟ್ಟಿದ ಸಂತಾನಕ್ಕೆ ಅನುಕಂಪಗ ಆಧಾರದ ಮೇಲೆ ಸರಕಾರ ಉದ್ಯೋಗಕ್ಕೆ ನೇಮಿಸಿಕೊಳ್ಳಲು ಸಾಧ್ಯವಿಲ್ಲ,' ಎಂದು ಕೋರ್ಟ್ ಹೇಳಿದೆ.

'ಸಂಬಂಧಿಸಿದ ಸಂಸ್ಥೆ, ವಿಶೇಷ ಕಾನೂನಿನಡಿಯಲ್ಲಿ ಎರಡನೇ ಮದುವೆಯನ್ನು ಪುರಸ್ಕರಿಸದ ಹೊರತು, ಅವರಿಗೆ ಹುಟ್ಟಿದ ಮಕ್ಕಳು ತಂದೆಯ ಸರಕಾರಿ ನೌಕರಿ ಪಡೆಯಲು ಅರ್ಹರಾಗಿರುವುದಿಲ್ಲ,' ಎಂದು ಕೋರ್ಟ್ ಹೇಳಿದೆ.


ಪ್ರಕರಣದ ಹಿನ್ನೆಲೆ ಏನು?:

ಎಂ.ಮುತ್ತುರಾಜ್ ಮೃತ ಸಬ್ ಇನ್ಸ್‌ಪೆಕ್ಟರ್‌ ಮಲೈಪ್ಪನ್ ಎರಡನೇ ಹೆಂಡತಿಯ ಮಗ. ಸೇವೆಯಲ್ಲಿರುವಾಗೇ ಮಲೈಪ್ಪನ್ ನಿಧನರಾಗಿದ್ದರು. ತಂದೆ ಕೆಲಸ ನೀಡಬೇಕೆಂದು ಆಗ್ರಹಿಸಿ ಮುತ್ತುರಾಜ್ ಅರ್ಜಿ ಸಲ್ಲಿಸಿದ್ದು, ತಿರಸ್ಕೃತವಾಗಿತ್ತು.

ಪತ್ನಿ ಸರೋಜಾ ಮಗು ಹೇರಲು ಅಸಮರ್ಥರೆಂಬ ಕಾರಣಕ್ಕೆ, ಆಕೆಯ ಸಹೋದರಿಯನ್ನೇ ಮಲೈಪ್ಪನ್ ವಿವಾಹವಾಗಿದ್ದರು. ಕುಟುಂಬದ ಎಲ್ಲರೂ ಜತೆಯಾಗಿಯೇ ವಾಸಿಸುತ್ತಿದ್ದರು. ಆದರೆ, ಅಪಘಾತದಲ್ಲಿ ತಂದೆ ಮೃತಪಟ್ಟಿದ್ದು, ಕುಟುಂಬಕ್ಕೆ ಬರ ಸಿಡಿಲಾಗಿ ಬಡಿಯಿತು. ತಂದೆಯ ಕೆಲಸ ನೀಡಬೇಕೆಂದು ಆಗ್ರಹಿಸಿ ಮುತ್ತುರಾಜ್ ಅರ್ಜಿ ಸಲ್ಲಿಸಿದ್ದರು.

'ಅಕ್ರಮ ಸಂತಾನಕ್ಕೆ ತಂದೆಯ ಸರಕಾರಿ ನೌಕರಿ ಕೇಳುವ ಹಕ್ಕಿಲ್ಲ,' ಎಂದು ಜಿಲ್ಲಾ ವರಿಷ್ಠಾಧಿಕಾರಿ ಹೇಳಿದ್ದನ್ನು, ಪೋಲಿಸ್ ಮಹಾನಿರ್ದೇಶಕರೂ ಎತ್ತಿ ಹಿಡಿದಿದ್ದರು. ಮುತ್ತುರಾಜ್ ಇದನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ